Current Issues

ಸಾಫ್ಟವೆರ್ ಸಂಬಳ ಬಿಟ್ಟು, ಕೃಷಿ ಆರಂಭಿಸಿ ಲಕ್ಷ ಲಕ್ಷ ಸಂಪಾದನೆ ಮಾಡಿದ ದಂಪತಿಗಳು, ವಿಡಿಯೋ ನೋಡಿ

ಭೂಮಿ ತಾಯಿಯನ್ನು ನಂಬಿ ಕೆಟ್ಟವರಿಲ್ಲ. ಎಲ್ಲರ ಕೈ ಹಿಡಿಯುತ್ತಾಳೆ ಭೂಮಿ. ಕೃಷಿಯನ್ನು ನಂಬಿದವರಿಗೆ ಖಂಡಿತ ಒಳ್ಳೆಯದೇ ಆಗುತ್ತದೆ. ಅದರಲ್ಲೂ ಭಾರತದಲ್ಲಿ ನಮ್ಮ ಮಣ್ಣಿನ ಸೊಗಡನ್ನು ನಂಬಿರುವವರಿಗೆ ಎಂದೆಂದಿಗೂ ಮೋಸ ಆಗಿಲ್ಲ. ಈ ಮಾತುಗಳಿಗೆ ಉದಾಹರಣೆ ಎಂಬಂತೆ ಒಬ್ಬ ದಂಪತಿ ಇದ್ದಾರೆ. ಈ ದಂಪತಿಯ ಹೆಸರು ಶಿವರಾಜ್ ಮತ್ತು ಪುಷ್ಪಾ. ಇವರಿಬ್ಬರು ಸಾಫ್ಟ್ ವೇರ್ ಇಂಜಿಯರಿಂಗ್ ಓದಿ, ಎಂಟೆಕ್, ಎಂ.ಎಸ್ ಮಾಡಿ ಸಾಫ್ಟ್ ವೇರ್ ಉದ್ಯೋಗಿಗಳಾಗಿ ಕೆಲಸ ಮಾಡಿದವರು. ಜರ್ಮಿನಿಯಲ್ಲಿ ಎಂಟು ವರ್ಷ ಕೆಲಸ ಮಾಡಿ, ಪ್ರತಿತಿಂಗಳು ಲಕ್ಷ ಲಕ್ಷ ಸಂಬಳ ಗಳಿಸುತ್ತಿದ್ದರು. ಜರ್ಮನಿಯಲ್ಲಿದ್ದರು ಈ ದಂಪತಿಗೆ ತಮ್ಮ ಊರು ಹಾಗೂ ಕೃಷಿಯಲ್ಲಿ ಆಸಕ್ತಿ ಕಡಿಮೆ ಆಗಿರಲಿಲ್ಲ. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ
ತಮ್ಮ ಸಹೋದ್ಯೋಗಿಯೊಬ್ಬರು ಭಾರತದ ಪದ್ಧತಿಯ ಹಾಗೆ ನೈಸರ್ಗಿಕ ಕೃಷಿ ಮಾಡಲು ಶುರು ಮಾಡಿದ್ದರಂತೆ, ಇದನ್ನು ನೋಡಿ ಈ ದಂಪತಿಗೂ ಕೃಷಿ ಮಾಡಬೇಕೆಂದು ಮನಸ್ಸು ಬಂದಿದೆ. ತಮ್ಮ ಊರಿನಲ್ಲೇ ಜಮೀನಿರುವಾಗ ಕೃಷಿ ಏಕೆ ಮಾಡಬಾರದು ಎಂದು, 8 ವರ್ಷಗಳ ಕಾಲ ಕೆಲಸ ಮಾಡಿದ ಸಾಫ್ಟ್ ವೇರ್ ಕಂಪೆನಿಯನ್ನು ತ್ಯಜಿಸಿ ತಮ್ಮೂರಿಗೆ ಬಂದಿದ್ದಾರೆ. ಇದಕ್ಕೆ ಕಾರಣ ಕರೊನಾ ಲಾಕ್ ಡೌನ್ ಅಲ್ಲ, ಸ್ವದೇಶದ ಮೇಲೆ ಕೃಷಿ ಮೇಲೆ ಇರುವ ಪ್ರೀತಿ. ಈ ಕೆಳಗಿನ ವಿಡಿಯೋ ನೋಡಿ
Video courtesy – NewsFirst Kannada ವಿಜಯಪುರ ಜಿಲ್ಲೆಯ, ಇಂಡಗಿ ತಾಲೂಕಿನ ಸಾರೋಟಗಿ ಗ್ರಾಮ ಇವರ ಹುಟ್ಟೂರು. ಇಲ್ಲಿರುವ ಜಮೀನಿನಲ್ಲಿ ಕೃಷಿ ಮಾಡಬೇಕೆಂಬ ಮನಸ್ಸಿನಿಂದ ಸ್ವದೇಶಕ್ಕೆ ಬಂದಿದ್ದಾರೆ. ಮೊದಲಿಗೆ ಇವರ ನಿರ್ಧಾರವನ್ನು ಮನೆಯವರು ಮೆಚ್ಚಲಿಲ್ಲ. ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸವನ್ನು ಬಿಟ್ಟು ಕೃಷಿ ಮಾಡುವುದೇ ಎಂದು ವಿರೋಧ ವ್ಯಕ್ತಪಡಿಸಿದ್ದರು. ಆದರೆ ತಮ್ಮ ನಿರ್ಧಾರವನ್ನು ಬದಲಿಸದ ಈ ದಂಪತಿ, 8 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ನೈಸರ್ಗಿಕ ಕೃಷಿಯನ್ನು ಶುರು ಮಾಡಿದ್ದಾರೆ. ಸ್ವಲ್ಪವೂ ರಾಸಾಯನಿಕ ವಸ್ತುಗಳನ್ನು ಬಳಸುವದಿಲ್ಲ. ಬಂಜರು ಭೂಮಿಯಲ್ಲಿ ಕೃಷಿ ಶುರು ಮಾಡಿ, ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಕೃಷಿಯಲ್ಲಿ ಸಾಧನೆ ಮಾಡಬೇಕು, ದೇಶಕ್ಕೆ ಸೇವೆ ಮಾಡಬೇಕು ಎಂಬ ಆಸೆ ಈ ದಂಪತಿಯದ್ದು. ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡಿ. ನೈಸರ್ಗಿಕ ಕೃಷಿಯಿಂದ ವರ್ಷಕ್ಕೆ 8 ರಿಂದ 10 ಲಕ್ಷ ಆದಾಯ ತೆಗೆಯುತ್ತಿದ್ದಾರೆ. ಕೃಷಿ ಎಂದರೆ ಮೂಗು ಮುರಿಯುವ ಜನರಿಗೆ ಸ್ಪೂರ್ತಿ ಈ ದಂಪತಿ.

Trending

To Top