ಅನುಪಮಾ ಪರಮೇಶ್ವರನ್ ಅಭಿಮಾನಿಗಳಿಗೆ ಬಿಗ್ ಶಾಕ್, ಆ ಕಾರಣದಿಂದ ಸಿನೆಮಾಗಳಿಗೆ ದೂರವಾಗ್ತಿದ್ದಾಳಂತೆ?

ಕೇರಳಗೆ ಸೇರಿದ ಅನುಪಮಾ ಪರಮೇಶ್ವರನ್ ಅಂದುಕೊಂಡಷ್ಟು ಸ್ಟಾರ್‍ ಡಮ್ ಪಡೆದುಕೊಳ್ಳದೇ ಇದ್ದರೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತಿಚಿಗಷ್ಟೆ ಆಕೆ ಅಭಿನಯದ ಕಾರ್ತಿಕೇಯ-2 ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಸೂಪರ್‍ ಹಿಟ್ ಸ್ವಂತ ಮಾಡಿಕೊಂಡಿದ್ದಾರೆ. ಇನ್ನೇನು ಅನುಪಮಾ ಸ್ಟಾರ್‍ ಆಗಿ ಮಿಂಚಲಿದ್ದಾರೆ ಎನ್ನುವ ವೇಳೆಗಾಗಲೇ ಆಕೆಯ ಅಭಿಮಾನಿಗಳಿಗೆ ದೊಡ್ಡ ಶಾಕ್ ಸಿಕ್ಕಿದೆ. ಆ ಒಂದು ಕಾರಣದಿಂದ ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಿಂದೆಗಿಂತ ಗ್ಲಾಮರ್‍ ಡೋಸ್ ಹೆಚ್ಚಿಸಿದ್ದಾರೆ. ಸುಮಾರು ದಿನಗಳ ಬಳಿಕ ಆಕೆಗೆ ಕಾರ್ತಿಕೇಯ-2 ಸಿನೆಮಾ ಬಿಗೆಸ್ಟ್ ಹಿಟ್ ತಂದುಕೊಟ್ಟಿದೆ. ಶೀಘ್ರದಲ್ಲೇ ಆಕೆ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳೂ ಸಹ ಸೌತ್ ಸಿನಿರಂಗದಲ್ಲಿ ಜೋರಾಗಿಯೇ ಕೇಳಿಬಂದಿತ್ತು. ಈ ಸುದ್ದಿ ತಿಳಿದ ಅನುಪಮಾ ಅಭಿಮಾನಿಗಳೂ ಸಹ ಪುಲ್ ಖುಷಿಯಾಗಿದ್ದರು. ಇದೇ ವೇಳೆಯಲ್ಲಿ ಆಕೆಯ ಅಭಿಮಾನಿಗಳಿಗೆ ಬಿಗ್ ಶಾಕ್ ಸಿಕ್ಕಿದೆ. ಇನ್ನೂ ಮುಂದೆ ಅನುಪಮಾ ಹೊಸ ಸಿನೆಮಾಗಳಿಗೆ ಒಪ್ಪಿಗೆ ಕೊಡುವುದಿಲ್ಲವಂತೆ. ಈ ಹಿಂದೆ ಸೈನ್ ಹಾಕಿರುವಂತಹ ಸಿನೆಮಾಗಳನ್ನು ಮಾತ್ರ ಪೂರ್ಣಗೊಳಿಸಲಿದ್ದಾರೆ. ಆಕೆ ಒಪ್ಪಿಕೊಂಡ ಎಲ್ಲಾ ಸಿನೆಮಾಗಳನ್ನು ಬಿಡುವಿಲ್ಲದೇ ಪೂರ್ಣಗೊಳಿಸಲಿದ್ದಾರಂತೆ. ಅಷ್ಟಕ್ಕೂ ಅನುಪಮಾ ಈ ನಿರ್ಧಾರಕ್ಕೆ ಬರಲು ಕಾರಣ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಅನುಮಪಾ ತಮ್ಮ ತಂದೆ ತಾಯಿಯವರ ಕೋರಿಕೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಜೊತೆಗೆ ತಮ್ಮ ಪೋಷಕರ ಆರೋಗ್ಯ ದೃಷ್ಟಿಯಿಂದಲೂ ಸಹ ಅನುಪಮಾ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಶೀಘ್ರದಲ್ಲೇ ಆಕೆ ಮದುವೆ ಮಾಡಿಕೊಂಡು ಪೋಷಕರನ್ನು ಸಂತೋಷದಿಂದ ನೋಡಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ. ಈ ಕಾರಣದಿಂದಲೇ ಆಕೆ ಹೊಸ ಸಿನೆಮಾಗಳಿಗೆ ಸೈನ್ ಹಾಕುತ್ತಿಲ್ಲ ಎಂಬ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಸೋಷಿಯಲ್  ಮಿಡಿಯಾದಲ್ಲಿ ಈ ಸುದ್ದಿ ಟ್ರೆಂಡಿಂಗ್ ಆಗುತ್ತಿದೆ. ನಟಿ ಅನುಪಮಾ ಪರಮೇಶ್ವರನ್ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಳ್ಳುವ ಸಮಯದಲ್ಲೇ ಇಂತಹ ನಿರ್ಧಾರಕ್ಕೆ ಬಂದಿರುವುದು ಆಕೆಯ ಅಭಿಮಾನಿಗಳಿಗೆ ಬೇಸರ ಹಾಗೂ ನೋವು ತಂದಿದೆ ಎನ್ನಲಾಗುತ್ತಿದೆ.

ಇನ್ನೂ ಅನುಪಮಾ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸಹ ಕೆಲ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕಾರ್ತಿಕೇಯ-2 ಸಿನೆಮಾದಲ್ಲಿ ಅನುಪಮಾ ತುಂಬಾ ಅದ್ಬುತವಾಗಿ ನಟನೆ ಮಾಡಿದ್ದಾರೆ. ಸಿನೆಮಾದಲ್ಲಿ ಆಕೆಯ ಅಭಿನಯ ಎಲ್ಲರನ್ನೂ ರಂಜಿಸಿದೆ. ಈ ಸಿನೆಮಾ ಮೂಲಕ ಆಕೆ ಬ್ಲಾಕ್ ಬ್ಲಸ್ಟರ್‍ ಹಿಟ್ ಮುಡಿಗೇರಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ನಟಿಯಾಗುವುದು ಪಕ್ಕಾ ಎನ್ನುವ ಸಮಯದಲ್ಲೇ ಆಕೆ ಈ ನಿರ್ಧಾರಕ್ಕೆ ಬಂದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇನ್ನೂ ಈ ಸುದ್ದಿಯ ಬಗ್ಗೆ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಲು ಅನುಪಮಾ ರವರೇ ಸ್ಪಷ್ಟನೆ ನೀಡಬೇಕಿದೆ.

Previous articleಆಟೋ ಡ್ರೈವರ್ ಮೇಲೆ ಆಕ್ರೋಷಗೊಂಡ ನಟಿ ಐಶ್ವರ್ಯ ರಾಜೇಶ್.. ಕಾರಣ ಏನು ಗೊತ್ತಾ?
Next articleಸಮಂತಾ ಫ್ಯಾನ್ಸ್ ಗೆ ಬಿಗ್ ಶಾಕ್, ಈ ರೀತಿಯಾಗುತ್ತೇ ಅಂತಾ ಯಾರೂ ಊಹಿಸಿರಲಿಲ್ಲ…!