News

Shocking News : ಕೊರೊನಾದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಯಲ್ಲಿ ಮತ್ತೆ ಕೊರೊನಾ ಪಾಸಿಟಿವ್!

ಮಾರ್ಚ್ 23 ರಂದು ಧನಾತ್ಮಕ ಪರೀಕ್ಷೆ ಮಾಡಿದ ರೋಗಿಯನ್ನು ಪರೀಕ್ಷಾ ಫಲಿತಾಂಶವು ನೆಗೆಟಿವ್‌ ಫಲಿತಾಂಶ ಬಂದ ಬಳಿಕ, ಅವರನ್ನು ನಂತರ ಬಿಡುಗಡೆ ಮಾಡಲಾಯಿತು. ಆದರೆ ಇದು ಎರಡನೇ ಪರೀಕ್ಷೆಯಲ್ಲಿ ಅವರನ್ನು ಮತ್ತೆ ಪರೀಕ್ಷೆ ಮಾಡಿದ ವೇಳೇಯಲ್ಲಿ ಪಾಸಿಟಿವ್‌ ಕಂಡು ಬಂದಿದೆ ಅಂತ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಎರಡನೇ ಪರೀಕ್ಷೆಯಲ್ಲಿ ಪಾಸಿಟಿವ್‌ ಫಲಿತಾಂಶ ಬಂದಿರುವುದರಿಂದ ನಾವು ಆತನಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ದಾಖಲಿಸಿ ಮತ್ತೆ ಪರೀಕ್ಷೆಗೆ ಆತನ ರಕ್ತದ ಮಾದರಿ ಹಾಗೂ ಗಂಟಲು ದ್ರವನ್ನು ಕಳುಹಿಸಿಕೊಟ್ಟಿದ್ದು, ಗುರುವಾರ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಮತ್ತು ಶುಕ್ರವಾರ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.ರೋಗಿಯು ಹೆಚ್ಚು ತಿರುಗಾಡಲಿಲ್ಲ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ಗೆ ಹಾಕಲಾಗಿದ್ದು, ವಿಚಾರಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ ಅಂತ ತಿಳಿದು ಬಂದಿದೆ.

Trending

To Top