Film News

ಕೆಜಿಎಫ್ ಚಿತ್ರದ ಬೆಡಗಿ ಶ್ರೀನಿಧಿ ಶೆಟ್ಟಿ ನ್ಯೂ ಟೀಸರ್ ಬಿಡುಗಡೆ

ಬೆಂಗಳೂರು: ಇಡೀ ಸಿನಿರಂಗವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಚಿತ್ರದ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ರವರ ಹೊಸ ಸಿನೆಮಾದ ಟೀಸರ್ ಬಿಡುಗಡೆಯಾಗಿದೆ. ಈಗಾಗಲೇ ಕೆಜಿಎಫ್-೨ ಟೀಸರ್ ದೇಶ ಸೇರಿದಂತೆ ವಿದೇಶದಲ್ಲೂ ಭಾರಿ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಕೆಜಿಎಫ್ ಚಿತ್ರದ ಮೂಲಕ ಭಾರಿ ಫೇಮ್ ಪಡೆದ ನಟಿ ಶ್ರೀನಿಧಿ ಶೆಟ್ಟಿ ಕಾಲಿವುಡ್ ಸ್ಟಾರ್ ನಟ ವಿಕ್ರಂ ಜೊತೆ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಹೌದು ಕಾಲಿವುಡ್ ನ ಖ್ಯಾತ ನಿರ್ದೇಶಕ ಅಜಯ್ ಜ್ಞಾನಮುತ್ತು ನಿರ್ದೇಶನದಲ್ಲಿ ಮೂಡಿಬರಲಿರುವ ಕೋಬ್ರಾ ಸಿನೆಮಾದಲ್ಲಿ ನಟ ವಿಕ್ರಂ ಜೊತೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅಭಿನಯಿಸಲಿದ್ದಾರೆ. ಇನ್ನೂ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಕ್ಲಾಸ್ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಸಿನೆಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡ ಶ್ರೀನಿಧಿ ಇದೀಗ ಕೋಬ್ರಾ ಚಿತ್ರದಲ್ಲಿ ಸೌಮ್ಯ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಳವಾಗಿ ಸಂಪ್ರದಾಯಸ್ಥ ಕುಟುಂಬದ ಹುಡುಗಿಯ ಪಾತ್ರ ಇದಾಗಿದ್ದು, ಕೆಜಿಎಫ್ ನಾಯಕಿಯ ಪಾತ್ರಕ್ಕೂ ಕೋಬ್ರಾ ಚಿತ್ರದ ನಾಯಕಿ ಪಾತ್ರಕ್ಕೂ ಭಾರಿ ವ್ಯತ್ಯಾಸವಿರಲಿದೆ. ಮತ್ತೊಂದು ವಿಶೇಷವೆಂದರೇ ಇಂಡಿಯನ್ ಕ್ರಿಕೆಟ್ ತಂಡದ ಇರ್ಫಾನ್ ಪಠಾನ್ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದು, ಆ ಪಾತ್ರ ಖಡಕ್ ಪೊಲೀಸ್ ಅಧಿಕಾರಿಯಾಗಿದೆ. ಇನ್ನೂ ಈ ಚಿತ್ರದಲ್ಲಿ ವಿಕ್ರಂ ಹಲವಾರು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಇನ್ನೂ ಸೋನಿ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಿತ್ರದ ಬಿಡುಗಡೆ ಕುರಿತಂತೆ ಯಾವುದೇ ಮಾಹಿತಿ ಬಹಿರಂಗ ಮಾಡಿಲ್ಲ.

Trending

To Top