ಸಲಾರ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾದ ಶ್ರುತಿ ಹಾಸನ್: ಸೆಲ್ಫಿ ಹಂಚಿಕೊಂಡ್ರು

ಹೈದರಾಬಾದ್: ಚಿತ್ರದ ಪೋಸ್ಟರ್ ಮೂಲಕವೇ ಈಗಾಗಲೇ ದಕ್ಷಿಣ ಭಾರತದ ಸಿನಿರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ ಸಲಾರ್ ಸಿನೆಮಾ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿದ್ದು, ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಭಾಗಿಯಾಗಿದ್ದಾರೆ. ಇನ್ನೂ ಈ ಸಂಬಂಧ ಪೊಟೋವೊಂದನ್ನು ಸಹ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರತ್ಯದಲ್ಲಿ, ಪ್ರಭಾಸ್ ನಾಯಕನಾಗಿ ಅಭಿಯಿಸುತ್ತಿರುವ ಸಲಾರ್ ಚಿತ್ರದ ಮೂಹೂರ್ತ ಕೆಲವು ದಿನಗಳ ಹಿಂದೆಯಷ್ಟೆ ಹೈದರಾಬಾದ್‌ನಲ್ಲಿ ಭರ್ಜರಿಯಾಗಿ ನೆರವೇರಿತ್ತು. ಇನ್ನೂ ಚಿತ್ರದ ಶೂಟಿಂಗ್‌ನ್ನು ಸಹ ಜ.೨೯ ರಿಂದಲೇ ಪ್ರಾರಂಭವಾಗಿದ್ದು, ಪ್ರಭಾಸ್ ಸಹ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕೆಲವೊಂದು ಪೊಟೋಗಳು ಸಹ ವೈರಲ್ ಆಗಿತ್ತು.

ಇದೀಗ ಸಲಾರ್ ಚಿತ್ರದ ನಾಯಕ ಶ್ರುತಿ ಹಾಸನ್ ಅಧಿಕೃತವಾಗಿ ಚಿತ್ರತಂಡ ಸೇರಿದ್ದು, ಮೊದಲ ದಿನ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಲಾರ್ ಚಿತ್ರದಲ್ಲಿ ಶೂಟಿಂಗ್ ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಲಾರ್ ಚಿತ್ರೀಕರಣದ ಸೆಟ್‌ನಲ್ಲಿರುವ ಮಹಿಳಾ ಕಲಾವಿದೆಯೊಂದಿಗೂ ಸಹ ಪೊಟೋವೊಂದನ್ನು ತೆಗೆದು ಶೇರ್ ಮಾಡಿದ್ದಾರೆ.

ಇನ್ನೂ ಸಲಾರ್ ಶೂಟಿಂಗ್ ಸ್ಥಳಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿದ್ದು, ದೂರದಿಂದಲೇ ತಾವು ಅಭಿಮಾನಿಸುವ ನಟನನ್ನು ಕಾಣಲು ಕಾಯುತ್ತಿರುತ್ತಾರೆ. ಶೂಟಿಂಗ್ ಪ್ರಾರಂಭವಾದ ಮೊದಲ ದಿನವೇ ಪ್ರಭಾಸ್ ಇರುವಂತಹ ಕೆಲವೊಂದು ಪೊಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಇನ್ನೂ ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದವರೇ ಬಹುತೇಕರು ಈ ಚಿತ್ರಕ್ಕೂ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದು, ಹೊಂಭಾಳೆ ಫಿಲ್ಮಂಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣ ವಾಗುತ್ತಿದ್ದು, ರವಿ ಬಸ್ರೂರ್ ರವರೇ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Previous articleಜಗತ್ತಿನ ಅತೀ ಎತ್ತರದ ಕಟ್ಟಡದ ಮೇಲೆ ಹಾರಾಡಿದ ಕನ್ನಡ ಧ್ವಜ: ಬಿಡುಗಡೆಯಾಯ್ತು ವಿಕ್ರಾಂತ್ ರೋಣ ಟೀಸರ್………
Next articleಅನುಷ್ಕಾ ಹಾಗೂ ವಿರಾಟ್ ಮಗಳ ನಾಮಕರಣ: ವಮಿಕಾ ಎಂದು ಹೆಸರಿಟ್ಟ ದಂಪತಿ