ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಹೇಮಂತ್ ಕುಮಾರ್ ಅವರು ಬಹು ಕಾಲದ ಗೆಳತಿಯೊಂದಿಗೆ ನಾಲ್ಕು ದಿನಗಳ ಹಿಂದೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಮ್ಯಾರೇಜ್ ಆದರು. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕೃತಿಕ ಅವರು ಹೇಮಂತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕೊರೋನ ಹೆಚ್ಚಾಗುತ್ತಿರುವ ಕಾರಣದಿಂದ ತುಂಬಾ ಸರಳವಾಗಿ ಮದುವೆ ಕಾರ್ಯಕ್ರಮವನ್ನ ಮಾಡಿಕೊಂಡರು. ರಿಯಲ್ ಸ್ಟಾರ್ ಉಪೇಂದ್ರ ಅವರು ಮದುವೆ ಮಂಟಪಕ್ಕೆ ತೆರಳಿ ನವ ಜೋಡಿಗೆ ಶುಭಾಶಯಗಳನ್ನ ತಿಳಿಸಿದ್ದರು. ಪ್ರೀತ್ಸೆ ಚಿತ್ರದಿಂದ ತಮ್ಮ ಗಾಯನವನ್ನ ಶುರು ಮಾಡಿದ್ದರು ಹೇಮಂತ್, ಅನೇಕ ಸ್ಟಾರ್ ನಟರಿಗೆ ಹೇಮಂತ್ ಹಾಡಿದ್ದಾರೆ. ಅನೇಕ ಸಂಗೀತ ನಿರ್ದೇಶನರ ಜೊತೆ ಹೇಮಂತ್ ಕೆಲಸ ಮಾಡಿದ್ದಾರೆ. ಮಾಡಿದ್ದಾರೆ.
ಡಿ ಬಾಸ್ ಅವರ ಸಿನಿಮಾಗಳಲ್ಲಿ ಡಿ ಬಾಸ್ ಅವರಿಗೆ ಎಲ್ಲಾ ಹಾಡುಗಳನ್ನ ಹಾಡುವವರು ಹೇಮಂತ್ ಅವರೇ. ಉಪೇಂದ್ರ, ಶಿವ ರಾಜಕುಮಾರ್, ಪುನೀತ್ ರಾಜ್ ಕುಮಾರ್ , ಯಶ್, ಗಣೇಶ್ ಸೇರಿದಂತೆ ಸಾಕಷ್ಟು ನಟರ ಚಿತ್ರಗಳಲ್ಲಿ ಹಾಡಿದ್ದಾರೆ.ಹೇಮಂತ್ ಕುಮಾರ್ ಅವರ ಗುರುಗಳು ಹಂಸಲೇಖ. ಹಂಸಲೇಖಾ ಅವರೇ ಹೇಮಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದರು.
ಮದುವೆ ಬಗ್ಗೆ ಗಾಯಕ ಹೇಮಂತ್ ಕುಮಾರ್ ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. “ಸಾಧಾರಣ ಬದುಕಿನಲ್ಲಿ ಸಾಕಷ್ಟು ಸಂಜೆಯ ರಂಗು ಒಮ್ಮೆಲೆ ಬಂದಂಥ ಅನುಭವಕೆ.. ಪ್ರೀತಿಯ ಹೆಸರಿಟ್ಟಾಯಿತು💑.. ಪ್ರತಿದಿನ ಪ್ರೀತಿಯ ಆಚರಿಸಲೆಂದೇ.. ಮದುವೆಯ ಸಂಭ್ರಮ ಸುಸಂಪನ್ನವಾಯಿತು👰🏻🤵🏻.. ನಮ್ಮ ಅಕ್ಕರೆಯ ಎದೆಯ ಮೇಲಿಷ್ಟು ಅಕ್ಷತೆಯ ಬೀರಿ ಹರಸಿದ ನಿಮ್ಮೆಲ್ಲರಗೂ ಹೃದಯದಾಳದಿಂದ ನಮನಗಳು… ನಿಮ್ಮೆಲ್ಲರ ಶುಭ ಹಾರೈಕೆ ಕೋರುವ ಹೇಮಂತ್ ಹಾಗು Dr ಕೃತ್ತಿಕಾ..”ಎಂದು ಕ್ಯಾಪ್ಶನ್ ಬರೆದಿದ್ದಾರೆ.