Film News

ಮಾಲ್ಡೀವ್ಸ್ ನಲ್ಲಿ ಗಾಯಕಿ ಸುನಿತಾ-ರಾಮ್ ಹನಿಮೂನ್ ಪ್ರವಾಸ!

ಹೈದರಾಬಾದ್: ಇತ್ತೀಚಿಗಷ್ಟೆ ದಕ್ಷಿಣ ಭಾರತದ ಜನಪ್ರಿಯ ಗಾಯಕಿ ಸುನಿತಾ ಉಪದ್ರಸ್ತ ಹಾಗೂ ರಾಮ್ ವೀರಪ್ಪನೇನಿ ಮದುವೆಯಾಗಿದ್ದು, ಇದೀಗ ಈ ಜೋಡಿ ಮಾಲ್ಡೀವ್ಸ್ ಗೆ ಹನಿಮೂನ್‌ಗಾಗಿ ತೆರಳಿದ್ದಾರೆ.

ಗಾಯಕಿ ಸುನಿತಾ ರವರು 19ನೇ ವಯಸ್ಸಿನಲ್ಲಿರುವಾಗಲೇ ಮದುವೆಯಾಗಿದ್ದು, ಮೊದಲ ಪತಿಗೆ ವಿಚ್ಚೇಧನ ನೀಡಿ ಅನೇಕ ವರ್ಷಗಳು ಕಳೆದಿವೆ.ಕೆಲವು ದಿನಗಳ ಹಿಂದೆಯಷ್ಟೆ ಗಾಯಕಿ ಸುನಿತಾ ಹಾಗೂ ಡಿಜಿಟಲ್ ಮೀಡಿಯಾ ವೊಂದರ ಉದ್ಯಮಿ ರಾಮ್ ವೀರಪ್ಪನೇನಿ ಮದುವೆಯಾಗಿದ್ದು. ಇದು ಗಾಯಕಿ ಸುನಿತಾ ರವರಿಗೆ ೨ನೇ ಮದುವೆಯಾಗಿದೆ.  ಸುನಿತಾ ಮಕ್ಕಳ ಸಮ್ಮುಖದಲ್ಲಿಯೇ ಅದ್ದೂರಿಯಾಗಿ ಮದುವೆ ನಡೆದಿತ್ತು. ಇದೀಗ ಹನಿಮೂನ್‌ಗಾಗಿ ಸೆಲೆಬ್ರೆಟಿಗಳ ನೆಚ್ಚಿನ ತಾಣವಾಗಿರುವ ಮಾಲ್ಡೀವ್ಸ್‌ಗೆ ತೆರಳಿದ್ದು, ಅಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳಿಗೆ ಸ್ನೇಹಿತರಿಂದ ಹಾಗೂ ಸುನಿತಾ ಅಭಿಮಾನಿಗಳಿಂದ ಒಳ್ಳೆಯ ಕಾಮೆಂಟ್ಸ್ ಜೊತೆಗೆ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸುನಿತಾ ಹಾಗೂ ರಾಮ್ ಜೋಡಿ ಪ್ರೇಮಿಗಳ ದಿನಾಚರಣೆಯನ್ನು ವಿದೇಶದಲ್ಲಿ ಆಚರಣೆ ಮಾಡಿದ್ದು, ಈ ಹಿಂದೆ ಸುನಿತಾ ತಾವು ಎರಡನೇ ಮದುವೆಯಾಗುವ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಎಲ್ಲ ತಾಯಿರಂತೆ ನಾನು ನನ್ನ ಮಕ್ಕಳ ಜೀವನ ಚೆನ್ನಾಗಿರಬೇಕೆಂದು ಕನಸು ಕಾಣುತ್ತೇನೆ. ಅಂತೆಯೇ ನಾನು ಕೂಡ ಜೀವನದಲ್ಲಿ ಸೆಟಲ್ ಆಗಬೇಕು ಎಂದು ನನ್ನ ಮೇಲೆ ಕಾಳಜಿ ಹೊಂದಿರುವ ಮಕ್ಕಳನ್ನು ಹಾಗೂ ಪೋಷಕರನ್ನು ಪಡೆದಿದ್ದೇನೆ. ಅದೇ ರೀತಿ ನನ್ನ ಮೇಲೂ ಅಪಾರವಾದ ಕಾಳಜಿ ತೋರಿಸುವ ರಾಮ್ ನನ್ನ ಜೀವನದಲ್ಲಿ ಬಂದಿದ್ದಾರೆ ಎಂದು ಬರೆದುಕೊಂಡಿದ್ದರು.

ಗಾಯಕಿ ಸುನಿತಾ ರವರಿಗೆ ಆಕಾಶ್ ಹಾಗೂ ಶ್ರೇಯಾ ಎಂಬ ಇಬ್ಬರು ಮಕ್ಕಳಿದ್ದು, ಅವರೇ ಮುಂದೆ ನಿಂತು ತಾಯಿಯ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಗಾಯಕಿ ಸುನಿತಾ ತೆಲುಗು ಸೇರಿದಂತೆ ತಮಿಳು, ಕನ್ನಡದಲ್ಲೂ ಅನೇಕ ಹಾಡುಗಳನ್ನು ಹಾಡಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.

Trending

To Top