Film News

ಶಿವಣ್ಣ ಪ್ರಭುದೇವ ನಟಿಸಿ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಹೆಸರೇನು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹಾಸ್ಯ ಮತ್ತು ಭಾವನೆಗಳು ಎರಡನ್ನು ವ್ಯಕ್ತಪಡಿಸುವ ಯೋಗರಾಜ್ ಭಟ್ರ ಸಿನಿಮಾಗಳಿಗೆ ಬೇರೆಯದೇ ಅಭಿಮಾನಿ ಬಳಗ ಇದೆ. ಯೋಗರಾಜ್ ಭಟ್ ಅವರು ಗಾಳಿಪಟ 2 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದಾದ ನಂತರ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಜೊತೆ ಭಟ್ರು ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು.

ಇತ್ತೀಚೆಗೆ ಶಿವಣ್ಣ ಭಟ್ರ ಕಾಂಬಿನೇಷನ್ ಸಿನಿಮಾ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿತ್ತು. ಈ ಸಿನಿಮಾದಲ್ಲಿ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಯಾಗಿರುವ ಡ್ಯಾನ್ಸಿಂಗ್ ಸ್ಟಾರ್, ನಟ ಮತ್ತು ನಿರ್ದೇಶಕ ಪ್ರಭುದೇವ ನಟಿಸಬಹುದು ಎನ್ನಲಾಗಿತ್ತು. ಗಾಳಿಪಟ2 ಸಿನಿಮಾ ಚಿತ್ರೀಕರಣ ಸಮಯದಲ್ಲಿ ಪ್ರಭುದೇವರನ್ನು ಯೋಗರಾಜ್ ಭಟ್ ಭೇಟಿಯಾಗಿದ್ದರು, ಆ ಸಮಯದಲ್ಲಿ ಸಹ ಈ ಸುದ್ದಿ ಹೈಪ್ ಕ್ರಿಯೆಟ್ ಮಾಡಿತ್ತು. ಸಧ್ಯಕ್ಕೆ ಹೊರಬಂದಿರುವ ಮಾಹಿತಿ ಪ್ರಕಾರ , ಪ್ರಭುದೇವ ಅವರೊಡನೆ ಒಮ್ಮೆ ಮಾತುಕತೆ ನಡೆದಿದ್ದು, ಅವರಿಗೆ ಕಥೆ ಇಷ್ಟವಾಗಿದೆ ಇಷ್ಟವಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಹೊರಬಂದಿದೆ.

ಯೋಗರಾಜ್ ಭರ್ ನಿರ್ದೇಶಿಸುವ ಶಿವಣ್ಣನ ಸಿನಿಮಾದಲ್ಲಿ ಪ್ರಭುದೇವ ಅವರು ನಟಿಸುವುದು ಖಚಿತವಾಗಿದ್ದು, ಇದೀಗ ಈ ಸಿನಿಮಾದ ಶೀರ್ಷಿಕೆ ಏನಿರಬಹುದು ಎಂಬ ಚರ್ಚೆ ನಡೆಯುತ್ತಿದ್ದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗರಾಜ್ ಭಟ್. ಗಾಳಿಪಟ2 ಸಿನಿಮಾ ಮುಗಿದ ನಂತರ ಈ ಹೊಸ ಸಿನಿಮಾ ಶುರು ಮಾಡುವುದಾಗಿ ತಿಳಿಸಿರುವ ಯೋಗರಾಜ್ ಭಟ್ರು, ಸಧ್ಯಕ್ಕೆ ಸಿನಿಮಾ ಶೀರ್ಷಿಕೆಯನ್ನು “ಕುಲದಲ್ಲಿ ಕೀಳ್ಯಾವುದೋ” ಎಂದು ಇಟ್ಟಿದ್ದೇನೆ. ಆದರೆ ಶೀರ್ಷಿಕೆಯನ್ನು ಇನ್ನು ಅಧಿಕೃತ ಇಟ್ಟಿಲ್ಲ ಎಂದಿದ್ದಾರೆ.

ಜೊತೆಗೆ, ಈ ಸಿನಿಮಾ 60 ಹಾಗೂ 70 ರ ದಶಕದಲ್ಲಿ ನಡೆಯುವ ಕಥೆಯಾಗಿದೆ, ಆದರೆ ಯಾವುದೇ ನೈಜ ಘಟನೆಯನ್ನು ಆಧರಿಸಿಲ್ಲ ಎಂದಿದ್ದಾರೆ ಯೋಗರಾಜ್ ಭಟ್. ಪ್ರಸ್ತುತ ಅಣ್ಣಾವ್ರ ಸತ್ಯಹರಿಶ್ಚಂದ್ರ ಸಿನಿಮಾ ಹಾಡಿನ ಮೊದಲ ಎರಡು ಪದಗಳನ್ನು ಶೀರ್ಷಿಕೆಯಾಗಿ ಆಯ್ಕೆ ಮಾಡಿದ್ದಾರೆ ಭಟ್ರು, ಜೊತೆಗೆ ಪ್ರಭುದೇವ ಮತ್ತು ಶಿವಣ್ಣರನ್ನು ಹಿಂದೆಂದೂ ನೋಡಿರದ ಹಾಗೆ ತೋರಿಸಲಿದ್ದೇವೆ, ಇದು ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದು ಎಂದಿದ್ದಾರೆ.

Trending

To Top