ಮತ್ತೆ ತಾಯಿಯಾಗಲಿದ್ದಾರಂತೆ ಸ್ಟಾರ್ ಸಿಂಗರ್ ಸುನಿತಾ? ವೈರಲ್ ಆದ ಸುದ್ದಿ…!

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಸೇರಿದಂತೆ ಅನೇಕರು ಉತ್ಸುಕರಾಗಿರುತ್ತಾರೆ. ಜೊತೆಗೆ ಅವರ ಬಗ್ಗೆ ಏನೆ ಸುದ್ದಿ ಕೇಳಿಬಂದರೂ ಕ್ಷಣ ಮಾತ್ರದಲ್ಲೇ ಎಲ್ಲಾ ಕಡೆ ಹರಿದಾಡುತ್ತಿರುತ್ತದೆ. ಅದು ನಿಜವೋ ಸುಳ್ಳೊ ತಿಳಿಯದೇ ಇದ್ದರೂ ಸಹ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಇದೀಗ ಸ್ಟಾರ್‍ ಸಿಂಗರ್‍ ಸುನಿತಾ ರವರಿಗೆ ಸಂಬಂಧಿಸಿದ ಸುದ್ದಿಯೊಂದರು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ತೆಲುಗು ಸಿನಿರಂಗದ ಖ್ಯಾತ ಗಾಯಕಿ ಸುನಿತ ರವರ ಕುರಿತಂತೆ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿಂಗರ್‍ ಸುನಿತ ಗರ್ಭಿಣಿಯಾಗಿದ್ದಾರೆ. ಅವರ ಕುಟುಂಬ ಸಂತೋಷದಲ್ಲಿದೆ ಎಂಬೆಲ್ಲಾ ಸುದ್ದಿಗಳು ಇದೀಗ ವೈರಲ್ ಆಗುತ್ತಿದೆ. ಸಿಂಗರ್‍ ಸುನಿತ ರವರಿಗೆ ಸ್ಟಾರ್‍ ನಟಿಯರಂತೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಹಾಡುಗಳನ್ನು ಹಾಡುವ ಮೂಲಕ ಹಾಗೂ ಕೆಲವು ಸಿನೆಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಇನ್ನೂ ಆಕೆಗೆ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಇಬ್ಬರು ಮಕ್ಕಳ ತಾಯಿ ಸಹ ಆಗಿದ್ದಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಆಕೆ ಪತಿಯೊಂದಿಗೆ ವಿಭೇದಗಳು ಹುಟ್ಟಿಕೊಂಡು ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ ಎರಡು ಮಕ್ಕಳನ್ನು ತುಂಬಾ ಕಷ್ಟದಿಂದಲೇ ಬೆಳೆಸಿದ್ದಾರೆ. ಜೊತೆಗೆ ಆಕೆಯ ಜೀವನದಲ್ಲಿ ತುಂಬಾನೆ ಸಂಕಷ್ಟಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ.

ಸುಮಾರು ವರ್ಷಗಳ ಕಾಲ ಆಕೆ ಸಿಂಗಲ್ ಪೇರೆಂಟ್ ಆಗಿ ತನ್ನಿಬ್ಬರ ಮಕ್ಕಳನ್ನು ಸಾಕು ಸಲುಹಿದ್ದಾರೆ. ಇನ್ನೂ ತೆಲುಗಿನ ಬ್ಯುಸಿನೆಸ್ ಮ್ಯಾನ್, ಖಾಸಗಿ ಚಾನಲ್ ಒಂದರ ಮಾಲಿ ರಾಮ್ ಎಂಬಾತನೊಂದಿಗೆ ಆಕೆ ತಮ್ಮ ಮಕ್ಕಳಿಬ್ಬರ ಒಪ್ಪಿಗೆಯ ಮೇರೆಗೆ ಕಳೆದೆರಡು ವರ್ಷಗಳ ಹಿಂದೆಯಷ್ಟೆ ಮದುವೆಯಾದರು. ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಸಂತೊಷದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸುನಿತಾ ರವರು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ಸುದ್ದಿಯಿಂದ ಸುನಿತಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿ ಇದೀಗ ಟಾಲಿವುಡ್ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರಾಗಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಸಹ ಘೋಷಣೆ ಮಾಡಿಲ್ಲ.

ಇನ್ನೂ ಸುನಿತಾ ಪತಿ ರಾಮ್ ಕೊಟ್ಯಂತರ ರೂಪಾಯಿಗಳಷ್ಟು ವ್ಯಾಪಾರಗಳನ್ನು ಹೊಂದಿದ್ದಾರೆ. ತಮ್ಮ ಪ್ರೀತಿಗೆ ಸಂಕೇತವಾಗಿ ಒಂದು ಮಗುವನ್ನನು ಸಹ ಪಡೆದುಕೊಳ್ಳಬೇಕೆಂದುಕೊಂಡಿದ್ದಾರೆ. ಈ ಹಾದಿಯಲ್ಲೇ ಸುನಿತ ತಾಯಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಜೋರಾಗಿ ಹರಿದಾಡುತ್ತಿದ್ದು, ಈ ಬಗ್ಗೆ ಸುನಿತಾ ಆಗಲಿ ಅಥವಾ ಅವರ ಕುಟುಂಬಸ್ಥರಾಗಲಿ ಯಾವುದೇ ಅಧಿಕೃತ ಸುದ್ದಿ ಹೊರಹಾಕಿಲ್ಲ. ಆದರೆ ಸುದ್ದಿ ಮಾತ್ರ ಸುನಾಮಿಯಂತೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

Previous articleಕನ್ನಡದಲ್ಲಿ ಜೋರಾಯ್ತು ಬ್ಯಾನ್ ರಶ್ಮಿಕಾ ಮಂದಣ್ಣ ಪೋಸ್ಟ್ ಗಳು, ರಶ್ಮಿಕಾ ಅಭಿನಯದ ಸಿನೆಮಾಗಳಿಗೆ ಸಂಕಷ್ಟ ಆಗಲಿದೆಯೇ?
Next articleಮದುವೆ ಅಥವಾ ಸಂತೋಷ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು ಎಂದ ಮೋಹಕ ತಾರೆ ರಮ್ಯಾ…!