News

(video)ತಾಕತ್ ಇದ್ರೆ ಮೈಸೂರಿನಲ್ಲಿ ಸ್ಮಾರಕ ಮಾಡಲಿ! ವಿಷ್ಣು ಮಗಳ ಖಡಕ್ ಮಾತು

simha1

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಹಾಗು ಮೊನ್ನೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮಡದಿ ಹಾಗು ಮಗಳು ವಿಷ್ಣು ಅವರ ಸ್ಮಾರಕದ ವಿಚಾರದ ಬಗ್ಗೆ ಮೀಡಿಯಾ ಮುಂದೆ ಸರ್ಕಾರಕ್ಕೆ ಸಕತ್ ಕ್ಲಾಸ್ ತೆಗೆದು ಕೊಂಡಿದ್ದರು. ಅದಲ್ಲದೆ ಕನ್ನಡದ ನಿರ್ಮಾಪಕರ ಬಗ್ಗೆ ಕೂಡ ಖಡಕ್ ಆಗಿ ಮಾತಾಡಿದ್ದರು. ಇವತ್ತು ಕನ್ನಡ ನಿರ್ಮಾಪಕರಾದ ಮುನಿರತ್ನ ಹಾಗು ಕೆ ಮಂಜು ಅವರು ಭಾರತಿ ವಿಷ್ಣುವರ್ಧನ್ ಅವರ ಮನೆಗೆ ತೆರೆಳಿ ಅವರ ಜೊತೆ ಮಾತಾಡಿದ್ದಾರೆ. ಇಂದು ವಿಷ್ಣು ಅವರ ಮಗಳು “ಸ್ಮಾರಕ ಆದ್ರೆ, ಮೈಸೂರಿನಲ್ಲೇ ಆಗಬೇಕು, ಇಲ್ಲ ಅಂದ್ರೆ ಬೇಡ” ಎಂದು ಹೇಳಿದ್ದಾರೆ (video)ಇವರಿಗೆ ತಾಕತ್ ಇದ್ರೆ ಮೈಸೂರಿನಲ್ಲಿ ಸ್ಮಾರಕ ಮಾಡಲಿ! ವಿಷ್ಣು ಮಗಳ ಖಡಕ್ ಮಾತು, ಈ ಕೆಳಗಿನ ವಿಡಿಯೋ ನೋಡಿರಿ

ನಿಮಗೆಲ್ಲ ಗೊತ್ತಿರೋ ಹಾಗೆ ಇದ್ದಕಿದ್ದ ಹಾಗೆ ನೆನ್ನೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮಡದಿ ಭಾರತಿ ವಿಷ್ಣುವರ್ಧನ್ ಹಾಗು ಮಗಳು ನೆನ್ನೆ ಪ್ರೆಸ್ ಮೀಟ್ ಮಾಡಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ ಬಗ್ಗೆ ಸರ್ಕಾರಕ್ಕೆ ತರಾಟೆ ತೆಗೆದುಕೊಂಡರು. ಮಾಧ್ಯಮ ದವರ ಜೊತೆ ಮಾತಾಡುವಾಗ ವಿಷ್ಣು ಅವರ ಮಡದಿ ಭಾರತಿ ವಿಷ್ಣುವರ್ಧನ್ ಅವರು “ಬಹಳ ನಟರು, ನಿರ್ಮಾಪಕರು ವಿಷ್ಣು ಹೆಸರನ್ನು ಹೇಳಿಕೊಂಡು ದುಡ್ಡು ಮಾಡಿಕೊಂಡರು, ನಮ್ಮ ಜೊತೆ ಯಾರು ಬಂದು ವಿಷ್ಣು ಸ್ಮಾರಕದ ಬಗ್ಗೆ ಒಂದು ದಿನ ಕೂಡ ಮಾತಾಡಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರು ವಿಧಿ ವಶರಾಗಿ ಸುಮಾರು 9 ವರ್ಷಗಳು ಕಳೆದಿವೆ. ಈ 9 ವರ್ಷಗಳಲ್ಲಿ ಅದೆಷ್ಟೋ ಸರ್ಕಾರಗಳು ಬಂದಿವೆ! ವಿಷ್ಣು ಅವರ ಕುಟುಂಬದವರು ಎಲ್ಲಾ ಮುಖ್ಯಮಂತ್ರಿಗಳ ಹತ್ತಿರ ರಿಕ್ವೆಸ್ಟ್ ಮಾಡಿದ್ದರೂ ಯಾರು ಕೂಡ ಸರಿಯಾಗಿ ವಿಷ್ಣು ಸ್ಮಾರಕದ ಬಗ್ಗೆ ಮಾತಾಡಿಲ್ಲ ಹಾಗು ಎಲ್ಲರೂ ಬರಿ ಸುಳ್ಳು ಸುಳ್ಳು ಆಶ್ವಾಸನೆ ಕೊಡುತ್ತಿದ್ದರು. ವಿಷ್ಣು ಕುಟುಂಬದವರು ಹೇಳುವ ಪ್ರಕಾರ ಈಗ ಕೆಲವರು ಟಿವಿ ಅಲ್ಲಿ ಕೂತುಕೊಂಡು ವಿಷ್ಣು ಬಗ್ಗೆ ವಿಷ್ಣು ಸ್ಮಾರಕದ ಬಗ್ಗೆ ಘಂಟೆ ಗಟ್ಟಲೆ ಮಾತಾಡುತ್ತಾರೆ ಅದರ ನಮ್ಮ ಕುಟುಂಬದ ಜೊತೆ ಯಾರು ಕೂಡ ಇದುವರೆಗೂ ಮಾತಾಡಿಲ್ಲ. ವಿಷ್ಣು ಅವರ ಮಗಳು ಹೇಳುವ ಪ್ರಕಾರ “ನಮ್ಮನ್ನು ಯಾರು ಕೇರ್ ಮಾಡಲ್ಲ.. ಎಲ್ಲೆಡೆ ನಮ್ಮನ್ನು ಅವಮಾನ ಮಾಡುತ್ತಾರೆ..ಯಾರು ನಮಗೆ ಸಪೋರ್ಟ್ ಮಾಡುತ್ತಿಲ್ಲ” ಎಂದು ತಮ್ಮ ದುಕ್ಕವನ್ನು ಹೇಳಿದ್ದಾರೆ. ಇನ್ನೊಂದೆಡೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ನೆನ್ನೆ ಕುಮಾಸ್ವಾಮಿ ಅವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅನಿರುಧ್ ಏನ್ ಹೇಳಿದ್ರು ಅಂದ್ರೆ “ಸಾಹಸ ಸಿಂಹ ವಿಷ್ಣುವರ್ಧನ್ ಅವರು ಸಿಂಹ ಇದ್ದ ಹಾಗೆ, ಅವರ ಅಭಿಮಾನಿಗಳು ಕೂಡ ಸಿಂಹ ಗಳು, ಇಷ್ಟು ವರ್ಷದ ತಾಳ್ಮೆ ಈಗ ಮುಗಿದಿದೆ, ಸಾಹಸ ಸಿಂಹ ಅಭಿಮಾನಿಗಳು ತಿರುಗಿ ಬಿದ್ರೆ ಏನ್ ಆಗುತ್ತೋ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಆದಷ್ಟು ಬೇಗ ವಿಷ್ಣು ಸ್ಮಾರಕದ ಕಡೆ ಸ್ವಲ್ಪ ಗಮನ ಕೊಟ್ಟು ಆದಷ್ಟು ಬೇಗ ವಿಷ್ಣುವರ್ಧನ್ ಅವರಿಗೆ ಒಂದು ಗೌರವ ಸಲ್ಲಿಸಲಿ ಎಂಬುದು ನಮ್ಮ ಆಸೆ.

Click to comment

You must be logged in to post a comment Login

Leave a Reply

Trending

To Top