Kannada Serials

ಸಿಲ್ಲಿ ಲಲ್ಲಿ ಖ್ಯಾತಿಯ ಸಮಾಜ ಸೇವಕಿ ಲಲಿತಾಂಬ-ಮಂಜು ಭಾಷಿಣಿ ಈಗ ಎಲ್ಲಿದ್ದಾರೆ, ಏನು ಮಾಡ್ತಾ ಇದ್ದಾರೆ ಗೊತ್ತಾ!

ಸಿಲ್ಲಿ ಲಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ! ಸಿಲ್ಲಿ ಲಲ್ಲಿ ಎಂದಾಕ್ಷಣ ನಮ್ಮ ಬಾಲ್ಯದ ದಿನಗಳು ಜ್ಞಾಪಕ ಬರುತ್ತದೆ! ETV ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದ ಫೇಮಸ್ ಹಾಸ್ಯ ಧಾರಾವಾಹಿಗಳಲ್ಲಿ ಸಿಲ್ಲಿ ಲಲ್ಲಿ ಕೂಡ ಒಂದಾಗಿತ್ತು. ಆ ಕಾಲದಲ್ಲಿ ಸಿಲ್ಲಿ ಲಲ್ಲಿ ಧಾರಾವಾಹಿಯ TRP ಬೇರೆ ಎಲ್ಲಾ ದಾರಾವಾಹಿಗಳಿಗಿಂತ ಅತೀ ಹೆಚ್ಚಿನ ದಾಖಲೆ ಮಾಡಿತ್ತು! ಈಗ ಕೂಡ ಸಿಲ್ಲಿ ಲಲ್ಲಿ ಧಾರಾವಾಹಿಯ ಮರು ಪ್ರಸಾರದ ಎಪಿಸೋಡ್ ಗಳನ್ನೂ ಅತೀ ಹೆಚ್ಚಿನ ಜನರು ವೀಕ್ಷಿಸುತ್ತಿದ್ದಾರೆ! ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಮಂಜು ಭಾಷಿಣಿ ಅವರು ಲಲ್ಲಿ (ಅಂದರೆ ಸಮಾಜ ಸೇವಕಿ ಲಲಿತಾಂಬ) ಪಾತ್ರದಲ್ಲಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು! ಮಂಜು ಭಾಷಿಣಿ ಅವರು ಸದ್ಯ ಎಲ್ಲಿದ್ದಾರೆ, ಏನು ಮಾಡ್ತಾ ಇದ್ದಾರೆ ಗೊತ್ತಾ! ಮುಂದೆ ಓದಿರಿ..

ಧಾರಾವಾಹಿಗಳಿಗೆ ಬರುವ ಮುನ್ನ ಮಂಜು ಭಾಷಿಣಿ ಅವರು ನಾಲಕ್ಕು ಕನ್ನಡ ಸಿನಿಮಾ ಗಳಲ್ಲಿ ನಟಿಸಿದ್ದಾರೆ! ಅಮ್ಮವರ ಗಂಡ, ಭೂಮಿ ಗೀತಾ, ಗಂಡ ಹೆಂಡತಿ ಹಾಗು ರಾಜ್ ದಿ ಷೋ ಮ್ಯಾನ್! ನಂತರ ಮಂಜು ಭಾಷಿಣಿ ಅವರು ದಾರಾವಾಹಿಗಳಾದ ಸಿಲ್ಲಿ ಲಲ್ಲಿ, ಮಾಯಾಮೃಗ ಹಾಗು ಮಳೆಬಿಲ್ಲು ರಲ್ಲಿ ನಟನೆ ಮಾಡಿದ್ದಾರೆ! ಇಡೀ ಕರ್ನಾಟಕಕ್ಕೆ ಮಂಜು ಭಾಷಿಣಿ ಅವರು ಸಮಾಜ ಸೇವಕಿ ಲಲಿತಾಂಬ ಎಂದೇ ಬಹಳ ಫೇಮಸ್! ಸದ್ಯ ಮಂಜು ಭಾಷಿಣಿ ಅವರು ತಮ್ಮ ಸಿಲ್ಲಿ ಲಲ್ಲಿ ತಂಡದವರಾದ ಸುನೇತ್ರ (ವಿಶಾಲೂ) , ರೂಪ ಪ್ರಭಾಕರ್ (ಸಿಲ್ಲಿ), ಹಾಗು ಪ್ರಶಾಂತ್ (ಪಲ್ಲಿ) ಅವರ ಜೊತೆ “ಜಾ#ಲಿ ಬಾ#ರ್” ಎಂಬ ಹೊಸ ಯೌ#ಟ್ಯೂ#ಬ್ ಚಾ#ನಲ್ ಅನ್ನು ಶುರು ಮಾಡಿದ್ದಾರೆ!

ಹೌದು! ಸಿಲ್ಲಿ ಲಲ್ಲಿ ಕೆಲಸ ಮಾಡಿದ್ದ ಈ ಎಲ್ಲಾ ನಟರು ಈಗ ಜಾ#ಲಿ ಬಾ#ರ್ ಎಂಬ ಹೊಸ ಚಾನ#ಲ್ ಓಪನ್ ಮಾಡಿ, ಪ್ರತಿ ವಾರ ಕೂಡ ಕಾಮಿಡಿ ಎಪಿಸೋಡ್ ಗಳನ್ನೂ ಹಾಕುತ್ತಿದ್ದಾರೆ. ಕೆಲವೊಂದು ವಿಡಿಯೋಗಲ್ಲು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ಈ ಕರೋನ ಲಾಕ್ ಡೌನ್ ಇದ್ದಾಗ, ಧಾರಾವಾಹಿಗಳ ಕೆಲಸಗಳು ಕಡಿಮೆ ಇದ್ದಾಗ ಮಂಜು ಭಾಷಿಣಿ ಅವರು ತಮ್ಮದೇ ಆದ ಒಂದು ಹೊಸ ಚಾನಲ್ ಓಪನ್ ಮಾಡಿದ್ದಾರೆ! ಪ್ರತಿ ವಾರ ಕೂಡ ನೀವು ಅದ್ಭುತ ಹಾಸ್ಯವಿರುವ ಎಪಿಸೋಡ್ ಗಳನ್ನೂ ನೀವು ಇದರಲ್ಲಿ ನೋಡಬಹುದು!

ಇನ್ನೊಂದು ಕಡೆ, ಸಿನಿಮಾ ಕ್ಷೇತ್ರದಿಂದ ದೂರ ಉಳಿದಿರುವ ಮಂಜು ಭಾಷಿಣಿ ಅವರು, ಈಗ ಕೂಡ ಕೆಲವು ಕನ್ನಡ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಾರೆ! ಮಂಜು ಭಾಷಿಣಿ ಅವರು 20 ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಧಾರಾವಾಹಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ! ಇದಲ್ಲದೆ ಮಂಜು ಭಾಷಿಣಿ ಅವರು ಧಾರಾವಾಹಿಗಳಿಗೆ ಸ್ಕ್ರಿಪ್ಟ್, ಕಥೆ , ಸಂಭಾಷಣೆ ಕೂಡ ಬರೆಯುತ್ತಾರೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಲೈಕ್ ಮಾಡಿರಿ.

Trending

To Top