ಬೋಲ್ಡ್ ನಟಿ ಶ್ರದ್ದಾ ದಾಸ್ ಗೆ ಕಿಸ್ ಕೊಡು ಎಂದು ಕೇಳಿದ ಹೈಪರ್ ಆದಿ, ಆಕೆ ಮಾಡಿದ್ದು ಏನು ಗೊತ್ತಾ?

ಅನೇಕ ಸಿನೆಮಾಗಳ ಮೂಲಕ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಫೇಮ್ ಪಡೆದುಕೊಂಡ ಶ್ರದ್ದಾ ದಾಸ್ ಕಿರುತೆರೆಯ ರಿಯಾಲಿಟಿ ಶೋ ಢಿ14 ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಪ್ರೊಮೋ ಒಂದು ಬಿಡುಗಡೆಯಾಗಿದ್ದು, ಪ್ರಮೋ ಸಖತ್ ಸದ್ದು ಮಾಡುತ್ತಿದೆ. ಈ ಶೋ ನಲ್ಲಿದ್ದ ಹೈಪರ್‍ ಆದಿ ಅತಿಥಿಯಾಗಿ ಬಂದಿದ್ದ ಶ್ರದ್ದಾದಾಸ್ ಬಳಿ ಕಿಸ್ ಕೇಳಿದ್ದಾನೆ. ಅದಕ್ಕೆ ಶ್ರದ್ದಾ ಮಾಡಿದ ಕೆಲಸ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಶ್ರದ್ದಾ ಹೈಪರ್‍ ಆದಿಗೆ ಏನು ಮಾಡಿದರು ಎಂಬ ವಿಚಾರಕ್ಕೆ ಬಂದರೇ,

ತೆಲುಗು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಒಳ್ಳೆಯ ರೇಟಿಂಗ್ ಸ್ವಂತ ಮಾಡಿಕೊಂಡ ಶೋಗಳಲ್ಲಿ ಢಿ ರಿಯಾಲಿಟಿ ಶೋ ಸಹ ಒಂದಾಗಿದೆ. ಇತ್ತೀಚಿಗಷ್ಟೆ ಢಿ14 ಪ್ರೊಮೋ ಬಿಡುಗಡೆಯಾಗಿದೆ. ಈ ಪ್ರೊಮೋದಲ್ಲಿ ಹೈಪರ್‍ ಆದಿ ನಟಿ ಶ್ರದ್ದಾದಾಸ್ ರವರ ಬಳಿಕ ಕಿಸ್ ಬೇಕು ಕೊಡು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶ್ರದ್ದಾ ಹಿಂದಿಯಲ್ಲಿ ನೀವು ಏನು ಮಾತನಾಡುತ್ತೀದ್ದೀರಾ ನಿಮಗೆ ಅರ್ಥವಾಗುತ್ತಿದ್ದೆಯೇ ಎಂದು ಹೇಳಿದ್ದಾರೆ. ಬಳಿಕ ಹೈಪರ್‍ ಆದಿ ಒಂದು ಕಿಸ್ ಅಲ್ಲ ಎರಡು ಕಿಸ್ ಬೇಕು ಎಂದು ಕೇಳಿದ್ದಾರೆ. ಬಳಿಕ ಆಂಕರ್‍ ಪ್ರದೀಪ್ ರೆಡಿ ಒನ್ ಟೂ ಥ್ರಿ ಎಂದು ಹೇಳಿದ ಕೂಡಲೇ ಶ್ರದ್ದಾ ಆದಿಯ ಎರಡೂ ಕೆನ್ನೆಯ ಮೇಲೆ ಕೊಟ್ಟಿದ್ದಾರೆ. ಆದರೆ ಆಕೆ ಕೊಟ್ಟಿದ್ದು, ಕಿಸ್ ಅಲ್ಲ ಬದಲಿಗೆ ಕೆನ್ನೆಗೆ ಎರಡು ಬಾರಿಸಿದ್ದಾರೆ. ಸದ್ಯ ಈ ಪ್ರೊಮೋ ಸಖತ್ ವೈರಲ್ ಆಗುತ್ತಿದೆ.

ಇದಾದ ಬಳಿಕ ಕಿಸ್ ಎಂದರೇ ಏಟು ಎಂದು ಹೇಳಿದ್ದು ಯಾರು ಎಂದು ಆದಿ ಪ್ರದೀಪ್ ಅವರನ್ನು ಬೈದಿದ್ದಾರೆ. ಆ ಬಳಿಕ ಕಿಸ್ ಎಂದರೇ ಗೂಸಾ ಎಂದು ಮಾಸ್ಟರ್‍ ಹೇಳಿದ್ದು. ಅರ್ಧಗಂಟೆ ಗೂಸ ಎಂದು ಶ್ರದ್ದಾದಾಸ್ ಗೆ ಹೇಳಿದ್ದಾರೆ. ಬಳಿಕ ಶ್ರದ್ದಾದಾಸ್ ಸಹ ಹೈಪರ್‍ ಆದಿಯ ಮೇಲೆ ಪಂಚ್ ಗಳ ಮೇಲೆ ಪಂಚ್ ಗಳನ್ನು ಹಾಕಿದ್ದಾರೆ. ಇನ್ನೂ ಈ ವಿಡಿಯೋಗೆ ಸದ್ಯ ಲಕ್ಷಗಳ ಗಟ್ಟಲೇ ವ್ಯೂವ್ಸ್ ದೊರೆತಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ವೈರಲ್ ಆಗುತ್ತಿದೆ. ಅನೇಕರುನ್ನು ಈ ವಿಡಿಯೋ ಆಕರ್ಷಣೆ ಮಾಡಿದೆ. ಇನ್ನೂ ಹೈಪರ್‍ ಆದಿ ಜಬರ್ದಸ್ತ್ ಶೋನಲ್ಲಿ ಒಳ್ಳೆಯ ಮನರಂಜನೆ ನೀಡುತ್ತಿದ್ದರು. ಆದರೆ ಕೆಲವು ದಿನಗಳಿಂದ ಆತ ಮೊದಲಿನಷ್ಟು ಮನರಂಜನೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಸದ್ಯ ಹೈಪರ್‍ ಆದಿ ಸಹ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೇರೆ ಶೋಗಳಲ್ಲೂ ಸಹ ಹೈಪರ್‍ ಆದಿಗೆ ಆಫರ್‍ ಗಳು ಬರುತ್ತಿರುವ ಕಾರಣದಿಂದ ಅವರು ಮೊದಲಿನಂತೆ ಜಬರ್ದಸ್ತ್ ನಲ್ಲಿ ಹೆಚ್ಚಿನ ಮನರಂಜನೆ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಜಬರ್ದಸ್ತ್ ನಲ್ಲಿದ್ದ ಅನೇಕ ಕಲಾವಿದರು ಶೋನಿಂದ ಹೊರಹೋದ ಬಳಿಕ ಕೆರಿಯರ್‍ ನಲ್ಲಿ ಫೇಲ್ ಆಗಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಸಹ ಹೊಂದಿರುವ ಹೈಪರ್‍ ಆದಿಯವರು ಅಂತಹ ತಪ್ಪನ್ನು ಮಾಡದೇ ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ.

Previous articleಸಿನೆಮಾಗಳನ್ನು ಆಯ್ಕೆ ಮಾಡುವ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ರಿವೀಲ್ ಮಾಡಿದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ..!
Next articleಎರಡನೇ ಮದುವೆಯ ಚಿಂತೆಯಲ್ಲಿ ಬಿದ್ದ ಸ್ಟಾರ್ ಆಂಕರ್ ಅನಸೂಯ, ಕಾರಣ ಏನು ಗೊತ್ತಾ?