Film News

ಟಾಪ್ ನಟಿಯೊಂದಿಗೆ ಗಾಯಕ ಸಂಜಿತ್ ಹೆಗ್ಡೆ ನ್ಯೂ ಮೂವಿ!

ಹೈದರಾಬಾದ್: ಇಲ್ಲಿಯವರೆಗೂ ಹಾಡುಗಳ ಮೂಲಕವೇ ಮೋಡಿ ಮಾಡಿದ ಬಹುಭಾಷಾ ಗಾಯಕ ಸಂಜಿತ್ ಹೆಗ್ಡೆ ನಟನಾಗಿ ದಕ್ಷಿಣ ಭಾರತದ ಖ್ಯಾತ ನಟಿಯೊಂದಿಗೆ ಸಿನೆಮಾವೊಂದರಲ್ಲಿ ತೆರೆಹಂಚಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಗಾಯಕ ಸಂಜಿತ್ ಹೆಗ್ಡೆ ಟಾಲಿವುಡ್‌ನ ಪಿಟ್ಟ ಕಥಲು ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದ್ದು, ಈ ಚಿತ್ರದಲ್ಲಿ ಖ್ಯಾತ ನಟಿ ಶ್ರುತಿ ಹಾಸನ್ ರವರೊಂದಿಗೆ ತೆರೆಹಂಚಿಕೊಂಡಿದ್ದಾರೆ. ೪ ಬೋಲ್ಡ್ ಬೆಡಗಿಯರ ಕಥೆಯನ್ನು ಒಳಗೊಂಡ ಚಿತ್ರ ಇದಾಗಿದ್ದು, ನಾಲ್ಕು ಸಣ್ಣ ಕಥೆಗಳು ಈ ಚಿತ್ರದಲ್ಲಿರಲಿದೆ. ಈ ಚಿತ್ರದಲ್ಲಿ ಟಾಪ್ ನಟಿಯರಾದ ಶ್ರುತಿ ಹಾಸನ್, ಈಶಾ ರೆಬ್ಬಾ, ಲಕ್ಷ್ಮೀ ಮಂಚು, ಅಮಲಾ ಪೌಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸತ್ಯದೇವ್, ಸಾನ್ವೆ ಮೇಘನಾ, ಆಶಿಮಾ ನಾರ್ವಲ್ ಸಹ ಅಭಿನಯಿಸಿದ್ದಾರೆ. ಪ್ರಸ್ತುತ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇಬ್ಬರೂ ಬೋಲ್ಡ್ ಆಗಿ ನಟಿಸಿದ್ದು, ಈ ಸಿನೆಮಾ ಬಿಡುಗಡೆಯ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಈ ಚಿತ್ರವನ್ನು ನೆಟ್ ಫ್ಲಿಕ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಆಂಥಾಲಜಿ ಸಿನೆಮಾ ಇದಾಗಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕರಾದ ತರುಣ್ ಭಾಸ್ಕರ್, ನಂದಿನಿ ರೆಡ್ಡಿ, ನಾಗ್ ಅಶ್ವಿನ್, ಸಂಕಲ್ಪ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಸಂಜಿತ್ ಹೆಗ್ಡೆ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದೆ ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಭಾರಿ ಜನಪ್ರಿಯತೆ ಪಡೆದುಕೊಂಡ ಇವರು ಇದೀಗ ಸಿನೆಮಾದಲ್ಲಿ ನಟಿಸಿದ್ದು ಯಾವ ರೀತಿ ಸಕ್ಸಸ್ ಆಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Trending

To Top