ಶರ್ವಾನಂದ್ ನಿಶ್ಚಿತಾರ್ಥ ರದ್ದಾಯ್ತಾಂತೆ, ಕಾರಣವಾದರೂ ಏನು? ವೈರಲ್ ಆದ ಸುದ್ದಿ……!

ಟಾಲಿವುಡ್ ಯಂಗ್ ಹಿರೋ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ನಿಶ್ವಿತಾರ್ಥ ಕಳೆದ ಐದು ತಿಂಗಳ ಹಿಂದೆ ನಡೆಯಿತು. ಆದರೆ ಇಲ್ಲಿಯವರೆಗೂ ಅವರ ಮದುವೆಯ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಇನ್ನೂ ಅವರ ಮದುವೆ ಯಾವಾಗ ಎಂದು ಅವರ ಅಭಿಮಾನಿಗಳಲ್ಲಿ ಮೂಡಿದೆ. ಇದೀಗ ಶರ್ವಾನಂದ್ ಹಾಗೂ ರಕ್ಷಿತಾರೆಡ್ಡಿ ನಿಶ್ಚತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅದ್ದೂರಿಯಾಗಿ ನಡೆದ ಈ ಜೋಡಿಯ ನಿಶ್ವಿತಾರ್ಥ ಮುರಿದು ಬೀಳಲು ಕಾರಣವಾದರೂ ಏನು ಎಂಬ ಅನುಮಾನಗಳು ಮೂಡಿದೆ.

ತೆಲುಗು ನಟ ಶರ್ವಾನಂದ್ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಕಳೆದ 2023 ಜನವರಿ ಮಾಹೆಯಲ್ಲಿ ಶರ್ವಾನಂದ್ ಹಾಗೂ ತೆಲಂಗಾಣ ಹೈಕೋರ್ಟ್ ನ್ಯಾಯವಾಧಿ ಮಧುಸೂದನ್ ರೆಡ್ಡಿ ಪುತ್ರಿ ರಕ್ಷಿತಾ ರೆಡ್ಡಿಯ ಜೊತೆಗೆ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಈ ಜೋಡಿಯ ನಿಶ್ಚಿತಾರ್ಥ ನಡೆಯಿತು. ರಕ್ಷಿತಾರೆಡ್ಡಿ ಅಮೇರಿಕಾದಲ್ಲಿ ಸಾಫ್ಟ್ ವೇರ್‍ ಇಂಜನಿಯರ್‍ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆಲುಗು ಸಿನಿರಂಗದ ಸ್ಟಾರ್‍ ಸೆಲೆಬ್ರೆಟಿಗಳಾದ ಮೆಗಾಸ್ಟಾರ್‍ ಚಿರಂಜೀವಿ, ನಾಗಾರ್ಜುನ, ರಾಮಚರಣ್, ಉಪಾಸನಾ, ನಾಗಚೈತನ್ಯ, ಅಖಿಲ್, ಅಮಲಾ, ಸಿದ್ದಾರ್ಥ್, ಅದಿತಿರಾವ್ ಹೈಧರಿ ಸೇರಿದಂತೆ ಅನೇಕ ಸಿನಿರಂಗದ ಗಣ್ಯರು ಆಗಮಿಸಿದ್ದರು.

ಇನ್ನೂ ಶರ್ವಾನಂದ್ ರಕ್ಷಿತಾ ರೆಡ್ಡಿಯ ನಿಶ್ಚಿತಾರ್ಥ ನಡೆದು ಐದು ತಿಂಗಳು ಆಗುತ್ತಾ ಬರುತ್ತಿದೆ. ಆದರೆ ಇಲ್ಲಿಯವರೆಗೂ ಅವರ ಮದುವೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಕಾರಣದಿಂದಾಗಿ ಅನೇಕ ಅನುಮಾನಗಳು ಶುರುವಾಗಿದೆ. ಇದೀಗ ಆ ಅನುಮಾನಗಳು ರೂಮರ್‍ ಗಳಾಗಿದೆ. ಶರ್ವಾನಂದ್ ನಿಶ್ಚಿತಾರ್ಥ ಮುರಿದು ಬಿದಿದ್ದೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿವೆ, ಇನ್ನೂ ಈ ರೂಮರ್‍ ಗಳು ಜೋರಾಗಿ ಹರಿದಾಡುತ್ತಿದ್ದಂತೆ. ಈ ಬಗ್ಗೆ ಶರ್ವಾನಂದ್ ಟೀಂ ರಿಯಾಕ್ಟ್ ಆಗಿದೆ. ಈ ರೂಮರ್‍ ಗಳೆಲ್ಲವೂ ಸತ್ಯಕ್ಕೆ ದೂರವಾದುದು. ಶರ್ವಾನಂದ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಮದುವೆಯನ್ನು ಮುಂದೂಡಲಾಗಿದೆ. ಸಿನೆಮಾಗಳು ಪೂರ್ಣಗೊಂಡ ಬಳಿಕ ಅವರ ಮದುವೆ ನಡೆಯಲಿದೆ. ಇಂತಹ ರೂಮರ್‍ ಗಳನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಶರ್ವಾನಂದ್ ಶ್ರೀರಾಮ್ ಆದಿತ್ಯ ನಿರ್ದೇಶನದಲ್ಲಿ ಸೆಟ್ಟೇರಿರುವ ಸಿನೆಮಾದಲ್ಲಿ ನಟಿಸುತ್ತಿದ್ದಾರಂತೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಇದರ ಜೊತೆಗೆ ಶರ್ವಾನಂದ್ ಮತಷ್ಟು ಸಿನೆಮಾಗಳನ್ನು ಒಪ್ಪಿಕೊಂಡಿದ್ದು, ಸಿನೆಮಾಗಳು ಮುಗಿದ ಬಳಿಕ ಶೀಘ್ರದಲ್ಲೇ ಎರಡು ಕುಟುಂಬಗಳು ಮದುವೆ ಸಿದ್ದತೆಗಳನ್ನು ಮಾಡುತ್ತಾರೆ ಎಂದು ಶರ್ವಾನಂದ್ ಟೀಮ್ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶರ್ವಾನಂದ್ ಎಂಗೇಜ್‌ಮೆಂಟ್ ಕ್ಯಾನ್ಸಲ್ ಕುರಿತಂತೆ ಹುಟ್ಟಿಕೊಂಡ ರೂಮರ್‍ ತಣ್ಣಗಾಗಿದೆ.