News

ಸ್ಪೋಟಕ ಸುದ್ದಿ – ಸಿದ್ದಗಂಗಾ ಶ್ರೀಗಳಿಗೆ 6 ತಿಂಗಳ ಮೊದಲೇ ಗೊತ್ತಿತ್ತಾ! ಬಯಲಾಯ್ತು ರಹಸ್ಯ

swam

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವಾರವಷ್ಟೇ ನಮ್ಮ ಕರುನಾಡ ನಡೆದಾಡುವ ದೇವರು ಎಂದೇ ಪ್ರಖ್ಯಾತಿ ಆಗಿದ್ದ, ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ರಾದರು. ಈ ಸುದ್ದಿಯನ್ನು ಕೇಳಿ ಇಡೀ ಕರ್ನಾಟಕವೇ ಕಣ್ಣೀರಿಟ್ಟಿತು. ಕಳೆದವಾರವಷ್ಟೇ ಶ್ರೀಗಳನ್ನು ಮಠದ ಆವರಣದಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಯಿತು. ಈಗ ಸ್ವಾಮಿಗಳ ಬಗ್ಗೆ ಮತ್ತೊಂದು ಸ್ಪೋಟಕ ಸುದ್ದಿ ಹೊರ ಬಿದ್ದಿದೆ! ಇಂತಹ ನಡೆದಾಡುವ ದೇವರಿಗೆ ತಾವು ಲಿಂಗೈಖ್ಯೆ ಆಗುವ 6 ತಿಂಗಳ ಹಿಂದೆ ಈ ವಿಷ್ಯ ಗೊತ್ತಿತ್ತಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಇದಕ್ಕೆ ಕಾರಣ ಬಾಗಲಕೋಟೆಯ ವಿಭೂತಿ ತಯಾರಿಕರ ಆ ಒಂದು ಹೇಳಿಕೆ!
ನಮ್ಮ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಪ್ರತಿ ವರ್ಷ ಕೂಡ ಬಾಗಲಕೋಟೆ ಅಲ್ಲಿರುವ ವಿಭೂತಿ ತಯಾರಿಕರ ಹತ್ತಿರ ವಿಭೂತಿಗಳಿರುವ ಮೂಟೆ ಗಳನ್ನೂ ತರಿಸಿ ಕೊಳ್ಳುತ್ತಿದ್ದರು. ಮೊನ್ನೆ ನಮ್ಮ ಶ್ರೀಗಳು ಲೈಂಗೈಕ್ಯ ಆದ ನಂತರ ಬಾಗಲಕೋಟೆಯ ವಿಭೂತಿ ತಯಾರಿಕರು ಕೊಟ್ಟರು ಒಂದು ಸ್ಪೋಟಕ ಹೇಳಿಕೆ! ಅವರು ಏನ್ ಹೇಳಿದ್ದಾರೆ ಗೊತ್ತ “ಸಿದ್ದಗಂಗಾ ಶ್ರೀಗಳು, ಆರು ತಿಂಗಳ ಹಿಂದೆ ಅಷ್ಟೇ ನಮ್ಮನ್ನು, ಮಠಕ್ಕೆ ಕರೆಸಿಕೊಂಡಿದ್ದರು, ನಮಗೆ ಶ್ರೀಗಳು 2 ಸಾವಿರ ಕ್ರಿಯಾ ಗಟ್ಟಿ, 8000 ವಿಭೂತಿ ಘಟ್ಟಿ ಗಳನ್ನೂ ತಯಾರಿಸಿ ಇಟ್ಟಿರಿ, ಎಂದು ಶ್ರೀಗಳು ನಮಗೆ ಹೇಳಿದ್ದರು, ನಾವು ಯಾಕೆ ಬುದ್ದಿ ಇಷ್ಟೊಂದು ಅಂತ ಕೇಳಿದಾಗ, ಅದು ಮಠದ ಕೆಲಸಗಳಿಗೆ ಬೇಕು” ಎಂದು ಶ್ರೀಗಳು ಹೇಳಿದ್ದರು. ಇದಲ್ಲದೆ ಇದನೆಲ್ಲ ಶುದ್ಧ ದೇಸಿ ಹಸುವಿನ ಸಗಣಿ ಇಂದ ತಯಾರಿಸಿ ಎಂದು ಶ್ರೀಗಳು ಇವರು ಹೇಳಿದ್ದರು.
ಈ ಸುದ್ದಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ರಾದ ನಂತರ ಎಲ್ಲರಿಗೂ ತಿಳಿದು ಬಂದಿದೆ. ಈ ವಿಷ್ಯ ಕೇಳಿ ಮಠದ ಭಕ್ತರಿಗೆ ಶಾಕ್ ಆಗಿದೆ. ನಮ್ಮ ಶ್ರೀಗಳಿಗೆ ತಾವು ಲಿಂಗೈಕ್ಯ ರಾಗುವ ಸುದ್ದಿ ಮುಂಚೆಯೇ ಗೊತ್ತಿತ್ತಾ? ಎಂದು ಎಲ್ಲಾರು ಮಾತಾಡುತ್ತಿದ್ದಾರೆ. ಇನ್ನೊಂದು ಕಡೆ ಸಿದ್ದಗಂಗಾ ಮಠದ ಒಂದು ಶ್ವಾನ ಕೂಡ ಶ್ರೀಗಳು ಲಿಂಗೈಕ್ಯ ಆದಾಗಿನಿಂದ ಕಾಣಿಸುತ್ತಿಲ್ಲ! ಶ್ರೀಗಳಿಗೆ ಈ ಶ್ವಾನ ಎಂದರೆ ಬಹಳ ಪ್ರೀತಿ ಇತ್ತು, ಆ ಶ್ವಾನಕ್ಕೆ ಯಾವಾಗಲು ಶ್ರೀಗಳು ತಿನಲ್ಲಿಕ್ಕೆ ಊಟವನ್ನು ಹಾಕುತ್ತಿದ್ದರು. ಈ ಎಲ್ಲಾ ಸುದ್ದಿ ಗಳನ್ನೂ ಕೇಳಿ, ಶ್ರೀಗಳು ನಿಜವಾಗಿಯೂ ಒಬ್ಬ ಪವಾಡ ಪುರುಷರು ಎಂದು ಗೊತ್ತಾಗುತ್ತದೆ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ! ನಮ್ಮ ಕರುನಾಡ ಹೆಮ್ಮೆ, ನಡೆದಾಡುವ ದೇವರು ಎಂದೇ ಹೆಸರು ವಾಸಿ ಆಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳು ನೆನ್ನೆ ಲಿಂಗೈಕ್ಯ ರಾಗಿದ್ದಾರೆ. 112 ವರ್ಷ ಸಿದ್ದಗಂಗಾ ಶ್ರೀಗಳು ಕೆಲವು ದಿನಗಳಿಂದ ತಮ್ಮ ಅನಾರೋಗ್ಯ ದಿಂದ ಬಳಲುತ್ತಿದ್ದರು. ಕಳೆದ ವರ್ಷ ಜಿ ಕನ್ನಡ ವಾಹಿನಿ ಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ನಮ್ಮ ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ಕಳೆದ ಸಾಲಿನ ಹೆಮ್ಮೆಯ ಕನ್ನಡಿಗ ಎಂದು ಪರಿಗಣಿಸಲಾಗಿತ್ತು. ನಮ್ಮ ಶ್ರೀಗಳ ಬಗ್ಗೆ ಒಂದು ಅದ್ಭುತ ವಿಡಿಯೋವನ್ನು ಜಿ ಕನ್ನಡದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟರಾದ ಯಶ್, ಪುನೀತ್, ಸುದೀಪ್, ರವಿಚಂದ್ರನ್, ಜಗ್ಗೇಶ್ ಇನ್ನು ಹಲವಾರು ನಟರು ಬಂದಿದ್ದರು, ಈ ಅದ್ಭುತ ವಿಡಿಯೋವನ್ನು ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ನಮ್ಮ ಕರುನಾಡ ನಡೆದಾಡುವ ದೇವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ನಿಧನ ಹೊಂದಿದ್ದರು. ಶ್ರೀಗಳ ಅಂತಿಮ ಸಂಸ್ಕಾರ ಇಂದು ತುಮಕೂರು ನಲ್ಲಿಯೇ ನಡೆಯಲಿದೆ. ಶ್ರೀಗಳ ಅಂತಿಮ ದರ್ಶನವನ್ನು ಪಡೆಯಲು ಕನ್ನಡ ಚಿತ್ರ ರಂಗದ ನಟರು ಹಾಗು ಕಲಾವಿದರು ತುಮಕೂರಿಗೆ ಬಂದಿದ್ದಾರೆ. ಕನ್ನಡ ನಟರಾದ ದರ್ಶನ್, ಜಗ್ಗೇಶ್, ಪುನೀತ್ ರಾಜಕುಮಾರ್, ಶಿವಣ್ಣ, ಯಶ್, ಉಪೇಂದ್ರ ಅವರು ಕೂಡ ಬಂದಿದ್ದಾರೆ. ಇಂದು ಶ್ರೀಗಳ ಅಂತಿಮ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್ ಅವರು ಮಾಧ್ಯಮದವರ ಜೊತೆ ಶ್ರೀಗಳ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ, ಜಗ್ಗೇಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ ನಮ್ಮ ತುಮಕೂರ ಸಿದ್ಧಗಂಗಾ ಮಠದ ಸ್ವಾಮೀಜಿ ಗಳು ಸುಮಾರು 30 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಎಷ್ಟೋ ಲಕ್ಷ ಮಕ್ಕಳಿಗೆ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ. ಇದಲ್ಲದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಔಷಧಿ ವ್ಯವಸ್ಥೆ, ಉಚಿತ ಆಸ್ಪತ್ರೆಯಲ್ಲಿ ತಪಾಸಣೆ, ಉಚಿತ ಊಟ, ಹಾಗು ತಿಂಡಿ ಮಠದಲ್ಲಿ ನೀಡುತ್ತಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕ ತುಮಕೂರು ಜಿಲ್ಲೆಯಲ್ಲಿ ಶೇಕಡಾ 80 % ಗಿಂತ ಹೆಚ್ಚು ಮಕ್ಕಳು ಶ್ರೀಗಳ ಸಮಸ್ತೆಯಲ್ಲೆ ಶಿಕ್ಷಣ ವನ್ನು ಈಗಲೂ ಕೂಡ ಪಡೆಯುತ್ತಿದ್ದಾರೆ. ಶ್ರೀ ಗಳಿಗೆ Nadedaduva Devaru, Kayaka Yogi, Siddaganga ಸ್ವಾಮೀಜಿಗಳು ಎಂದು ಕೂಡ ಕರೆಯಲಾಗುತ್ತದೆ. ಶ್ರೀಗಳನ್ನು ನೋಡಲು ನೆನ್ನೆ ಅಷ್ಟೇ ನಮ್ಮ ಕರ್ನಾಟಕದ ರಾಜಕೀಯ ಗಣ್ಯರು ಕೂಡ ಬಂದು ಶ್ರೀಗಳ ಅರೋಗ್ಯ ವಿಚಾರಿಸಿದ್ದರು.
ತುಮಕೂರು ಶ್ರೀಗಳಿಗೆ 2007 ರಲ್ಲಿ ಕರ್ನಾಟಕ ಸರ್ಕಾರ ದಿಂದ Karnataka ರತ್ನ ಅವಾರ್ಡ್ ಕೂಡ ಬಂದಿತ್ತು. ಇದಲ್ಲದೆ ತುಮಕೂರು ಶ್ರೀಗಳನ್ನು ನರೇಂದ್ರ ಮೋದಿ, ಅಡ್ವಾಣಿ, ಅಬ್ದುಲ್ ಕಲಾಂ, ಇದಲ್ಲದೆ ಕನ್ನಡ ಚಿತ್ರ ತಾರೆಯರಾದ ಶಿವಣ್ಣ, ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಜಗ್ಗೇಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಅವರು ಕೂಡ ಕಳೆದ ವರ್ಷ ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ಇದಲ್ಲದೆ ಶಿವಣ್ಣ ಅವರ ಟಗರು ಚಿತ್ರದಲ್ಲಿ ಶ್ರೀಗಳನ್ನು ಭೇಟಿ ಮಾಡುವ ಒಂದು ದೃಶ್ಯ ಕೂಡ ನಿರ್ದೇಶಕ ಸೂರಿ ಅವರು ಹಾಕಿದ್ದರು. ಶ್ರೀಗಳ ನಿಧನದ ಸುದ್ದಿಯನ್ನು ಕೇಳಿ ಇಡೀ ಕರ್ನಾಟಕವೇ ದುಃಖದಲ್ಲಿದೆ. ನಮ್ಮ ಸಿದ್ಧಗಂಗಾ ಶ್ರೀಗಳು ಸಾಧನೆಗಳು, ನಮ್ಮ ಸಮಾಜಕ್ಕೋಸ್ಕರ ಮಾಡಿದ ಅದ್ಭುತ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ. ಶ್ರೀಗಳ ಶಾಲೆಯಲಿ ಓದಿರುವ ವಿದ್ಯಾರಿಟ್ಗಳು ಇಂದು ಅಮೇರಿಕ, ಆಸ್ಟ್ರೇಲಿಯಾ, ಹಾಗು ಹಲವಾರು ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಶ್ರೀಗಳ ಹತ್ತಿರ ಓದಿರುವ ಎಲ್ಲಾ ವಿದ್ಯಾರ್ಥಿಗಳು ತಾವು ಯಾವುದೇ ದೇಶದಲ್ಲಿ ಪ್ರತಿ ವರ್ಷಕ್ಕೊಮ್ಮೆ ತುಮಕೂರಿಗೆ ಬಂದು ಶ್ರೀಗಳನ್ನು ಭೇಟಿ ಮಾಡಿ ಹೋಗುತ್ತಿದ್ದರು. ನಮ್ಮ ಶ್ರೀಗಳು ಜಾತಿ, ಧಾರ್ಮ ಲೆಕ್ಕಿಸದೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾ ದಾನ ಹಾಗು ಅನ್ನ ದಾನ ಮಾಡುತ್ತಿದ್ದರು. ಶ್ರೀಗಳ ಕೆಲಸಗಳ ಬಗ್ಗೆ, ನಮ್ಮ ಸಮಾಜಕ್ಕೆ ಕೊಟ್ಟ ಕಾಣಿಕೆಗಳ ಬಗ್ಗೆ ಒಂದೆರಡು ಆರ್ಟಿಕಲ್ ಗಳಲ್ಲಿ ಹೇಳಲು ಸಾಧ್ಯವಿಲ್ಲ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ.

Trending

To Top