ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಕೆಲವು ದಿನಗಳಿಂದ ಕರುನಾಡ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸದ್ಯ ಶ್ರೀಗಳಿಗೆ ತಮ್ಮ ಮಠದಲ್ಲೇ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಸದ್ಯ ಶ್ರೀಗಳನ್ನು ನೋಡಲು, ಅವರ ಆರೋಗ್ಯವನ್ನು ವಿಚಾರಿಸಲು ಹಲವಾರು ಕನ್ನಡ ನಟರು ಅಶ್ರಮ್ಮಕ್ಕೆ ತೆರಳುತ್ತಿದ್ದಾರೆ. ಇತ್ತೀಚಿಗೆ ಜಗ್ಗೇಶ್ ಅವರು ಕೂಡ ಶ್ರೀಗಳನ್ನು ಭೇಟಿ ಮಾಡಿದ್ದರು. ನೆನ್ನೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಶ್ರೀಗಳ ಆರೋಗ್ಯವನ್ನು ವಿಚಾರಿಸಿ, ಅದಾದ ನಂತರ ಮಾಧ್ಯಮದವರ ಜೊತೆ ಮಾತಾಡಿದ್ದಾರೆ. ಮಾತಾಡಬೇಕಾದ್ರೆ, ಶ್ರೀಗಳಿಗೆ ಭಾರತ ರತ್ನ ಕೊಡಲೇಬೇಕು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ, ಸುದೀಪ್ ಅವರು ಶ್ರೀಗಳ ಬಗ್ಗೆ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡ ಮೀಡಿಯಾ ದಲ್ಲಿ ಮತ್ತೆ ನಮ್ಮ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಧ್ಯ ಬೆಂಕಿ ಇಡಲು ಹೊರಟಿದ್ದಾರೆ. ವಿಷ್ಯ ಏನಪ್ಪಾ ಅಂದರೆ ಇತ್ತೀಚಿಗೆ ನಮ್ಮ ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ದರ್ಶನ್ ಅವರಿಗಂತ ಮದಕರಿ ನಾಯಕ ಎಂಬ ಚಿತ್ರ ಮಾಡುತ್ತೀನಿ ಎಂದು ಹೇಳಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರುನಾಡ ಅಭಿನಯ ಚಕ್ರವರ್ತಿ ಅವರ ಪೈಲ್ವಾನ್ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಘಂಟೆ ಗಳಲ್ಲಿ ಇಡೀ ದೇಶದಲ್ಲಿ ಪೈಲ್ವಾನ್ ಚಿತ್ರದ ಟೀಸರ್ ಟ್ರೆಂಡಿಂಗ್ ಆಗಿದೆ ಹಾಗು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದೆ. ಇದಲ್ಲದೆ ಪೈಲ್ವಾನ್ ಚಿತ್ರದ ಟೀಸರ್ ನೋಡಿ ತಾರೆಗಳಾದ, ಗೋಲ್ಡನ್ ಸ್ಟಾರ್ ಗಣೇಶ್, ಬಾಲಿವುಡ್ ಸೂಪರ್ ಸ್ಟಾರ್ ಆದ ಸಲ್ಮಾನ್ ಖಾನ್, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪ್ರಭುದೇವ, ರಾಮ್ ಗೋಪಾಲ್ ವರ್ಮಾ, ಪವನ್ ವಡೆಯರ್, ಪುರಿ ಜಗನ್ನಾಥ್ ಅವರು ಟ್ವೀಟ್ ಮಾಡಿದ್ದಾರೆ. ಹಾಗು ಇನ್ನು ಹತ್ತು ಹಲವಾರು ಭಾರತದ ನಟರು ಕಿಚ್ಚ ಸುದೀಪ್ ಬಗ್ಗೆ ಮಾತಾಡಿದ್ದಾರೆ. ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ಅವರನ್ನು ಸುಲ್ತಾನ್ ಎಂದು ಹೇಳಿದ್ದಾರೆ, ಸಾಲಮಾನ್ ಖಾನ್ ಅವರ ಟ್ವೀಟ್ ಹೇಗಿತ್ತು ನೋಡಿ, ಈ ಕೆಳಗಿನ ಟ್ವೀಟ್ ಗಳನ್ನೂ ನೋಡಿರಿ
ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ , ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಪೈಲ್ವಾನ್ ಚಿತ್ರವನ್ನು ನಮ್ಮ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಸುಶಾಂತ್ ಸಿಂಗ್ ಹಾಗು Kabir Duhan ಸಿಂಗ್ ಅವರು ನಟಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಈಗಷ್ಟೇ ಬಿಡುಗಡೆ ಆಗಿ ಸಕತ್ ವೈರಲ್ ಆಗಿದೆ. ಇನ್ನೂ ಪೈಲ್ವಾನ್ ಚಿತ್ರದ ಟೀಸರ್ ನೋಡಿ ತೆಲುಗು ಚಿತ್ರ ರಂಗದ, ತಮಿಳು ಚಿತ್ರ ರಂಗದ, ಬಾಲಿವುಡ್ ನಿರ್ದೇಶಕರು ಕೂಡ ಕಿಚ್ಚ ಸುದೀಪ್ ಅವರಿಗೆ ಶಬಾಷ್ ಎಂದು ಹೇಳಿದ್ದಾರೆ. ಅವರು ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ಟ್ವೀಟ್ ನಲ್ಲಿ ನೋಡಿರಿ
ಪೈಲ್ವಾನ್ ಚಿತ್ರದ ಟೀಸರ್ ಸಕತ್ ಆಗಿದೆ ಗುರು, ಟೀಸರ್ ನೋಡಿದ ಎಲ್ಲಾರೂ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಸದ್ಯ ಪೈಲ್ವಾನ್ ಚಿತ್ರದ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ, ನೀವು ಪೈಲ್ವಾನ್ ಚಿತ್ರದ ಟೀಸರ್ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ ಇತ್ತೀಚಿಗೆ ನಮ್ಮ ಕನ್ನಡ ಚಿತ್ರಗಳು ಇಡೀ ದೇಶದ ಗಮನ ಸೆಳೆಯುತ್ತಿವೆ. ನಮ್ಮ ಭಾರತದ ದೊಡ್ಡ ದೊಡ್ಡ production ಹೌಸ್ ಗಳು ನಮ್ಮ ಕನ್ನಡ ಚಿತ್ರ ರಂಗದತ್ತ ಮುಖಮಾಡಿವೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಇತ್ತೀಚಿಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರ ಇಡೀ ಭಾರತದಲ್ಲಿ 5 ಭಾಷೆಯಲ್ಲಿ ಬಿಡುಗಡೆ ಆಗಿ ಎಲ್ಲರ ಪ್ರಶಂಸೆಗೆ ಕಾರಣ ವಾಗಿತ್ತು. ಈಗ ಪ್ರತಿಯೊಬ್ಬ ಕನ್ನಡಿಗ ಖುಷಿ ಪಡುವ ಮತ್ತೊಂದು ಸುದ್ದಿ ಬಂದಿದೆ. ಅದೇನಪ್ಪ ಅಂದರೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ ಕನ್ನಡ ಚಿತ್ರ ಪೈಲ್ವಾನ್ ಬರೋಬ್ಬರಿ 8 ಭಾಷೆಯಲ್ಲಿ ಡಬ್ ಆಗಲಿದೆ.
ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ! ನಮ್ಮ ಕಿಚ್ಚ ಸುದೀಪ್ ಅವರು ಈಗಾಗಲೇ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ನಟಿಸಿ ಇಡೀ ದೇಶದಲ್ಲಿ ಮನೆ ಮಾತಾಗಿದ್ದಾರೆ. ಈಗ ಅವರ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರಕ್ಕೆ ಬರೋಬ್ಬರಿ 30 ಕೋಟಿಯ ಡಬ್ಬಿಂಗ್ ರೈಟ್ಸ್ ಬಂದಿದೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಭಾರತದ 8 ಭಾಷೆಯಲ್ಲಿ ಡಬ್ ಆಗಲಿದೆ. ಇದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಾಗು ಕನ್ನಡಿಗರಿಗೆ ಸಂತೋಷ ತಂದಿರುವ ಸುದ್ದಿ ಎಂದೇ ಹೇಳಬಹುದು. ಕಿಚ್ಚ ಸುದೀಪ್ ಅವರಿಗೆ ಹಾಗು ಪೈಲ್ವಾನ್ ಚಿತ್ರ ತಂಡಕ್ಕೆ ಒಂದು ಸಲಾಂ!
