Kannada Serials

ಮನೆಗೆ ಪುಟಾಣಿ ಲಕ್ಷ್ಮಿಯನ್ನು ಬರ ಮಾಡಿಕೊಂಡ ‘ರಾಧಾ ರಮಣ’ ಸ್ಕಂದ ಅಶೋಕ! ಸುಂದರ ಫೋಟೋಗಳನ್ನು ನೋಡಿ

ರಾಧಾ ರಮಣ ಕಲರ್ಸ್ ಕನ್ನಡ ವಾಹಿನಿಯ ಬಹು ಯಶಸ್ವಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ನಟಿಸಿದ ರಮಣ ಮತ್ತು ರಾಧಾ ಪಾತ್ರಧಾರಿಗಳು ಜನಮನ್ನಣೆ ಗಳಿಸಿದ್ಧರು. ರಮಣ ಪಾತ್ರ ಮಾಡಿದ್ದ ನಟ ಸ್ಕಂದ ಅಶೋಕ್, ಇವರು ಮೊದಲಿಗೆ ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಬಂದಿದ್ದರು. ಕಿರುತೆರೆಯಲ್ಲಿ ತಮ್ಮ ಇಂಗ್ಲಿಷ್ ಆಕ್ಸೆಂಟ್ ಅದರ ಜೊತೆಗೆ ಕನ್ನಡವನ್ನೂ ಮಾತನಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು ನಟ ಸ್ಕಂದ. ರಾಧಾ ರಮಣ ಧಾರಾವಾಹಿ ಮುಗಿದ ನಂತರ ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ಬ್ಯುಸಿ ಆಗಿದ್ದರು. 2018ರಲ್ಲಿ ಬಹು ದಿನಗಳ ಗೆಳತಿ ಶಿಖಾ ರೊಂದಿಗೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದರು ಸ್ಕಂದ.

ಕೆಲ ತಿಂಗಳುಗಳ ಹಿಂದೆ ಅವರು ತಂದೆಯಾಗುತ್ತಿರುವ ವಿಚಾರವನ್ನು ಅವರ ಪತ್ನಿ ಶಿಖಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ಶಿಖಾರ ಸೀಮಂತದ ಸಮಾರಂಭವನ್ನು ಸಹ ಬಹಳ ಚೆನ್ನಾಗಿ ನಡೆಸಲಾಗಿತ್ತು. ಶಿಖಾರ ಸೀಮಂತ ಸಂಭ್ರಮದಲ್ಲಿ ಕಿರುತೆರೆಯ ಹಲವಾರು ನಟ ನಟಿಯರು ಪಾಲ್ಗೊಂಡಿದ್ದರು. ಇದೀಗ ಸ್ಕಂದ ಅವರ ಕುಟುಂಬಕ್ಕೆ ಮುದ್ದಾದ ಯುವರಾಣಿಯ ಅಗಮನವಾಗಿದೆ. ಸ್ಕಂದ ಅವರ ಪತ್ನಿ ಶಿಖಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸುವ ಹಾಗೆ ಸ್ಕಂದ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.

ಸ್ಕಂದ ಅವರು ಹೆಣ್ಣು ಮಗುವಿಗೆ ತಂದೆಯಾಗಿರುವ ವಿಚಾರವನ್ನು ತಿಳಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭ ಹಾರೈಸಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾದ ಸ್ಕಂದ, ಸಿಸಿಡಿ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ದೂರದ ಸಂಬಂಧಿ. ರಾಧಾ ರಮಣ ಕಲರ್ಸ್ ಕನ್ನಡ ವಾಹಿನಿಯ ಬಹು ಯಶಸ್ವಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ನಟಿಸಿದ ರಮಣ ಮತ್ತು ರಾಧಾ ಪಾತ್ರಧಾರಿಗಳು ಜನಮನ್ನಣೆ ಗಳಿಸಿದ್ಧರು. ರಮಣ ಪಾತ್ರ ಮಾಡಿದ್ದ ನಟ ಸ್ಕಂದ ಅಶೋಕ್, ಇವರು ಮೊದಲಿಗೆ ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಬಂದಿದ್ದರು. ಕಿರುತೆರೆಯಲ್ಲಿ ತಮ್ಮ ಇಂಗ್ಲಿಷ್ ಆಕ್ಸೆಂಟ್ ಅದರ ಜೊತೆಗೆ ಕನ್ನಡವನ್ನೂ ಮಾತನಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು ನಟ ಸ್ಕಂದ. ರಾಧಾ ರಮಣ ಧಾರಾವಾಹಿ ಮುಗಿದ ನಂತರ ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ಬ್ಯುಸಿ ಆಗಿದ್ದರು. 2018ರಲ್ಲಿ ಬಹು ದಿನಗಳ ಗೆಳತಿ ಶಿಖಾ ರೊಂದಿಗೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದರು ಸ್ಕಂದ.

Trending

To Top