ಪತಿಯೊಂದಿಗೆ ರಸ್ತೆಯಲ್ಲಿ ಸಾರ್ವಜನಿಕವಾಗಿಯೇ ಲಿಪ್ ಲಾಕ್ ಮಾಡಿದ ಖ್ಯಾತ ನಟಿ..!

ದಕ್ಷಿಣ ಭಾರತದಲ್ಲಿ ಎರಡು ದಶಕಗಳಿಂದ ನಟಿಸುತ್ತಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡ ನಟಿಯರಲ್ಲಿ ಶ್ರೇಯಾ ಶರನ್ ಸಹ ಒಬ್ಬರಾಗಿದ್ದಾರೆ. ಇಷ್ಟಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡು ಸ್ಟಾರ್‍ ನಟರ ಜೊತೆಗೆ ನಟಿಸುವಂತಹ ಅವಕಾಶಗಳನ್ನು ಗಿಟ್ಟಿಸಿಕೊಂಡರು. ತೆಲುಗು ಸಿನಿರಂಗದಲ್ಲಿ ಸೀನಿಯರ್‍ ನಟರಿಂದ ಹಿಡಿದು ಜೂನಿಯರ್‍ ನಟರೊಂದಿಗೂ ಸಹ ನಟಿಸಿ ಸೈ ಎನ್ನಿಸಿಕೊಂಡ ನಟಿ ಶ್ರೇಯಾ ಶರಣ್.

ಇನ್ನೂ ನಟಿ ಶ್ರೇಯಾ ಶರಣ್ ಮದುವೆಯಾದರೂ ಕೂಡ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತಿಚಿಗೆ ಆಕೆ ಹಾಲಿಡೇ ಟ್ರಿಪ್ ಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪತಿಯೊಂದಿಗೆ ಬೀಚ್ ಗಳಿಗೆ, ಪಾರ್ಟಿಗಳಿಗೆ ಅಂತಾ ತಿರುಗುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಹೊಸ ಹೊಸ ಪ್ರದೇಶಗಳಿಗೂ ಸಹ ಹಾರುತ್ತಿದ್ದಾರೆ. ನಟಿ ಶ್ರೇಯಾ ಆಕೆ ಎಲ್ಲಿಗೆ ಹೋದರು ಆ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುವ ಸಲುವಾಗಿ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈಕೆಯ ಪೊಟೋಗಳು ಅತೀ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ.

ನಟಿ ಶ್ರೇಯಾ ಶರಣ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಪ್ಯಾಪುಲಾರಿಟಿಯನ್ನು ದಕ್ಕಿಸಿಕೊಂಡಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ಬರೊಬ್ಬರಿ ಮೂರುವರೆ ಮಿಲಿಯನ್ ಫಾಲೋವರ್ಸ್‌ಗಳನ್ನು ದಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತನ್ನ ಮಗಳು ಹಾಗೂ ಪತಿಯೊಂದಿಗೆ ಕಾಣಿಸುವ ಪೊಟೋಗಳು ಮತಷ್ಟು ಸ್ಪೀಡ್ ಆಗಿ ವೈರಲ್ ಆಗುತ್ತವೆ. ಈ ಹಾದಿಯಲ್ಲಿ ಶ್ರೇಯಾ ಇತ್ತೀಚಿಗಷ್ಟೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ. ಈ ವಿಡಿಯೋದಲ್ಲಿ ಸಾರ್ವಜನಿಕವಾಗಿಯೇ ರಸ್ತೆಯಲ್ಲಿಯೇ ಪತಿಯೊಂದಿಗೆ ಲಿಪ್ ಲಾಕ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ಅನೇಕರು ವಿಭಿನ್ನ ರೀತಿಯ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

ನಟಿ ಶ್ರೇಯಾ ಶರಣ್ ಹಂಚಿಕೊಂಡ ಈ ವಿಡಿಯೋ ಅತೀ ಕಡಿಮೆ ಸಮಯದಲ್ಲೇ ವೈರಲ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಒಂದು ಹೊಸ ಪ್ರದೇಶದಲ್ಲಿ ಶ್ರೇಯಾ ಹಾಗೂ ಪತಿ ಆಂಡರೂ ಕಾಣಿಸಿಕೊಂಡಿದ್ದಾರೆ.  ಈ ವಿಡಿಯೋದಲ್ಲಿ ಶ್ರೇಯಾಗೆ ಕಾಫಿ ತಂದುಕೊಡುವುದು, ಕಾಫಿಯನ್ನು ಒಂದು ಸಿಪ್ ಟೇಸ್ಟ್ ಮಾಡಿ ಪ್ರೀತಿಯಿಂದ ಪತಿಯ ತುಟಿಗೆ ಮುದ್ದು ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೂ ಈ ವಿಡಿಯೋಗೆ ನೆಟ್ಟಿಗರಿಂದ ವಿಭಿನ್ನ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಜೊತೆಗೆ ರಸ್ತೆಯಲ್ಲಿ ಏನಿದು ಎಂದು ವಿಮರ್ಶೆಗಳೂ ಸಹ ಶುರುವಾಗಿದೆ.

Previous articleಮದುವೆ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ನಟಿ ಶ್ರುತಿ ಹಾಸನ್, ಊಹಿಸದ ರೀತಿಯಲ್ಲಿ ಉತ್ತರ ಕೊಟ್ಟ ನಟಿ…!
Next articleಟೋನ್ಡ್ ಬ್ಯೂಟಿಯೊಂದಿಗೆ ಟ್ರೆಂಡ್ ಕ್ರಿಯೇಟ್ ಮಾಡಿದ ರಿಚಾ ಚಡ್ಡಾ..!