Film News

ಶ್ರುತಿ ಹಾಸನ್ ಯಾರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಯಾರ ಜೊತೆ?

ಚೆನೈ: ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮುತ್ತಿರುವ ನಟಿ ಶ್ರುತಿ ಹಾಸನ್ ಇಂದಿಗೆ ೩೫ನೇ ವಸಂತಕ್ಕೆ ಕಾಲಿಡುತ್ತಿದ್ದು, ಇಂದು ತಮ್ಮ ಹೊಸ ಬಾಯ್‌ಪ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಹಿಂದೆ ನಟಿ ಶ್ರುತಿ ಹಾಸನ್ ಸಂಗೀತಗಾರ ಮೈಕಲ್ ಕೋರ್ಸೆಲ್ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಇನ್ನೇನೂ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿತ್ತು. ಜೊತೆಗೆ ಶ್ರುತಿ ಹಾಸನ್ ರವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮೈಕಲ್ ಭಾಗವಹಿಸುತ್ತಿದ್ದರಂತೆ. ಆದರೆ ಕೆಲವು ಕಾರಣಗಳಿಂದ ಇವರಿಬ್ಬರ ಪ್ರೀತಿ ಬ್ರೇಕ್‌ಅಪ್ ಆಯ್ತು ಎನ್ನಲಾಗಿದೆ. ಇದೀಗ ನಟಿ ಶ್ರುತಿ ಹಾಸನ್ ಹೊಸ ಬಾಯ್‌ಪ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಆ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ನಟಿ ಶ್ರುತಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ದೆಹಲಿ ಮೂಲದ ಡೂಡಲ್ ಕಲಾವಿದ ಸನಂತು ಹಜಾರಿಕ ಎಂಬುವವರ ಜೊತೆ. ಕೆಲವೊಂದು ಮಾಹಿತಿಗಳ ಪ್ರಕಾರ ಶ್ರುತಿ ಹಾಗೂ ಹಜಾರಿಕ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಶ್ರುತಿ ಹಾಸನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಸನಂತು ಹಜಾರಿಕಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪೊಟೋಗಳನ್ನು ಶ್ರುತಿ ಹಾಸನ್ ತಮ್ಮ ಸೋಷಿಯಲ್ ಮಿಡೀಯಾಗಳಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹಜಾರಿಕಾ ಶ್ರುತಿ ಹಾಸನ್ ಪೊಟೋ ಶೇರ್ ಮಾಡಿ ಹ್ಯಾಪಿ ಬರ್ತಡೇ ಪ್ರಿನ್ಸಸ್ ಎಂದು ರೊಮ್ಯಾಂಟಕ್ ವಿಶ್ ಸಹ ಮಾಡಿದ್ದಾರೆ.

Trending

To Top