ಚಂದನವನದ ಸಿಂಪಲ್ ಬ್ಯುಟಿ ಶ್ವೇತಾ ಶ್ರೀವಾತ್ಸವ್ ಕ್ರಿಸ್ಮಸ್ ದಿನ ಬಹಳ ಅರ್ಥಪೂರ್ಣವಾಗಿ ಕಳೆದಿದ್ದು ಈ ಕುರಿತು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ವೇತಾ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಆಗಿದ್ದು, ಅವರು ಮಾಡುವ ವರ್ಕೌಟ್ ಅಥವಾ ದಿನ ನಿತ್ಯದ ವಿಶೇಷ ಭಾಗದ ಫೋಟೋ ಅಥವಾ ವಿಡಿಯೋಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಅವರು ವಿಶೇಷ ವಿಡಿಯೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಅಂಚಿಕೊಂಡಿದ್ದು, ಕ್ರಿಸ್ಮಸ್ ದಿನವನ್ನ ನಾವು ಚೆನ್ನಾಗಿ ಕಳೆದಿದ್ದೇವೆ ಈ ದಿನ ನಾವು ಬಡ ಮಕ್ಕಳೊಂದಿಗೆ ಸಮಯ ಕಳೆದಿದ್ದೇವೆ ಸುಂದರ ಹೃದಯಗಳ ಜೊತೆ ಈ ದಿನ ಸುಂದರವಾಗಿತ್ತು ಎಂದು ಬರೆದುಕೊಂಡಿದ್ದಾರೆ. ನಾವು ಸಾಂಟಾ ಕ್ಲಾಸ್ ಆಗಲು ಪ್ರಯತ್ನಿಸೋಣ ಇನ್ನೊಬ್ಬರ ಮುಖದಲ್ಲಿ ನಗು, ಭರವಸೆ, ಉಲ್ಲಾಸ ಅವರ ಜೀವನದಲ್ಲಿ ಪ್ರೀತಿಯನ್ನ ಹರಡಲು ಪ್ರಯತ್ನಿಸೋಣ.
ನಾನು ನನ್ನ ಪತಿ ಮಗಳೊಂದಿಗೆ ಮಕ್ಕಳನ್ನ ಭೇಟಿ ಮಾಡಿದೆವು, ಈ ವೇಳೆ ನಾವು ಸಾಧ್ಯವಾದಷ್ಟು ಆ ಚಿಕ್ಕ ಮಕ್ಕಳನ್ನ ಪ್ರೇರೇಪಿಸಲು, ಪ್ರೋತ್ಸಾಹಿಸಲು ಪ್ರಯತ್ನಿಸಿದ್ದೇವೆ ಎಂದು ಅಭಿಮಾನಿಗಳಿಗೆ ಸಂದೇಶವನ್ನ ನೀಡಿದ್ದಾರೆ. ಒಟ್ಟಾರೆಯಾಗಿ ಇದು ಒಂದು ಶಕ್ತಿಶಾಲಿ ಅನುಭವವಾಗಿತ್ತು ಎಂದು ಬರೆದುಕೊಂಡು ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.