Cinema

ಮತ್ತೆ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ ಶಿವಣ್ಣ ಹಾಗು ಡಾಲಿ! ಸಿನಿಮಾ ಯಾವುದು ಗೊತ್ತಾ

ಟಗರು ಡಾಲಿ ಈ ಎರಡು ಪಾತ್ರಗಳನ್ನು ಕನ್ನಡ ಸಿನಿಪ್ರಿಯರು ಮರೆಯುವುದಿಲ್ಲ. ಅದರಲ್ಲೂ ಮಾಸ್ ಸಿನಿಮಾಗಳನ್ನು ಇಷ್ಟ ಪಡುವ ಹುಡುಗರಿಗೆ ಹಾಟ್ ಫೆವರೆಟ್ ಆಗಿರುತ್ತಾರೆ ಟಗರು ಶಿವ ಮತ್ತು ಡಾಲಿ. 2018 ರಲ್ಲಿ ತೆರೆಕಂಡ ಟಗರು ಸಿನಿಮಾ, ಶಿವಣ್ಣ ಹಾಗೂ ಧನಂಜಯ್ ಕಾಂಬಿನೇಷನ್ ಇಂದಲೇ ಹೆಚ್ಚು ಜನಪ್ರಿಯತೆ ಪಡೆದಿತ್ತು. ಟಗರು ಸಿನಿಮಾ ಮೂಲಕ ಮೊದಲ ಬಾರಿಗೆ ಸೈಕೋ ವಿಲನ್ ಪಾತ್ರದಲ್ಲಿ ನಟಿಸಿದ್ದ ಧನಂಜಯ್ ಅವರ ಕೆರಿಯರ್ ಅನ್ನು ಬೇರೆಡೆಗೆ ತಿರುಗಿಸಿತು ಟಗರು. ಈ ಸಿನಿಮಾದಿಂದ ಡಾಲಿ ಧನಂಜಯ್ ಎಂದೇ ಖ್ಯಾತಿ ಗಳಿಸಿದರು. ಈ ಪಾತ್ರದಿಂದ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿ ಸ್ಥಾನ ಪಡೆದುಕೊಂಡರು ಧನಂಜಯ್. ಇನ್ನು ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಡಾ.ಶಿವ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವ ಹಾಗೆ ಇಲ್ಲ.
ಟಗರು ಶಿವ ಪಾತ್ರ ಶಿವಣ್ಣ ಅವರಿಗೆ ಹೇಳಿ ಮಾಡಿಸಿದ ಹಾಗಿತ್ತು. ಅವರ ಗತ್ತು ಅದರ ಜೊತೆಗೆ ತುಂಬಿರುವ ಹಾಸ್ಯ ಪ್ರಜ್ಞೆ. ಅವರ ಆಕ್ಷನ್ ಎಲ್ಲವೂ ಅಭಿಮಾನಿಗಳಿಗೆ ಹುಚ್ಚು ಹಿಡಿಸುವ ಹಾಗಿತ್ತು. ಇನ್ನು ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ ಸೂರಿ ಅವರ ಪ್ರತಿಭೆಯನ್ನು ಹೇಳ ತೀರದು. ಒಟ್ಟಿನಲ್ಲಿ ಟಗರು ಒಂದು ಔಟ್ ಆಂಡ್ ಔಟ್ ಮಾಸ್ ಎಂಟರ್ಟ್ರೈನರ್ ಆಗಿ ಹೊರಹೊಮ್ಮಿತ್ತು. ಟಗರು ನಂತರ ಶಿವಣ್ಣ ಹಾಗೂ ಧನಂಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ನೋಡಬೇಕೆಂದು ಅಭಿಮಾನಿಗಳು ಎದುರುನೋಡುತ್ತಿದ್ದರು. ಇದೀಗ ಅಭಿಮಾನಿಗಳ ಆಸೆ ಈಡೇರುವ ಕಾಲ ಕೂಡಿ ಬಂದಿದೆ. ಶಿವಣ್ಣ ಹಾಗೂ ಧನಂಜಯ್ ಮತ್ತೊಂದು ಸಿನಿಮಾದಲ್ಲಿ ಒಂದಾಗಿ ನಟಿಸಲಿದ್ದಾರೆ. ಈ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಈ ಕುರಿತು ಖುದ್ದು ಡಾಲಿ ಧನಂಜಯ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಶಿವಣ್ಣ ಮತ್ತು ನಾನು ಮತ್ತೊಮ್ಮೆ ತೆರೆಮೇಲೆ ಬರಲಿದ್ದೇವೆ..2021 ರಲ್ಲಿ..” ಎಂದು ಬರೆದು ಫೋಟ್ ಒಂದನ್ನು ಹಂಚಿಕೊಂಡಿದ್ದಾರೆ ಧನಂಜಯ್. ಇನ್ನು ಹೆಸರಿಡದ ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಹಾಗೂ ಛಾಯಾಗ್ರಹಕ ವಿಜಯ್ ಮಿಲ್ಟನ್ ನಿರ್ದೇಶನ ಮಾಡಲಿದ್ದಾರೆ. ವಿಶೇಷ ಏನು ಅಂದರೆ, ಸಿನಿಮಾ ಕಥೆ ಕೇಳಿ ಶಿವಣ್ಣ ಅವರ ಎದುರಾಳಿ ಪಾತ್ರ ಬಹಳ ಸ್ಟ್ರಾಂಗ್ ಇರುವ ಕಾರಣ, ಧನಂಜಯ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಶಿವಣ್ಣ ಅವರೇ ಹೇಳಿದರಂತೆ. ಈ ಮೂಲಕ ಶಿವಣ್ಣ ಅವರ ಸರಳತೆ ಹಾಗೂ ಹೃದಯ ವೈಶಾಲ್ಯತೆಯನ್ನು ನಾವು ಮೆಚ್ಚಲೇಬೇಕು. ತಾನು ಮಾತ್ರ ಬೆಳೆಯಬೇಕು ಎನ್ನುವ ಸ್ವಾರ್ಥ ಪ್ರಪಂಚದಲ್ಲಿ ತಾನೂ ಬೆಳೆದು ತನ್ನ ಸುತ್ತ ಇರುವವರು ಬೆಳೆಯಬೇಕು ಎಂದುಕೊಳ್ಳುವವರು ಬಹಳ ಅಪರೂಪ.
ಈ ಚಿತ್ರವನ್ನು ಸಧ್ಯಕ್ಕೆ ಪ್ರೊಡಕ್ಷನ್ ನಂ.2 ಎಂದು ಕರೆಯಲಾಗಿದ್ದು. ಶಿವಣ್ಣ ಹಾಗೂ ಧನಂಜಯ್ ಅವರ ಪಾತ್ರಗಳು ಮಾತ್ರ ಕನ್ಫರ್ಮ್ ಆಗಿದೆ. ನಾಯಕಿ ಯಾರು ಹಾಗೂ ಇನ್ನುಳಿದ ತಾರಾಗಣದ ಆಯ್ಕೆಯ ಪ್ರಕ್ರಿಯೆ ಇನ್ನು ಶುರುವಾಗಿಲ್ಲ. ಕರೊನಾ ಅಟ್ಟಹಾಸ ಮುಗಿದು ಎಲ್ಲವೂ ನಾರ್ಮಲ್ ಆಗುತ್ತಿದ್ದಂತೆ, ಈ ಹೊಸ ಸಿನಿಮಾ ಕುರಿತು ಇಂಟರೆಸ್ಟಿಂಗ್ ಮಾಹಿತಿಗಳು ಹೊರಬೀಳಲಿವೆ. ಶಿವಣ್ಣ ಧನಂಜಯ್ ಒಂದಾಗಿ ನಟಿಸಲಿದ್ದಾರೆ ಎಂದರೆ ಅಭಿಮಾನಿಗಳಲ್ಲಿ ದುಪ್ಪಟ್ಟು ನಿರೀಕ್ಷೆ ಇರುವುದಂತೂ ಖಂಡಿತ. ಈ ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದನ್ನು ತಿಳಿಯಲು ಇನ್ನು ಬಹಳ ದಿನ ಕಾಯಬೇಕು.

Trending

To Top