Film News

ಜನವರಿಯಲ್ಲಿ 2ನೇ ಮದುವೆಯಾಗಲಿದ್ದಾರೆ ಗಾಯಕಿ ಸುನಿತ

ಹೈದರಾಬಾದ್: ತೆಲುಗು ಸಿನಿರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಸುನಿತಾ ಉಪದ್ರಸ್ತ ಎರಡನೇ ಮದುವೆಯಾಗುವ ವಿಚಾರ ಈಗಾಗಲೇ ತಿಳಿದಿದ್ದು, ಜನವರಿ 9 ರಂದು ಮದುವೆ ದಿನಾಂಕ ನಿಗಧಿಯಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ಗಾಯಕಿ ಸುನಿತಾ ತಮ್ಮ ಎರಡನೇ ವಿವಾಹದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಗಾಯಕಿ ಸುನಿತಾ ಹಾಗೂ ರಾಮ್ ವೀರಪ್ಪನೇನಿ ನಿಶ್ಚಿತಾರ್ಥ ನಡೆದಿತ್ತು. ಇದೀಗ ಸುನಿತಾ ಮದುವೆ ದಿನಾಂಕ ಬಹಿರಂಗವಾಗಿದ್ದು, ಜನವರಿ 9 ರಂದು ಮದುವೆ ನಡೆಯಲಿದೆ.

ಕೆಲವು ದಿನಗಳ ಹಿಂದೆ ಗಾಯಕಿ ಸುನಿತಾ ರವರ ಮದುವೆ ಫೆಬ್ರವರಿ 2021 ರಲ್ಲಿ ನಡೆಯಲಿದೆ ಎಂಬ ಮಾಹಿತಿಯಿತ್ತು. ಆದರೆ ಇದೀಗ ಜನವರಿ 9ರಂದು ಮದುವೆ ದಿನಾಂಕ ನಿಗಧಿಯಾಗಿದ್ದು, ಹೈದರಾಬಾದ್ ನಲ್ಲಿ ಇಬ್ಬರ ಮದುವೆ ನಡೆಯಲಿದೆ. ಇನ್ನೂ ಮದುವೆ ಕಾರ್ಯಕ್ರಮಕ್ಕೆ ಸುನಿತಾ ಹಾಗೂ ರಾಮ್ ವೀರಪ್ಪನೇನಿ ರವರ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆಯಂತೆ.

19ನೇ ವಯಸ್ಸಿನಲ್ಲಿಯೇ ವಿವಾಹವಾಗಿದ್ದ ಸುನಿತಾ ಮೊದಲ ಪತಿಯಿಂದ ವಿಚ್ಚೇದನ ಪಡೆದು ಸುಮಾರು ವರ್ಷಗಳು ಕಳೆದಿದೆ. ಇದೀಗ ತೆಲುಗು ಪ್ರಸಿದ್ದ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿರುವ ರಾಮ್ ರವರನ್ನು ಎರಡನೇ ಮದುವೆಯಾಗುತ್ತಿದ್ದಾರೆ ಗಾಯಕಿ ಸುನಿತ. ಮತ್ತೊಂದು ವಿಚಾರವೆಂದರೇ ಇತ್ತೀಚಿಗಷ್ಟೆ ಸುನಿತಾ ಹಾಗೂ ರಾಮ್ ಇಬ್ಬರೂ ಪಾರ್ಟಿ ಆಯೋಜಿಸಿದ್ದು, ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು. ಇನ್ನೂ ಪಾರ್ಟಿಯ ಪೊಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Trending

To Top