ಮುಂಬೈ: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ರವರಿಗೆ ಮದುವೆಯಾಗಿ 6 ವರ್ಷಗಳಾಗಿದೆ. ಇದೀಗ ತಾವು ತಾಯಿಯಾಗುತ್ತಿರುವ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡು ಪೊಟೋವನ್ನು ಸಹ ಶೇರ್ ಮಾಡಿದ್ದಾರೆ.
ಗಾಯಕಿ ಶ್ರೇಯಾ ಘೋಷಲ್ ಬಾಲಿವುಡ್ ಸೇರಿದಂತೆ ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹೀಗೆ ಅನೇಕ ಚಿತ್ರಗಳಲ್ಲಿನ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿರುವ ಶ್ರೇಯಾ ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯ ಚಿತ್ರಗಳಲ್ಲಿ, ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರಗಳಲ್ಲಿ ಹಾಡಿರುವ ಗೀತೆಗಳು ಸೂಪರ್ ಹಿಟ್ ಆಗಿದೆ.
ಇದೀಗ ಶ್ರೇಯಾ ಘೋಷಾಲ್ ತಾಯಿಯಾಗುತ್ತಿರುವ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನು ಈ ಸಂತಸದ ವಿಚಾರವನ್ನು ಹಂಚಿಕೊಳ್ಳಲು ತುಂಬಾ ರೋಮಾಂಚನವಾಗುತ್ತಿದೆ. ಶ್ರೇಯಾದಿತ್ಯ ಆಗಮನದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆರ್ಶೀವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಕಳೆದ 2015 ರಲ್ಲಿ ಗಾಯಕಿ ಶ್ರೇ ಘೋಷಾಲ್ ಶೀಲಾದಿತ್ಯ ಮುಖೋಪಾಧ್ಯಾಯ ಎಂಬುವವರೊಂದಿಗೆ ಮದುವೆಯಾಗಿತ್ತು. ಇವರಿಬ್ಬರಿದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಬಂಗಾಳಿ ಶೈಲಿಯಂತೆ ಇಬ್ಬರ ಮದುವೆ ಸಾಂಪ್ರದಾಯ ಬದ್ದವಾಗಿ ನಡೆದಿತ್ತು.