Cinema

ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆಗೆ ಪರಿಹಾರ ಕೊಡುವಂತೆ ಮನವಿ ಮಾಡಿದ ಶಿವಣ್ಣ!

ಕರೊನಾ ವೈರಸ್ ಇಂದಾಗಿ ಲಾಕ್ ಡೌನ್ ಜಾರಿಯಾಗಿ, ಎಲ್ಲಾ ವ್ಯಾಪಾಈ ವಾಗಿವಾಟುಗಳು ಸ್ಥಗಿತವಾದಾಗಿನಿಂದ ದೇಶದ ಆರ್ಥಿಕ ಸ್ಥಿತಿ ಬಹಳ ಹದಗೆಟ್ಟಿದೆ. ದೇಶದ ಎಲ್ಲಾ ಉದ್ಯಮಗಳಿಗೂ ಸಹ ಇದರಿಂದ ತೊಂದರೆಯಾಗಿದೆ. ಚಿತ್ರರಂಗ ಇದಕ್ಕೆ ಹೊರತಾಗಿಲ್ಲ. ಸಿನಿಮಾ ಶೂಟಿಂಗ್, ಸಿನಿಮಾ ಪ್ರದರ್ಶನ ಮತ್ತು ಸಿನಿಮಾಗೆ ಸಂಬಂಧಿಸಿದ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿರುವ ಕಾರಣ, ಸಿನಿರಂಗದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರಿಗೆ ಹಾಗೂ ಚಿತ್ರರಂಗವನ್ನೇ ನಂಬಿಕೊಂಡು ಬದುಕಿರುವ ಇನ್ನಿತರ ಕೆಲಸಗಾರರಿಗೆ ಇದರಿಂದ ಬಹಳ ತೊಂದರೆಯಾಗಿದೆ. ಹಾಗಾಗಿ ಚಿತ್ರರಂಗಕ್ಕೆ ಇದರಿಂದ ಆಗಿರುವ ಕಷ್ಟಗಳು ಮತ್ತು ನಷ್ಟಗಳ ಬಗ್ಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್‍ಕುಮಾರ್ ಅವರು ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ನಿನ್ನೆ ಗುರುವಾರದ ದಿನ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಡಿಸಿಎಂ ಅಶ್ವಥ್ ನಾರಾಯಣ್ ಅವರ ಮನೆಗೆ ತೆರಳಿದ ಶಿವಣ್ಣ, ಚಿತ್ರರಂಗಕ್ಕೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಡಿಸಿಎಂ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಚರ್ಚೆ ಮುಗಿದ ನಂತರ ಮಾಧ್ಯಮಗಳ ಜೋತ್ರ್ ಮಾತನಾಡಿದ ಶಿವಣ್ಣ, ಕೊರೊನಾ ಲಕ್ ಡೌನ್ ಇಂದಾಗಿ ಚಿತ್ರರಂಗದ ಎಲ್ಲಾ ಕೆಲಸಗಳು ನಿಂತಿವೆ. ದೇಶದ ಎಲ್ಲೆಡೆ ಇದೇ ಪರಿಸ್ಥಿತಿ ಆಗಿದೆ. ಚಿತ್ರರಂಗಕ್ಕು ಸಹ ಇದೇ ಸಮಸ್ಯೆ ಆಗಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅಶ್ವಥ್ ನಾರಾಯಣ್ ಅವರು ತಿಳಿಸಿದ್ದಾರೆ.
ಇದರಿಂದಾಗಿ ಚಿತ್ರರಂಗದ ಎಲ್ಲ ವಿಭಾಗಗಳಿಗೂ ತೊಂದರೆ ಆಗಿದೆ. ಇವುಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸೀರಿಯಲ್, ನಾಟಕ, ಸಿನಿಮಾ ಎಲ್ಲಾ ಭಾಗಗಳಿಗೂ ಸಮಸ್ಯೆ ಆಗಿದೆ. ಸಬ್ಸಿಡಿ ಮತ್ತು ಚಿತ್ರೀಕರಣ ಪುನರಾರಂಭಿಸಲು ಅನುಮತಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇಂದು ಡಿಸಿಎಂ ಅವರನ್ನು ಭೇಟಿಮಾಡಿ ಸಮಸ್ಯೆಗಳ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದೇವೆ. ಸರ್ಕಾರ ಪಾಸಿಟಿವ್ ಆಗಿ ಸ್ಪಂದಿಸಿದೆ. ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದೇವೆ. ರಾಯರದಿನವಾದ ಗುರುವಾರದಂದು ಡಿಸಿಎಂ ಅವರ ಜೊತೆ ಮಾತನಾಡಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ ಶಿವಣ್ಣ.
ಅಮೆಜಾನ್ ಇಂದ ನಮಗೆ ತೊಂದರೆ ಏನಿಲ್ಲ. ಅಮೆಜಾನ್ ಇಂದಲೂ ಹಣ ಬರುತ್ತಿದೆ. ಡಬ್ಬಿಂಗ್ ವಿಚಾರದಲ್ಲಿ ಸಮಸ್ಯೆ ಅಲ್ಲ. ಕನ್ನಡ ಸಿನಿಮಾಗಳು ಎಲ್ಲ ಕಡೆ ಗೆಲ್ಲುತ್ತಿದೆ. ನೆಟ್ ಫ್ಲಿಕ್ಸ್, ಅಮೆಜಾನ್‍ ಪ್ರೈಮ್ ಇಂದ ನಿರ್ಮಾಪಕರಿಗೆ ಸಹಾಯ ಆಗುತ್ತಿದೆ. ಆದರೆ ಥೀಯೇಟರ್ ತೆರೆಯಲು ಅನುಮತಿ ನೀಡಲು ಆಗುವುದಿಲ್ಲ. ಈ ಬಗ್ಗೆ ನಾವು ಗಮನ ಹರಿಸಬೇಕು. ಸಿನಿಮಾ ಪ್ರದರ್ಶನಗಳ ಕುರಿತು ನಾವು ಬೇಡಿಕೆ ಇಟ್ಟಿಲ್ಲ. ಕೊರೊನಾ ಕಡಿಮೆ ಆದ ಮೇಲೆ ಎಲ್ಲವೂ ಆರಂಭವಾಗಲಿದೆ. ಚಿತ್ರರಂಗದ ಸಮಸ್ಯೆಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದೇವೆ. ಪ್ಯಾಕೇಜ್ ಅನ್ನೋದಕ್ಕಿಂತ ನಮಗಾಗಿರುವ ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಶಿವಣ್ಣ ತಿಳಿಸಿದ್ದಾರೆ.

Trending

To Top