ಶರಣ್ ಕಷ್ಟ ಪಟ್ಟು ಕಟ್ಟಿಸಿದ್ದ ಮನೆಯ ಗೃಹ ಪ್ರವೇಶ ಹೇಗಿತ್ತು ನೋಡಿ ಯಾರೆಲ್ಲಾ ಬಂದಿದ್ರು!

sharan1
sharan1

ನಮ್ಮ ಶರಣ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಶರಣ್ ಅವರು ಕನ್ನಡದ ಖ್ಯಾತ ನಟಿ ಶ್ರುತಿ ಅವರ ತಮ್ಮ. ಶರಣ್ ಅವರು 1996 ಅಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಶರಣ್ ಅವರ ಮೊತ್ತ ಮೊದಲ ಕನ್ನಡ ಚಿತ್ರ Prema Prema ಪ್ರೇಮ. ಈ ಚಿತ್ರದಲ್ಲಿ ಶರಣ್ ಅವರು ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ನಂತರ ಸುಮಾರಿ 15 ಕ್ಕೂ ಹೆಚ್ಚು ವರ್ಷಗಳ ಪೋಷಕ ನಟನಾಗಿ ಸಿನಿಮಾ ರಂಗದಲ್ಲಿ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಬಹಳ ಕಷ್ಟ ಪಟ್ಟು ಹಾಸ್ಯ ನಟನೆ ಮಾಡುತ್ತಿದ್ದ ಶರಣ್ ಅವರು 2012 ರಲ್ಲಿ ರಾಂಬೊ ಚಿತ್ರದ ಮೂಲಕ ಹೀರೋ ಆದರೂ. ಇವರು ಈಗ ತಮ್ಮ ಒಂದು ಸ್ವಂತ ಮನೆಯನ್ನು ಕಟ್ಟಿದ್ದಾರೆ. ಮನೆ ಹೇಗಿದೆ, ಮನೆಯ ಗೃಹ ಪ್ರವೇಶಕ್ಕೆ ಯಾರ್ ಯಾರು ಬಂದಿದ್ದಾರೆ ನೋಡಿರಿ.
ಶರಣ್ ಅವರು ಹಾಸ್ಯ ನಟನಾಗಿ ಸುಮಾರು 75 ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಶರಣ್ ಅವರು ಹೀರೋ ಆಗಿ ಸುಮಾರು 12 ಕನ್ನಡ ಚಿತ್ರಗಳನ್ನು ಮಾಡಿದ್ದರು. ಇವರು ಹೀರೋ ಆಗಿ ಮಾಡಿದ್ದ ಮೊಟ್ಟ ಮೊದಲ ಕನ್ನಡ ಚಿತ್ರದ ಹೆಸರು ರಾಂಬೊ. ಈ ಚಿತ್ರ ಸೂಪರ್ ಹಿಟ್ ಆಗಿ 2012 ವರ್ಷದ ಕನ್ನಡ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿತ್ತು. ಅದಾದ ನಂತರ ಇವರ ಮತ್ತು ಚಿಕ್ಕಣ್ಣ ಅವರ ಕಾಂಬಿನೇಶನ್ ಇದ್ದ ಅಧ್ಯಕ್ಷ ಚಿತ್ರ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು. ಅದಾದ ನಂತರ ಶರಣ್ ಹಿಂದಿರುಗಿ ನೋಡೇ ಇಲ್ಲ.
ಸದ್ಯ ಶರಣ್ ಅವರು ಕನ್ನಡದ ಟಾಪ್ ಸ್ಟಾರ್ಟ್ಸ್ ಗಳಲ್ಲಿ ಒಬ್ಬರು. ಶರಣ್ ಅವರು ಬಹಳ ಸಿಂಪಲ್ ಮನುಷ್ಯ. ಶರಣ್ ಅವರು ಯಾವ ಕಾಂಟ್ರೊವರ್ಸಿ ಗು ತಲೆ ಹಾಕುವುದಿಲ್ಲ, ತಮ್ಮ ಪಾಡಿಗೆ ತಾವು ಸಿನಿಮಾ ಗಳಲ್ಲಿ ಕೆಲಸ ಮಾಡಿ, ತಮ್ಮ ಕುಟುಂಬದ ಜೊತೆ ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ಕನ್ನಡ ನಟ ಶರಣ್ ಅವರ ವಿಕ್ಟರಿ 2 ಚಿತ್ರ ಬಿಡುಗಡೆ ಆಗಿ ಈಗಲೂ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಶರಣ್ ಅವರು ಬೆಂಗಳೂರಿನಲ್ಲಿ ತಾವು ಬಹಳ ಕಷ್ಟ ಪಟ್ಟು ದುಡಿದ ಹಣದಿಂದ ಒಂದು ಸ್ವಂತ ಮನೆಯನ್ನು ಕಟ್ಟಿದ್ದಾರೆ. ಈ ಮನೆಯ ಗೃಹ ಪ್ರವೇಶಕ್ಕೆ ಕನ್ನಡ ಚಿತ್ರ ರಂಗದ ಗಣ್ಯರು ಬಂದಿದ್ದರು. ಕಲಾವಿದರಾದ ಚಿಕ್ಕಣ್ಣ, ಶ್ರುತಿ ಹಾಗು ಅವರ ಮಗಳು, ಹಿರಿಯ ನಟ ರಾಮಚಂದ್ರ ಇನ್ನು ಹಲವಾರು ಗಣ್ಯರು ಬಂದಿದ್ದರು.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡೀರ್.

Previous article(video)ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹಾಗು ದರ್ಶನ್ ಸಕತ್ ಜಟಾಪಟಿ! ನೋಡಲೇಬೇಕಾದ ಅಪರೂಪದ ವಿಡಿಯೋ
Next article(video)2019ರಲ್ಲೇ ಸೆಟ್ಟೇರುತ್ತೆ ಅಮಿತಾಭ್ ಬಚ್ಚನ್ ಹಾಗು ಕಿಚ್ಚ ಸುದೀಪ್ ಅವರ ಹಿಂದಿ ಸಿನಿಮಾ! ರಿಷಬ್ ಶೆಟ್ಟಿ