Film News

ಶೀಘ್ರದಲ್ಲೇ ಅವೆಂಜರ್ಸ್ ದಾಖಲೆಯನ್ನು ಬೀಟ್ ಹೊಡೆಯಲಿದೆ ಕೆಜಿಎಫ್-2 ಟೀಸರ್

ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಟೀಸರ್ ನಿನ್ನೆ ರಾತ್ರಿ 9.30ಕ್ಕೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲೇ ಸುಮಾರು 2.3 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಶೀಘ್ರದಲ್ಲಿಯೇ ಹಾಲಿವುಡ್ ನ ಅವೆಂಜರ್‍ಸ್ ಚಿತ್ರದ ದಾಖಲೆಯನ್ನು ಸಹ ಮುರಿಯಲಿದೆ ಎನ್ನಲಾಗುತ್ತಿದೆ.

ಹಾಲಿವುಡ್ ನ ಅವೆಂಜರ್‍ಸ್ ಎಂಡ್ ಗೇಮ್ ಚಿತ್ರವೂ ವಿಶ್ವದಲ್ಲಿಯೇ ಅತೀ ಹೆಚ್ಚು ಲೈಕ್ಸ್ ಪಡೆದ ಸಿನೆಮಾ ಟೀಸರ್ ಎಂಬ ದಾಖಲೆ ಪಡೆದಿದ್ದು, ಈ ಟೀಸರ್ ಇಲ್ಲಿಯವರೆಗೂ ಸುಮಾರು 32 ಲಕ್ಷ ಲೈಕ್ಸ್ ಪಡೆದಿದೆ. ಇದೀಗ ಕೆಜಿಎಫ್-2 ಟೀಸರ್ 5 ಲಕ್ಷ ಲೈಕ್ಸ್ ಪಡೆದರೂ ಅವೆಂಜರ್‍ಸ್ ದಾಖಲೆ ಮುರಿಯುತ್ತದೆ. ಜೊತೆಗೆ ಕಾಲಿವುಡ್ ನ ವಿಜಯ್ ನಟನೆಯ ಮಾಸ್ಟರ್ ಚಿತ್ರದ ಟೀಸರ್ ಸಹ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದು, 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, ಇದೀಗ ಕೆಜಿಎಫ್-2 ಈ ದಾಖಲೆಯನ್ನು ಸಹ ಮುರಿದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವದಾಖಲೆಯತ್ತ ಮುನ್ನುಗುತ್ತಿರುವ ಕೆಜಿಎಫ್-2 ಟೀಸರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮಟ್ಟದಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ.

ಅಂದಹಾಗೆ ಕೆಜಿಎಫ್-2 ಟೀಸರ್ ಹೊಂಬಾಳೆ ಚಿತ್ರತಂಡ ಅಧಿಕೃತವಾಗಿ ರಿಲೀಸ್ ಮಾಡುವುದಕ್ಕೂ ಮುನ್ನವೇ ಯಾರೊ ಕಿಡಿಗೇಡಿಗಳು ಟೀಸರ್ ಲೀಕ್ ಮಾಡಿಬಿಟ್ಟಿದ್ದರು. ಚಿತ್ರತಂಡ ಯಶ್ ರವರ ಹುಟ್ಟುಹಬ್ಬದಂದು ರಿಲೀಸ್ ಮಾಡಬೇಕೆಂದುಕೊಂಡಿದ್ದು, ಕಿಡಿಗೇಡಿಗಳು ಟೀಸರ್ ಲೀಕ್ ಮಾಡಿದ್ದರಿಂದ ತಡ ಮಾಡದೇ ಜನವರಿ 7 ರಾತ್ರಿ 9.29 ಕ್ಕೇ ಅಧಿಕೃತವಾಗಿ ಟೀಸರ್ ರಿಲೀಸ್ ಮಾಡಿದೆ.

ಇನ್ನೂ ಈ ಕುರಿತು ನಟ ಯಶ್ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಕೆಜಿಎಫ್-2 ಟೀಸರ್ ಜನವರಿ 8 ರಂದು ಬೆಳಿಗ್ಗೆ 10.08 ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಯಾರೋ ಪುಣ್ಯಾತ್ಮರು ಟೀಸರ್ ಲೀಕ್ ಮಾಡಿದ್ದಾರೆ, ಅದರಿಂದ ಅವರಿಗೆ ಏನು ಸಂತೋಷ ಸಿಗುತ್ತದೆಯೋ ಗೊತ್ತಿಲ್ಲ, ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ವಿಡಿಯೋ ಸಂದೇಶದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಟೀಸರ್ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಇದೀಗ ಒಂದೇ ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಟೀಸರ್ ನಲ್ಲಿ ನಟ ಯಶ್, ರವೀನಾ ಟಂಡನ್, ಸಂಜಯ್ ದತ್ ರವರ ಗೆಟಪ್ ಬಹಿರಂಗವಾಗಿದೆ. ಇನ್ನೂ ಈ ಟೀಸರ್ ವಿಶ್ವಮಟ್ಟದಲ್ಲಿ ಟ್ರೆಂಡಿಗ್ ಆಗುತ್ತಿದೆ ಎನ್ನಲಾಗುತ್ತಿದೆ.

Trending

To Top