Film News

ಸೋನು ಮೇಲೆ ಕೈ ಮಾಡಲ್ಲ ಎಂದು ಚಿರು ಹೇಳಿದ್ದಾದರೂ ಏಕೆ?

ಹೈದರಾಬಾದ್: ಕೊರೋನಾ ಲಾಕ್ ಡೌನ್ ವೇಳೆ ಸೇರಿದಂತೆ ಸಂಕಷ್ಟದಲ್ಲಿರುವ ಅನೇಕರಿಗೆ ತನ್ನ ಆಸ್ತಿಯನ್ನು ಗಿರವೆ ಇಟ್ಟು ಸಹಾಯ ಮಾಡುತ್ತಿರುವ ಖಳನಾಯಕ ಸೋನು ಸೂದ್ ಮೇಲೆ ಮೆಗಾಸ್ಟಾರ್ ಚಿರಂಜೀವಿ ಕೈ ಮಾಡಲ್ಲ ಎಂದಿದ್ದಾರೆ.

ಹೌದು ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಬಣ್ಣ ಹಚ್ಚಲಿರುವುದು ಇದೇ ಸೋನು ಸೂದ್ ರವರು. ಈ ಕುರಿತು ಸೋನು ಸೂದ್ ರವರೇ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ಮಾತನಾಡಿರುವ ಸೋನು ಸಿನೆಮಾದಲ್ಲಿ ನಾವೊಂದು ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವು. ಆಗ ಚಿರಂಜೀವಿ ರವರು, ನೀವು ಈ ಸಿನೆಮಾದಲ್ಲಿ ನಟಿಸುತ್ತಿರುವುದು ನಮಗೆ ದೊಡ್ಡ ಸಮಸ್ಯೆ ಎದುರಾಗಿದೆ. ಏಕೆಂದರೇ ನಾನು ನಿಮ್ಮನ್ನು ಪೈಟಿಂಗ್ ದೃಶ್ಯಗಳಲ್ಲಿ ಹೊಡೆಯುವಂತಿಲ್ಲ. ಒಂದು ವೇಳೆ ಹೊಡೆದರೇ, ಜನರು ನನಗೆ ಶಾಪ ಹಾಕುತ್ತಾರೆ ಎಂದು ಹೇಳಿದ್ದರಂತೆ. ಇದನ್ನು ಸ್ವತಃ ಸೋನು ರವರೇ ಹೇಳಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಸಿನೆಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವ ಒಬ್ಬ ನಟ ರಿಯಲ್ ಲೈಫ್ ನಲ್ಲಿ ರಿಯಲ್ ಹಿರೋ ಆಗಿದ್ದಾರೆ. ಅವರೇ ಸೋನು ಸೂದ್ ರವರು. ಕೊರೋನಾ ಸಮಯದಲ್ಲಿ ಸೋನು ರವರು ಮಾಡಿದ ಸಹಾಯಕ್ಕಾಗಿ ಜನತೆ ಅವರನ್ನು ಮೆಚ್ಚಿ ದೇವರಂತೆ ಪೂಜೆ ಮಾಡುತ್ತಿದ್ದಾರೆ. ಜೊತೆಗೆ ದೇವಾಲಯಗಳನ್ನು ಸಹ ಕಟ್ಟಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೇ ತೆಲಂಗಾಣದಲ್ಲಿ ಈಚೆಗೆ ಸೋನು ಸೂದ್ ರವರ ದೇವಾಲಯ ಕಟ್ಟಿಸಿರುವುದು. ಈ ಹಿನ್ನೆಲೆಯಲ್ಲಿ ಸೋನು ಸೂದ್ ರವರ ವಿಲನ್ ಆಗಿ ನಟಿಸುವ ಚಿತ್ರಗಳಲ್ಲಿ ಹಿರೋಗಳು ನಟಿಸಲು ಹಿಂದೇಟು ಹಾಕುತ್ತಾರೆ ಎನ್ನಲಾಗುತ್ತಿದೆ.

ಇನ್ನೂ ಆಚಾರ್ಯದ ಒಂದು ದೃಶ್ಯದಲ್ಲಿ ಸೋನು ಮೇಲೆ ನಟ ಚಿರಂಜೀವಿ ಕಾಲಿಡಬೇಕಿತ್ತು. ಕೊನೆಗೆ ಆ ದೃಶ್ಯಗಳನ್ನು ಸಹ ಬದಲಾಯಿಸಿದ್ದಾರಂತೆ. ಜೊತೆಗೆ ಕೆಲವೊಂದು ಸಿನೆಮಾಗಳ ಸ್ಕ್ರಿಪ್ಟ್ ಗಳನ್ನು ಸಹ ಬದಲಾಯಿಸಲಾಗುತ್ತಿದೆ ಎನ್ನಲಾಗಿದೆ. ಜೊತೆಗೆ ಸೋನು ರವರಿಗೆ ಹೀರೋ ಪಾತ್ರಗಳ ಆಫರ್ ಗಳು ಬರುತ್ತಿದ್ದು, ಕೆಲವು ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಹೀರೋ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ.

Trending

To Top