ತಾತನನ್ನು ನೆನೆದು ಎಮೋಷಲ್ ಪೋಸ್ಟ್ ಹಂಚಿಕೊಂಡ ಪ್ರಿನ್ಸ್ ಮಹೇಶ್ ಪುತ್ರಿ ಸಿತಾರಾ…!

ತೆಲುಗು ಸಿನಿರಂಗದ ನಟ ಮಹೇಶ್ ಬಾಬು ರವರ ಕುಟುಂಬದಲ್ಲಿ ಸಾಲು ಸಾಲು ವಿಷಾದಗಳು ಮನೆ ಮಾಡಿದೆ. ತಿಂಗಳುಗಳ ಗ್ಯಾಪ್ ನಲ್ಲೇ ಮಹೇಶ್ ಬಾಬು ರವರ ಕುಟುಂಬದ ಮೂರು ಮಂದಿ ಇಹಲೋಕ ತ್ಯೆಜಿಸಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಮಹೇಶ್ ಬಾಬು ರವರ ಅಣ್ಣ ರಮೇಶ್, ತಿಂಗಳ ಹಿಂದೆಯಷ್ಟೆ ಅವರ ತಾಯಿ ಇಂದಿರಾ ದೇವಿ, ಇದೀಗ ಮಹೇಶ್ ಬಾಬು ರವರ ತಂದೆ ಸೂಪರ್‍ ಸ್ಟಾರ್‍ ಕೃಷ್ಣ ಸಹ ಮೃತಪಟ್ಟಿರುವುದು ಅವರ ಕುಟುಂಬದಲ್ಲಿ ಶೋಕಸಾಗರ ಮನೆ ಮಾಡುವಂತೆ ಮಾಡಿದೆ. ಇನ್ನೂ ತನ್ನ ಪ್ರೀತಿಯ ತಾತನನ್ನು ನೆನಪಿಸಿಕೊಂಡು ಸಿತಾರಾ ಎಮೋಷನಲ್ ಪೋಸ್ಟ್ ಮಾಡಿದ್ದಾರೆ.

ದಿವಂಗತ ಕೃಷ್ಣ ರವರು ಮಹೇಶ್ ಬಾಬು ಮನೆಯಲ್ಲಿ ಹೆಚ್ಚಿಗೆ ಇರುತ್ತಿರಲಿಲ್ಲ. ಆತ ತನ್ನ ಪುತ್ರಿಯರ ಮನೆಯಲ್ಲಿ ಅಥವಾ ನರೇಶ್ ರವರ ತೋಟದ ಮನೆಯಲ್ಲೇ ಹೆಚ್ಚಾಗಿ ಇರುತ್ತಿದ್ದರು ಎನ್ನಲಾಗುತ್ತದೆ. ಇದರಿಂದ ಪ್ರತೀ ವಾರಾಂತ್ಯದಂದು ಮಕ್ಕಳೊಂದಿಗೆ ಮಹೇಶ್ ಸಹ ಕೃಷ್ಣ ಇರುವ ಕಡೆಗೆ ಹೋಗುತ್ತಿದ್ದರಂತೆ. ಕುಟುಂಬಸ್ಥರೆಲ್ಲಾ ಸೇರಿ ಲಂಚ್ ಮಾಡುವುದು ಅಭ್ಯಾಸ ಮಾಡಿಕೊಂಡಿದ್ದರು. ಇನ್ನೂ ಮಹೇಶ್ ಬಾಬು ಹೈದರಾಬಾದ್ ನಲ್ಲಿದ್ದರೇ ಎಷ್ಟೇ ಕೆಲಸಗಳಿದ್ದರೂ ಪ್ರತಿ ವೀಕೆಂಡ್ ಕೃಷ್ಣ ರವರ ಬಳಿಗೆ ಹೋಗುತ್ತಿದ್ದರು. ಅವರ ಜೊತೆಗೆ ಕೃಷ್ಣ ರವರ ಮೊಮ್ಮಕ್ಕಳಾದ ಗೌತಮ್, ಸಿತಾರಾ ಸಹ ಬರುತ್ತಿರುತ್ತಾರೆ. ಇನ್ನೂ ಅವರಿಬ್ಬರಿಗೂ ಕೃಷ್ಣ ಎಂದರೇ ತುಂಬಾನೆ ಪ್ರೀತಿ. ಇದೀಗ ತನ್ನ ಪ್ರೀತಿಯ ತಾತ ಇನ್ನಿಲ್ಲ ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳಲು ಸಹ ಸಾಧ್ಯವಾಗದೇ  ಕಣ್ಣೀರು ಹಾಕುತ್ತಿದ್ದಾರೆ.

ತಾತನ ಜೊತೆಗೆ ಕಳೆದಂತಹ ಸಮಯವನ್ನು ನೆನಪಿಸಿಕೊಳ್ಳುತ್ತಾ ಇಬ್ಬರೂ ಕಣ್ಣೀರು ಹಾಕುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ಸಿತಾರಾ ತನ್ನ ತಾತನ ಮರಣದ ಬಗ್ಗೆ ಒಂದು ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಇನ್ನೂ ಮುಂದೆ ವೀಕೆಂಡ್ ಲಂಚ್ ಈ ಹಿಂದಿನ ತರಹ ಇರುವುದಿಲ್ಲ. ನೀವು ತುಂಬಾ ಮೌಲ್ಯಯುತವಾದ ವಿಚಾರಗಳನ್ನು ಕಲಿಸಿಕೊಟ್ಟಿದ್ದೀರೀ, ನನ್ನನ್ನು ತುಂಬಾನೆ ನಗುವಂತೆ ಮಾಡುತ್ತಿದ್ದೀರಿ. ನೀವು ನನ್ನ ಹಿರೋ, ಈಗ ಎಲ್ಲಾ ಕೇವಲ ನೆನಪುಗಳಾಗಿಯೇ ಉಳಿಯಲಿದೆ. ನೀವು ಗರ್ವ ಪಡುವಂತೆ ಕೆಲಸ ನಾನು ಒಂದು ದಿನ ಮಾಡುತ್ತೇನೆ ಎಂಬ ನಂಬಿಕೆ ನನಗೆ ಇದೆ. ನಾನು ನಿಮ್ಮನ್ನು ತುಂಬಾನೆ ಮಿಸ್ ಆಗುತ್ತಿದ್ದೇನೆ ತಾತ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಕಳೆದ ಭಾನುವಾರ ಅನಾರೋಗ್ಯದ ನಿಮಿತ್ತ ಸೂಪರ್‍ ಸ್ಟಾರ್‍ ಕೃಷ್ಣರವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಇಹಲೋಕ ತ್ಯೆಜಿಸಿದರು. ಇನ್ನೂ ಅವರ ಮರಣ ಇಡೀ ಸಿನಿರಂಗವನ್ನು ಹಾಗೂ ಅಭಿಮಾನಿಗಳನ್ನು ಶೋಕಸಾಗರದಲ್ಲಿ ತಳ್ಳಿದೆ. ಸಕಲ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೇ ಸಹ ನೆರವೇರಿದೆ. ಸಾಲು ಸಾಲು ಮರಣಗಳು ಮಹೇಶ್ ಬಾಬು ರವರ ಮನೆಯಲ್ಲಿ ನಡೆದಿದ್ದು, ಇದರಿಂದ ಮಹೇಶ್ ಬಾಬು ಹಾಗೂ ಅವರ ಕುಟುಂಬ ತುಂಬಾನೆ ಕುಗ್ಗಿದ್ದು, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ಸೇರಿದಂತೆ ಅನೇಕ ಗಣ್ಯರು ಪ್ರಾರ್ಥನೆ ಮಾಡುತ್ತಿದ್ದಾರೆ.

Previous articleಟೈಟ್ ಟಿ-ಶರ್ಟ್ ನಲ್ಲಿ ಗ್ಲಾಮರಸ್ ಟ್ರೀಟ್ ಕೊಟ್ಟ ಹಾಟ್ ಬ್ಯೂಟಿ ಜಾನ್ವಿ ಕಪೂರ್, ಶಾರ್ಟ್ ಥೈಸ್ ಶೋ ಮಾಡಿದ ಬ್ಯೂಟಿ…!
Next articleನಟರಿಗೂ ತಪ್ಪಿಲ್ಲವೇ ಕಾಸ್ಟಿಂಗ್ ಕೌಚ್, ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ಬಾಲಿವುಡ್ ಸ್ಟಾರ್ ನಟ…!