ಪಠಾಣ್ ಸಿನೆಮಾ ಹಾಡು ಟ್ರೆಂಡಿಂಗ್, ಹಾಡು ಎಷ್ಟು ಸದ್ದು ಮಾಡಿತ್ತೋ ಅದೇ ಮಾದರಿಯಲ್ಲಿ ಟ್ರೋಲ್…!

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಪಠಾಣ್ ಸಿನೆಮಾ ಈಗಾಗಲೇ ಸೆಟ್ಟೇರಿದ್ದು, ಶೀಘ್ರದಲ್ಲೆ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ದೀಪಿಕಾ ಹಾಗೂ ಶಾರುಖ್ ಖಾನ್ ರೊಮ್ಯಾನ್ಸ್ ಬೇರೆ ಲೆವೆಲ್ ನಲ್ಲೇ ಇರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಈ ಸಿನೆಮಾದ ಮೊದಲನೇ ಹಾಡು ಸಖತ್ ಹಾಟ್ ಆಗಿದೆ. ಸದ್ಯ ಎಲ್ಲಾ ಕಡೆ ಈ ಹಾಡು ಟ್ರೆಂಡಿಂಗ್ ನಲ್ಲಿದ್ದು, ಜೊತೆಗೆ ಟ್ರೋಲ್ ಸಹ ಆಗುತ್ತಿದೆ. ಇನ್ನೂ ಈ ಸಿನೆಮಾ ಜ.23 ರಂದು ವಿಶ್ವದಾದ್ಯಂತ ಭರ್ಜರಿಯಾಗಿ ತೆರೆ ಕಾಣಲಿದೆ.

ಬಾಲಿವುಡ್ ಸ್ಟಾರ್‍ ನಟ ಶಾರುಕ್ ಖಾನ್ ಹಾಗೂ ದೀಪಿಕಾ ಪಡುಕೊಣೆ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪಠಾಣ್ ಸಿನೆಮಾದ ಫಸ್ಟ್ ಸಿಂಗಲ್ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾಗಿದ್ದೇ ತಡ ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲಾ ಕಡೆ ಸಖತ್ ಹಿಟ್ ಆಗುತ್ತಿದೆ. ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದೆ. ಈ ಹಾಡಿನಲ್ಲಿ ದೀಪಿಕಾ ತುಂಬಾ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆಕೆಯ ಹಾಟ್ ನೆಸ್ ಗೆ ಯುವಕರು ಫಿದಾ ಆಗಿದ್ದಾರೆ ಎನ್ನಬಹುದಾಗಿದೆ. ಈ ಹಾಡಿನಲ್ಲಿ ಆಕೆಯ ಹಾಟ್ ಲುಕ್ಸ್, ಭರ್ಜರಿ ಸ್ಟೆಪ್ ಗಳು ಕಣ್ಣು ಮುಚ್ಚಲು ಸಾಧ್ಯವಿಲ್ಲದಂತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಹಾಡಿನ ಕೊನೆಯಲ್ಲಿ ಶಾರುಕ್ ದೀಪಿಕಾ ಪಡುಕೋಣೆ ಬಿಕಿನಿಯ ಮೇಲೆ ಕೈ ಹಾಕಿದ್ದಾರೆ. ಇದರಿಂದ ಕೆಲವರು ಆಕ್ರೋಷ ಗೊಂಡಿದ್ದಾರೆ. ಜೊತೆಗೆ ಆಕ್ರೋಷ ಸಹ ವ್ಯಕ್ತಪಡಿಸುತ್ತಾ ಟ್ರೋಲ್ ಸಹ ಮಾಡಲಾಗುತ್ತಿದೆ.  ಆ ದೃಶ್ಯವನ್ನು ಕುಟುಂಬದೊಂದಿಗೆ ನೋಡಲು ಸಾಧ್ಯವಾಗುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಅಷ್ಟೇಅಲ್ಲದೇ ಶಾರುಕ್ ಖಾನ್ ಸಿನೆಮಾಗಳಲ್ಲಿ ಇಂತಹ ವಲ್ಗರ್‍ ದೃಶ್ಯಗಳನ್ನು ಎಕ್ಸಪೆಕ್ಟ್ ಮಾಡಿಲ್ಲ ಎಂದು ಸೋಷಿಯಲ್ ಮಿಡಿಯಾ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಯೂಟ್ಯೂಬ್ ನಲ್ಲೂ ಸಹ ಕಾಮೆಂಟ್ ಗಳ ಮೂಲಕ ವಿರೋಧಿಸುತ್ತಿದ್ದರೇ, ಟ್ವಿಟರ್‍ ನಲ್ಲಂತೂ ದೊಡ್ಡ ಮಟ್ಟದಲ್ಲೇ ವಿಮರ್ಶಾತ್ಮಕ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನೂ ಪಠಾನ್ ಸಿನೆಮಾ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸಿನೆಮಾದಲ್ಲಿ ಶಾರುಕ್ ಸಿಕ್ಸ್ ಪ್ಯಾಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ನಾಲ್ಕು ವರ್ಷದ ಬಳಿಕ ದೊಡ್ಡ ಪರದೆಯ ಮೇಲೆ ಶಾರುಕ್ ಕಾಣಿಸಿಕೊಳ್ಳುತ್ತಿದ್ದು, ಆತನ ಅಭಿಮಾನಿಗಳು ತುಂಬಾ ಕುತೂಹಲದಿಂದ ಸಿನೆಮಾ ನೋಡಲು ಕಾಯುತ್ತಿದ್ದಾರೆ. ಇನ್ನೂ ದೀಪಿಕಾ ಸಹ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು. ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸದ್ಯ ಪಠಾನ್ ಸಿನೆಮಾದ ಈ ಫಸ್ಟ್ ಸಿಂಗಲ್ ಸ್ಪೇನ್ ನಲ್ಲಿ ಸುಂದರವಾದ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ಶಾರುಕ್ ಅಂಡ್ ದೀಪಿಕಾ ತುಂಬಾ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಪೂರ್ಣ ದಿಪೀಕಾ ಕಲರ್‍ ಪುಲ್ ಬಿಕಿನಿಯಲ್ಲೇ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾವನ್ನು ಸಿದ್ದಾರ್ಥ್ ಆನಂದ ನಿದೇಶನ ಮಾಡಿದ್ದು, ಏಕಕಕಾಲದಲ್ಲಿ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಮುಂದಿನ ವರ್ಷ ಜ.23 ರಂದು ತೆರೆಕಾಣಲಿದೆ.

Previous articleನಟಿ ಅಂಜಲಿ ಅಮೇರಿಕಾ ಮೂಲದ ಬ್ಯುಸಿನೆಸ್ ಮ್ಯಾನ್ ಜೊತೆ ಮದುವೆಯಾಗಿದ್ದಾರಂತೆ, ರೂಮರ್ ಗೆ ನಟಿ ಕೊಟ್ಟ ಕ್ಲಾರಿಟಿ ಏನು?
Next articleಸೌಂದರ್ಯದ ಧಾಳಿ ಮಾಡಿದ ಅನಸೂಯಾ ಭಾರದ್ವಾಜ್, ವೈಟ್ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಹಾಟ್ ಆಂಕರ್….!