Cinema

ಮಕ್ಕಳ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ ಎಂದ ಸೋನು ಸೂದ್! ಇವರಿಗೊಂದು ಸಲಾಂ

ಈ ಕರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಜನರ ಪಾಲಿನ ರಿಯಲ್ ಹೀರೋ ಸೋನು ಸೂದ್ ಎಂದರೆ ತಪ್ಪಾಗಲಾರದು. ಲಾಕ್ ಡೌನ್ ಶುರುವಾದ ಸಂದರ್ಭದಲ್ಲಿ ಎಲ್ಲರಿಗಿಂತ ಹೆಚ್ಚು ತೊಂದರೆ ಅನುಭವಿಸಿದವರು ವಲಸೆ ಕಾರ್ಮಿಕರು. ಅವರನ್ನು ತಮ್ಮ ಊರುಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದು ನಟ ಸೋನು ಸೂದ್. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಿ. ಕರೊನಾ ಸಂಕಷ್ಟದಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಗಾಯಗೊಂಡ 400 ಕಾರ್ಮಿಕರ ಕುಟುಂಬಕ್ಕೆ ನೆರವಾದರು. ಮುಂಬೈ ನಲ್ಲಿ ಚಂಡಮಾರುತದ ಭೀತಿ ಇದ್ದಾಗ, ಸಮುದ್ರದ ಹತ್ತಿರ ವಾಸ ಮಾಡುತ್ತಿದ್ದ ಜನರನ್ನು ಸುರಕ್ಷಿತವಾದ ಸ್ಥಳಗಳಿಗೆ ತಲುಪಿಸಿ ಅವರಿಗೆ ಆಹಾರದ ವ್ಯವಸ್ಥೆ ಮಾಡಿದರು.
ಇತ್ತೀಚೆಗೆ ಮಹಾರಾಷ್ಟ್ರದ ಪೊಲೀಸರಿಗೆ 25,000 ಫೇಸ್ ಶೀಲ್ಡ್ ಗಳನ್ನು ನೀಡಿದರು. ಈ ಬಿಕ್ಕಟ್ಟಿನಲ್ಲಿ ಜನರ ಕಷ್ಟಕ್ಕೆ ನಿಂತಿರುವ ನಟ ಸೋನು ಸೂದ್ ದೇಶದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಹಸುಗಳನ್ನು ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ್ದ ವ್ಯಕ್ತಿಗೆ ಹಸುಗಳನ್ನು ವಾಪಸ್ ಕೊಡಿಸುವ ಭರವಸೆ ನೀಡಿದ್ದಾರೆ ಸೋನು ಸೂದ್. ಈಗ ಕರೊನಾ ಲಾಕ್ ಡೌನ್ ಇರುವ ಕಾರಣ, ಮಕ್ಕಳಿಗೆ ಆನ್ ಲೈನ್ ತರಗತಿಗಳು ಶುರುವಾಗಿವೆ. ಆನ್ ಕೈನ್ ತರಗತಿಗಳಲ್ಲಿ ಭಾಗವಹಿಸಲು ಸ್ಮಾರ್ಟ್ ಫೋನ್ ಇರಬೇಕು. ಹಿಮಾಚಲ ಪ್ರದೇಶದಲ್ಲಿ ವಾಸ ಮಾಡುವ ಕಡುಬಡತನದಲ್ಲಿರುವ ಕುಲದೀಪ್ ಸಿಂಗ್ ಅವರು, ತಮ್ಮ ಮಕ್ಕಳು ಆನ್ ಲೈನ್ ತರಗತಿಗಳಲ್ಲಿ ಭಾಗವಹಿಸಲು ತೊಂದರೆ ಆಗಬಾರದು ಎಂಬ ಕಾರಣಕ್ಕೆ ತಮ್ಮ ಹಸುಗಳನ್ನಿ ಮಾರಿ ಸ್ಮಾರ್ಟ್ ಫೋನ್ ಖರಿಸಿದ್ದಾರೆ.
ಈ ವಿಚಾರವಾಗಿ ಮಾತನಾಡುವಾಗ ದುಃಖಿತರಾಗಿದ್ದರು. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ಇದನ್ನು ಗಮನಿಸಿರುವ ಸೋನು ಸೂದ್ , ಅವರ ಹಸುಗಳನ್ನು ಅವರಿಗೆ ವಾಪಸ್ ಕೊಡಿಸುತ್ತೇನೆ, ಅವರ ಬಗ್ಗೆ ಮಾಹಿತಿ ನೀಡಿ ಎಂದು ಟ್ವೀಟ್ ಮಾಡಿದ್ದಾರೆ. ಸೋನು ಸೂದ್ ಅವರ ಈ ಟ್ವೀಟ್ ಗೆ ಬಹಳ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಬಡವರ ಸಹಾಯಕ್ಕೆ ನಿಂತಿರುವ ಈ ನಟನ ನಿಲುವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಒಬ್ಬಂಟಿಯಾಗಿ ಇವರು ಇಷ್ಟೆಲ್ಲಾ ಕೆಲಸಗಳನ್ನು ಮಾಡುವಾಗ, ಕೋಟ್ಯಂತರ ರೂಪಾಯಿಗಳನ್ನು ಗಳಿಸಿರುವ ರಾಜಕಾರಣಿಗಳೆಲ್ಲರು ಬಡವರಿಗೆ ಸಹಾಯ ಮಾಡಲು ಆರಂಭಿಸಿದರೆ ಇನ್ನು ಎಷ್ಟು ಜನರಿಗೆ ಸಹಾಯವಾಗಬಹುದು.. ದೇವರು ನಿಮಗೆ ಇನ್ನಷ್ಟು ಶಕ್ತಿ ಸಂಪತ್ತು ನೀಡಲಿ, ನಿಮ್ಮ ಮೂಲಕ ಇನ್ನಷ್ಟು ಜನರಿಗೆ ಸಹಾಯವಾಗಲಿ ಎಂದು ಜನರು ಹರಸಿದ್ದಾರೆ.
ಈ ಕರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಜನರ ಪಾಲಿನ ರಿಯಲ್ ಹೀರೋ ಸೋನು ಸೂದ್ ಎಂದರೆ ತಪ್ಪಾಗಲಾರದು. ಲಾಕ್ ಡೌನ್ ಶುರುವಾದ ಸಂದರ್ಭದಲ್ಲಿ ಎಲ್ಲರಿಗಿಂತ ಹೆಚ್ಚು ತೊಂದರೆ ಅನುಭವಿಸಿದವರು ವಲಸೆ ಕಾರ್ಮಿಕರು. ಅವರನ್ನು ತಮ್ಮ ಊರುಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದು ನಟ ಸೋನು ಸೂದ್. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಿ. ಕರೊನಾ ಸಂಕಷ್ಟದಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಗಾಯಗೊಂಡ 400 ಕಾರ್ಮಿಕರ ಕುಟುಂಬಕ್ಕೆ ನೆರವಾದರು. ಮುಂಬೈ ನಲ್ಲಿ ಚಂಡಮಾರುತದ ಭೀತಿ ಇದ್ದಾಗ, ಸಮುದ್ರದ ಬಲಿ ವಾಸ ಮಾಡುತ್ತಿದ್ದ ಜನರನ್ನು ಸುರಕ್ಷಿತವಾದ ಸ್ಥಳಗಳಿಗೆ ತಲುಪಿಸಿ ಅವರಿಗೆ ಆಹಾರದ ವ್ಯವಸ್ಥೆ ಮಾಡಿದರು.

Trending

To Top