Cinema

ತಮ್ಮ ಅತ್ತೆಯ ಜೊತೆ ಕನ್ನಡತಿ ಶಿಲ್ಪಾ ಶೆಟ್ಟಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ, ಸಕತ್ ವಿಡಿಯೋ ನೋಡಿ

ಮಂಗಳೂರಿನ ಬೆಡಗಿ, ಕರ್ನಾಟಕದ ಚೆಲುವೆ ಶಿಲ್ಪಾ ಶೆಟ್ಟಿ ಬಹುಭಾಷಾ ನಟಿ. ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಹಿಂದಿಯಲ್ಲಿ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳನ್ನು ಜಡ್ಜ್ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರ ಡ್ಯಾನ್ಸ್ ಮತ್ತು ನಟನೆಗೆ ಮಾರುಹೋಗದವರಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುವ ಈ ನಟಿ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಮತ್ತು ಸಿನಿಜೀವನದ ವಿಶೇಷ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರು ಹಂಚಿಕೊಂಡಿರುವ ಹೊಸ ಡ್ಯಾನ್ಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ. ಸ್ಕ್ರೋಲ್ ಡೌನ್ ಮಾಡಿ ಶಿಲ್ಪಿ ಶೆಟ್ಟಿ ಡಾನ್ಸ್ ವಿಡಿಯೋ ನೋಡಿ
ನಟಿ ಶಿಲ್ಪಾ ಶೆಟ್ಟಿ ಅವರ ಅತ್ತೆಯ ಹುಟ್ಟುಹಬ್ಬದಂದು, ಪಂಜಾಬಿ ಹಾಡು, ಸದಾ ಖರಾ ಖರಾ ಹಾಡಿಗೆ ಅತ್ತೆಯ ಜೊತೆ ಹೆಜ್ಜೆ ಹಾಕಿ, ವಿಡಿಯೋ ಶೇರ್ ಮಾಡಿದ್ದಾರೆ. ಪಂಜಾಬಿ ಹಾಡಿಗೆ ಅತ್ತೆ ಸೊಸೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಅತ್ತೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಈ ವಿಡಿಯೋ ಶೇರ್ ಮಾಡಿದ್ದಾರೆ. “ಮೋಸ್ಟ್ ಅಮೇಜಿಂಗ್ ಅತ್ತೆಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.. ನಮ್ಮ ಕುಟುಂಬದ ಅಲ್ಟಿಮೇಟ್ ರಾಕ್ ಸ್ಟಾರ್ ನೀವು.. ನಮ್ಮೆಲ್ಲರ ನಿಮ್ಮ ಆಶೀರ್ವಾದ ಇರುವುದು ನಮ್ಮೆಲ್ಲರ ಅದೃಷ್ಟ. ನಿಮ್ಮಂತೆ ಡ್ಯಾನ್ಸ್ ಪಾರ್ಟ್ನರ್ ಆಗಿರುವ ಅತ್ತೆಯನ್ನು ಪಡೆದ ನಾನೇ ಅದೃಷ್ಟವಂತ ಸೊಸೆ.. ಜೀವನದ ಉದ್ದಕ್ಕೂ, ಸಂತೋಷದಿಂದ ಮತ್ತು ಆರೋಗ್ಯದಿಂದ ನೀವು ಹೀಗೆಯೇ ಡ್ಯಾನ್ಸ್ ಮಾಡುತ್ತಾ ಇರಬೇಕು..ನಮ್ಮೆಲ್ಲರಿಗೂ ಹೀಗೆ ಸ್ಪೂರ್ತಿಯಾಗಿರಿ.ಈ ಕೆಳಗಿನ ವಿಡಿಯೋ ನೋಡಿ
ವಿ ಲವ್ ಯೂ..” ಎಂದು ಬರೆದು ಅತ್ತೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಶಿಲ್ಪಾ ಶೆಟ್ಟಿ. ಶಿಲ್ಪಾ ಶೆಟ್ಟಿ ಮತ್ತು ಅವರ ಅತ್ತೆಯ ಡ್ಯಾನ್ಸ್ ವಿಡಿಯೋ ಈಗಾಗಲೇ 1ಮಿಲಿಯನ್ ವೀಕ್ಷಣೆ ದಾಟಿದೆ. ಶಿಲ್ಪಾ ಶೆಟ್ಟಿ ಅವರ ಸಿನಿಜರ್ನಿ ವಿಚಾರಕ್ಕೆ ಬಂದರೆ ಬಹಳ ದಿನಗಳ ನಂತರ ಬೆಳ್ಳಿತೆರೆಗೆ ವಾಪಸ್ ಬಂದಿದ್ದಾರೆ ಶಿಲ್ಪಾ. ನಿಕ್ಕಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಭ್ಯಾಗ್ಯಶ್ರೀ ಪುತ್ರ ಅಭಿಮನ್ಯು ದಸಾನಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಂಗಮಾ-2ದಲ್ಲಿಯೂ ಶಿಲ್ಪಾ ಕಾಣಿಸಿಕೊಳ್ಳುತ್ತಿದ್ದಾರೆ. ಮಂಗಳೂರಿನ ಬೆಡಗಿ, ಕರ್ನಾಟಕದ ಚೆಲುವೆ ಶಿಲ್ಪಾ ಶೆಟ್ಟಿ ಬಹುಭಾಷಾ ನಟಿ. ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಹಿಂದಿಯಲ್ಲಿ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳನ್ನು ಜಡ್ಜ್ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರ ಡ್ಯಾನ್ಸ್ ಮತ್ತು ನಟನೆಗೆ ಮಾರುಹೋಗದವರಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುವ ಈ ನಟಿ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಮತ್ತು ಸಿನಿಜೀವನದ ವಿಶೇಷ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರು ಹಂಚಿಕೊಂಡಿರುವ ಹೊಸ ಡ್ಯಾನ್ಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.

Trending

To Top