Film News

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನಟ ವಿಜಯ್ ಮಾಸ್ಟರ್ ಚಿತ್ರ!

ಚೆನೈ: ಕಾಲಿವುಡ್ ನ ಖ್ಯಾತ ನಟ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಚಿತ್ರ ಶೀಘ್ರವೇ ಬಿಡುಗಡೆಯಾಗಲಿದೆಯಂತೆ. ಇನ್ನೂ ಈ ಚಿತ್ರ ಸೆನ್ಸಾರ್ ಕೂಡ ಮುಕ್ತಾಯವಾಗಿದ್ದು, ಸೆನ್ಸಾರ್ ಮಂಡಳಿ ಸದಸ್ಯರು ಮಾಸ್ಟರ್ ಚಿತ್ರಕ್ಕೆ ’ಯು/ಎ’ಪ್ರಮಾಣ ಪತ್ರ ನೀಡಿದ್ದಾರೆ.

ಇನ್ನೂ ಕಳೆದ ಏಪ್ರಿಲ್ ಮಾಹೆಯಲ್ಲಿಯೇ ಮಾಸ್ಟರ್ ಸಿನೆಮಾ ತೆರೆಗೆ ಬರಲು ಸಿದ್ದವಾಗಿತ್ತಾದರೂ, ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸಿನೆಮಾ ಬಿಡುಗಡೆ ನಿಲ್ಲಿಸಲಾಗಿತ್ತು. ಇನ್ನೂ ದೀಪಾವಳಿ ಹಬ್ಬಕ್ಕೆ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ತುಸು ಖುಷಿಪಡಿಸಿತ್ತು ಚಿತ್ರ ತಂಡ. ಆದರೆ ಇದೀಗ ಮಾಸ್ಟರ್ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ದೊರೆತಿದ್ದು ಅಭಿಮಾನಿಗಳಲ್ಲಿ ಥ್ರಿಲ್ ಹುಟ್ಟಿಸಿದೆ.

ಇನ್ನೂ ಬಾಲಿವುಡ್ ನಿಂದ ಸಹ ಮಾಸ್ಟರ್ ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹೊರಬಂದಿದೆ. ಹಿಂದಿಯಲ್ಲೂ ಸಹ ಮಾಸ್ಟರ್ ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ದೊರೆತಿದೆ. ಇನ್ನೂ ಹಿಂದಿಯಲ್ಲಿ ಈ ಚಿತ್ರಕ್ಕೆ ’ವಿಜಯ್ ದಿ ಮಾಸ್ಟರ್’ ಎಂಬ ಹೆಸರನ್ನು ಸಹ ಇಡಲಾಗಿದೆ. ಇನ್ನೂ ಜನವರಿ ಸಂಕ್ರಾಂತಿ ಹಬ್ಬದಂದು ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿ ಚಿತ್ರತಂಡವಿದ್ದು, ಸಿನೆಮಾ ಟಿಕೆಟ್ ಗಳನ್ನು ಸಹ ಮುಂಗಡವಾಗಿ ಬುಕಿಂಗ್ ಸಹ ಆರಂಭಿಸಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರಂತೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮಾಸ್ಟರ್ ಚಿತ್ರೀಕರಣ ನಡೆದಿದ್ದು, ಮಾಳವಿಕಾ ಮೋಹನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಮುಖ್ಯವಾಗಿ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವುದರಿಂದ ಮಾಸ್ಟರ್ ಚಿತ್ರ ಇನಷ್ಟು ನಿರೀಕ್ಷೆ ಹುಟ್ಟಿಸಿದೆ.

Trending

To Top