Film News

ಸೋನು ಸೂದ್ ಅವರ ಸಮಾಜ ಸೇವೆಗೆ ಸ್ಪೂರ್ತಿ ಯಾರು ಗೊತ್ತಾ ?

ಬಾಲಿವುಡ್ ನಟ ಸೋನು ಸೂದ್ ಅವರು ನನಗೆ ರಾಜಕೀಯ ಪ್ರವೇಶಿಸಲು ಇಷ್ಟ ಇಲ್ಲ, ಆದರೆ ಈ ರಾಜಕಾರಣಿ ನನಗೆ ಸ್ಫೂರ್ತಿ ಎಂದು ತಿಳಿಸಿದ್ದಾರೆ.ಕೊರೋನ ಸಂಕಷ್ಟದಲ್ಲಿರುವ ಹಲವಾರು ಮಂದಿಗೆ ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ ಆದರೆ ಬಾಲಿವುಡ್ ನಟ ಸೋನು ಸೂಡ್ ಕೂಡ ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿ ಸಿಲುಕಿ ಆರ್ಥಿಕವಾಗಿ ಹಾಗೂ ಒಂದು ಒತ್ತು ಊಟಕ್ಕೆ ಕೂಡ ಪರದಾಡುತ್ತಿರುವ ಅನೇಕ ಜನರಿಗೆ ನೆರವಾಗುತ್ತಿದ್ದಾರೆ.

ಎಲ್ಲಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೋನು ಸೂದ್ ಅವರಿಗೆ ಅಂಧಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಂದರೆ ಬಹಳ ಇಷ್ಟ ಹಾಗೂ ಅವರು ಅಭಿವೃದ್ಧಿ ಪಡೆಸಿರುವ ಕಾರ್ಯಗಳು ಅವರಿಗೆ ಸ್ಫೂರ್ತಿ ಎಂದು ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

ಮೊದಲಿಗೆ ನಾನು ನಟನಾಗಿ ಕೆಲಸ ಆರಂಭಿಸಿದಾಗ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಹೋಗುತ್ತಿದ್ದೆ. ಈ ನಗರ ನೋಡುವುದಕ್ಕೆ ಬಹಳ ಸುಂದರವಾಗಿತ್ತು ಅಲ್ಲಿನ ಬೆಳವಣಿಗೆಗೆ ಕಾರಣ ಚಂದ್ರ ಬಾಬು ನಾಯ್ಡು ಎಂದು ತಿಳಿಯಿತು.ಸದ್ಯ ನಾನು ಮಾಡುತ್ತಿರುವ ಕೆಲಸಗಳಿಗೆ ಅವರೇ ಸ್ಫೂರ್ತಿ ಈಗಿನ ಯುವಜನತೆ ಕೂಡ ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದಿದ್ದಾರೆ.

Trending

To Top