ಹೈದರಾಬಾದ್: ಮಕ್ಕಳ ಅನುಮತಿಯೊಂದಿಗೆ ಬಹುಭಾಷ ಸಿನೆಮಾಗಳಲ್ಲಿ ಹಾಡಿರುವ ಪ್ರಖ್ಯಾತ ಗಾಯಕಿ ಸುನಿತಾ ರವರು ಮರು ಮದುವೆಯಾಗಲು ತಯಾರಾಗಿದ್ದು, ನಿಶ್ಚಿತಾರ್ಥ ಸಹ ಆಗಿದೆ.
ಗಾಯಕಿ ಸುನೀತಾ ರವರು ತಮ್ಮ ೧೯ನೇ ವಯಸ್ಸಿನಲ್ಲಿ ಕಿರಣ್ ಗೋಪುರಾಜು ಎಂಬುವವರೊಂದಿಗೆ ವಿವಾಹವಾಗಿದ್ದು, ಕೆಲವು ವರ್ಷಗಳ ಹಿಂದೆ ಇಬ್ಬರೂ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಇನ್ನೂ ಈ ಇಬ್ಬರಿಗೂ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಈ ಇಬ್ಬರೂ ಮಕ್ಕಳ ಒಪ್ಪಿಗೆಯೊಂದಿಗೆ ಮರು ಮದುವೆಯಾಗುತ್ತಿದ್ದಾರೆ.
ತೆಲುಗು ಹಾಗೂ ತಮಿಳು ರಂಗ ಬಹುಬೇಡಿಕೆ ಗಾಯಕಿ ಸುನೀತಾ ಡಿಜಿಟಲ್ ಮೀಡಿಯಾ ಸಂಸ್ಥೆವೊಂದರ ಸಿಇಒ ಆದ ರಾಮ್ ವೀರಪನೇನಿ ಅವರೊಂದಿಗೆ ನಿಶ್ಚಿತಾರ್ಥ ಆಗಿರುವ ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದಾರೆ. ರಾಮ್ ವೀರಪನೇನಿ ರವರು ನನ್ನ ಬಾಳಿಗೆ ಸ್ನೇಹಿತನಾಗಿ ಬಂದು, ಈಗ ನನ್ನ ಜೀವನದ ಭಾಗವಾಗುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದು, ಇದಕ್ಕೆ ಸುನೀತಾ ಮಕ್ಕಳು ಸೇರಿದಂತೆ ಸಿನಿರಂಗದ ಅನೇಕರು ಶುಭಾಷಯಗಳನ್ನು ಕೋರಿದ್ದಾರೆ.
