ಶೀಘ್ರದಲ್ಲೇ ನಂದಮೂರಿ ಬಾಲಕೃಷ್ಣ ಚಿತ್ರದ ಟೈಟಲ್ ರಿವೀಲ್!

ಹೈದರಾಬಾದ್: ಟಾಲಿವುಡ್‌ನ ಮಾಸ್ ಅಭಿಮಾನಿಗಳಿಗಾಗಿ ನಿರ್ಮಾಣವಾಗುತ್ತಿರುವ ಸಿನೆಮಾಗಳಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ಬಿಬಿ೩ ಒಂದಾಗಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಬಹಿರಂಗವಾಗಿಲ್ಲವಾದರೂ ಶೀಘ್ರದಲ್ಲೇ ಟೈಟಲ್ ರಿವೀಲ್ ಆಗಲಿದೆ ಎನ್ನಲಾಗುತ್ತಿದೆ.

ಟಾಲಿವುಡ್‌ನ ಖ್ಯಾತ ನಿರ್ದೇಶಕ ಬೋಯಪಾಟಿ ಶ್ರೀನು ಹಾಗೂ ಟಾಪ್ ಹಿರೋ ನಂದಮೂರಿ ಬಾಲಕೃಷ್ಣ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಪಕ್ಕಾ ಮಾಸ್ ಸಿನೆಮಾವೊಂದು ತಯಾರಾಗುತ್ತಿದೆ. ಈ ಸಿನೆಮಾ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೂರನೇ ಸಿನೆಮಾ ಆಗಿರುವ ಕಾರಣ ಸಿನಿರಂಗದಲ್ಲಿ ಮತಷ್ಟು ಕ್ರೇಜ್ ಹುಟ್ಟಿಸಿದೆ. ಇನ್ನೂ ಈಗಾಗಲೇ ಈ ಸಿನೆಮಾ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿದೆ. ಆದರೆ ಸಿನೆಮಾ ಕುರಿತಂತೆ ಅಪ್ಡೇಟ್‌ಗಳು ಮಾತ್ರ ಮಂದಗತಿಯಲ್ಲಿ ದೊರೆಯುತ್ತಿದೆ. ಈ ಹಾದಿಯಲ್ಲಿಯೇ ಇನ್ನೂ ಚಿತ್ರಕ್ಕೆ ಟೈಟಲ್ ಏನು ಎಂಬುದು ಫಿಕ್ಸ್ ಆಗಿಲ್ಲ ಎನ್ನಲಾಗುತ್ತಿದೆ.

ಇನ್ನೂ ಈ ಚಿತ್ರದ ಟೈಟಲ್ ಬಗ್ಗೆ ಅನೇಕ ರೂಮರ್‍ಸ್‌ಗಳು ಬರುತ್ತಿದೆ. ಚಿತ್ರಕ್ಕೆ ಮೋನಾರ್‍ಕ್ ಎಂಬ ಟೈಟಲ್ ಫಿಕ್ಸ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಜೊತೆಗೆ ಇನಷ್ಟು ರೂಮರ್‍ಸ್‌ಗಳಿಂದ ಅಭಿಮಾನಿಗಳಲ್ಲಿ ಗೊಂದಲ ಏರ್ಪಟ್ಟಿತ್ತು. ಇದೀಗ ಶೀಘ್ರದಲ್ಲಿಯೇ ಟೈಟಲ್ ಘೋಷಣೆಯಾಗಲಿದೆ ಎಂಬ ಮಾಹಿತಿ ಬಲವಾಗಿ ಕೇಳಿಬರುತ್ತಿದ್ದು, ಈ ಕುರಿತು ನಿರ್ದೇಶಕ ಬೋಯಪಾಟಿ ಸ್ಪಷ್ಟನೆ ನೀಡಿದ್ದು, ಟೈಟಲ್ ಕುರಿತು ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇನ್ನೂ ಅದಕ್ಕೆ ಜಾಸ್ತಿ ಸಮಯವಿದೆ. ಆದಷ್ಟೂ ಬೇಗ ಶೂಟಿಂಗ್ ಕೆಲಸಗಳನ್ನು ಮುಗಿಸಿ ಮುಂದಿನ ತಿಂಗಳಲ್ಲಿ ಟೈಟಲ್ ಗೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ ಈ ಸಿನೆಮಾ ಮೇ.28, 2021 ರಂದು ತೆರೆಗೆ ಬರಲಿದೆ.

Previous articleಶಾಕುಂತಲಂ ಸಿನೆಮಾ ಕೂಡ ಪ್ಯಾನ್ ಇಂಡಿಯಾದಡಿ ಬಿಡುಗಡೆ?
Next articleನಟ ಅಲ್ಲುಅರ್ಜುನ್ ಭೇಟಿಗಾಗಿ ಕಾಯುತ್ತಿದ್ದಾಳೆ 3 ವರ್ಷದ ಪುಟಾಣಿ…..