Saturday, May 21, 2022
HomeEntertainmentಸ್ಯಾಂಡಲ್ ವುಡ್ ಗೆ ಸಿಕ್ಕಿರೋ ಹೊಸ ಹೀರೋ ಸಂಯುಕ್ತ ಹೆಗ್ಡೆ!

ಸ್ಯಾಂಡಲ್ ವುಡ್ ಗೆ ಸಿಕ್ಕಿರೋ ಹೊಸ ಹೀರೋ ಸಂಯುಕ್ತ ಹೆಗ್ಡೆ!

ಸ್ಯಾಂಡಲ್ ವುಡ್ ನ ಕಿರಿಕ್ ಹುಡಗಿ ಸಂಯುಕ್ತ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ದಿನಬೆಳಗಾದರೆ ಒಂದೆಲ್ಲಾ ಒಂದು ಫೋಟೋ ವಿಡಿಯೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಹೆಚ್ಚು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುವ ಸಂಯುಕ್ತ ಹೆಗ್ಡೆ ಚಿತ್ರರಂಗದಿಂದ ದೂರವೇ ಉಳಿದಿದ್ದರು.

ಇದೀಗ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಸಂಯುಕ್ತ ಅವರು ಅಗ್ನಿ ಶ್ರೀಧರ್ ಅವರು ಬರೆದಿರುವ ಕಥೆಗೆ ನಾಯಕಿ ಕಮ್ ನಾಯಕ ಆಗಿದ್ದಾರೆ. ಅಗ್ನಿ ಶ್ರೀಧರ್ ಬರೆದಿರುವ ಕಥೆಗಳು ಸಿನಿಮಾಗಳಿಗೆ ಹೊಸ ಇಮೇಜ್ ಅನ್ನ ಕೊಟ್ಟಿದೆ. ಇದೀಗ ಅಗ್ನಿ ಶ್ರೀಧರ್ ಕನ್ನಡ ಸಿನಿಮಾ ಒಂದಕ್ಕೆ ಕಥೆಯನ್ನ ಇಡಿದಿದ್ದಾರೆ, ಅದುವೇ ಕ್ರೀಮ್ ಸದ್ಯದಲ್ಲೇ ಈ ಸಿನಿಮಾ ಆರಂಭವಾಗಲಿದ್ದು, ಅಭಿಷೇಕ್ ಬಸಂತ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾನು ಕಥೆ ಕೇಳಲು ಹೋದಾಗ ತುಂಬಾ ಕುತೂಹಲ ಇತ್ತು.ಅಗ್ನಿ ಶ್ರೀಧರ್ ಸರ್ ನನ್ನ ಪಾತ್ರದ ಬಗ್ಗೆ ಹೇಳಿದರೆ ಅದಕೊಂಡು ಕಳೆ, ಈ ಚಿತ್ರದಲ್ಲಿ ನಾನು ಫ್ಹಿಮೆಲ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದೇನೆ. ಈ ವರೆಗೂ ಮಾಡಿರದ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಸಂಯುಕ್ತ ಹೆಗ್ಡೆ ಹೇಳಿಕೊಂಡಿದ್ದಾರೆ.

- Advertisement -

You May Like

More