ಮುಂಬೈ: ಇತ್ತೀಚಿಗೆ ಅನೇಕ ಸಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಬಡವರ ಪಾಲಿನ ದೈವ ಹಾಗೂ ರಿಯಲ್ ಹಿರೋ ಎಂಬ ಖ್ಯಾತಿಗೆ ಪಾತ್ರವಾಗಿರುವ ನಟ ಸೋನು ಸೂದ್ ರವರ ವಿರುದ್ದ ಮುಂಬೈ ಮಹಾನಗರ ಪಾಲಿಕೆ ಹೊರಿಸಿದ ಆರೋಪದ ಕುರಿತಂತೆ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಸೋನು ಸೂದ್ ತಿಳಿಸಿದ್ದಾರೆ.
ಇತ್ತೀಚಿಗೆ ನಟ ಸೋನು ಸೂದ್ ರವರ ಮೇಲೆ ಮುಂಬೈ ಮಹಾನಗರ ಪಾಲಿಕೆ ಅಕ್ರಮವಾಗಿ ಕಾನೂನು ಬಾಹಿರವಾಗಿ ಹೋಟೆಲ್ವೊಂದನ್ನು ನಿರ್ಮಿಸಿದ್ದಾರೆ ಜೊತೆಗೆ ಅನೇಕ ಬಾರಿ ಇದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸರಣಿ ಅಪರಾಧಿ ಎಂಬ ಹೆಸರು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದೆ. ಮುಂಬೈನಲ್ಲಿನ ಸೋನು ಸೂದ್ ರವರು ತಮ್ಮ ವಸತಿ ನಿಲಯವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದು, ಹೋಟೆಲ್ ತೆರೆದಿದ್ದಾರೆ ಅದಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂಬುದು ಮುಂಬೈ ಮಹಾನಗರ ಪಾಲಿಕೆ ಆರೋಪವಾಗಿದೆ.
ಇನ್ನೂ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ಈ ಕುರಿತು ನಾನು ಕಾನೂನಾತ್ಮಕ ಹೋರಾಟ ನಡೆಸಲಿದ್ದು, ಕೋರ್ಟ್ ನೀಡುವ ತೀರ್ಪಿಗೆ ಬದ್ದನಾಗಿರುತ್ತೇನೆ ಎಂದು ಹೇಳಿದ್ದಾರೆ. ನನಗೆ ಮುಂಬೈ ಮಹಾನಗರ ಪಾಲಿಕೆ ಬಗ್ಗೆ ಬಹಳ ಗೌರವಿದ್ದು, ನಿಯಮಗಳಾನುಸಾರವೇ ನಡೆದುಕೊಂಡಿದ್ದೇ. ಒಂದು ವೇಳೆ ನನ್ನ ಕಡೆಯಿಂದ ತಪ್ಪಾಗಿದ್ದರೇ, ಆ ತಪ್ಪನ್ನು ತಿದ್ದಿಕೊಳ್ಳಲು ಸಹ ಸಿದ್ದವಾಗಿದ್ದೇನೆ. ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಕುರಿತಂತೆ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ನೀಡುವ ತೀರ್ಪನ್ನು ನಾನು ಪಾಲಿಸುತ್ತೇನೆ ಎಂದಿದ್ದಾರೆ.
ಇತ್ತೀಚಿಗಷ್ಟೆ ಇದೇ ಮುಂಬೈ ಮಹಾನಗರ ಪಾಲಿನ ನಟಿ ಕಂಗನಾ ರಾಣವತ್ ರವರ ಕಛೇರಿಯನ್ನು ಸಹ ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಧ್ವಂಸ ಗೊಳಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.
