Karnataka

ಹೆಮ್ಮೆಯ ಕನ್ನಡತಿ ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿ ಜಗತ್ತನ್ನೇ ಗೆದ್ದಿದ್ದು ಹೇಗೆ ಗೊತ್ತಾ! ವಿಡಿಯೋ ನೋಡಿ ಶೇರ್ ಮಾಡಿ

ಮೂರು ಪ್ಲಸ್ ಒಂದು ಎಷ್ಟು? ನಾಲ್ಕರಿಂದ ಎರಡನ್ನು ಗುಣಿಸಿದರೆ ಎಷ್ಟು ? ಇಂತಹ ಸುಲಭದ ಲೆಕ್ಕಗಳಿಗೆ ಎಲ್ಲರೂ ಸರಿ ಉತ್ತರ ನೀಡುತ್ತಾರೆ. ಆದರೆ 6583 ಕ್ಕೆ 4368 ಸೇರಿದ್ರೆ ಎಷ್ಟು ಅಂತ ಯಾರಿಗಾದ್ರು ಕೇಳಿದ್ರೆ ಟೆನ್ಷನ್ ಆಗ್ತಾರೆ. ಆದ್ರೆ, ಆ ವ್ಯಕ್ತಿಗೆ ಇದು ನೀರು ಕುಡಿದಷ್ಟೇ ಸುಲಭ.. ಅವರೇ ನಮ್ಮ ಕರ್ನಾಟಕದ ಹೆಮ್ಮೆ ಶಕುಂತಲಾ ದೇವಿ.ಗಣಿತ ಎಂಬುದು ಹಲವರಿಗೆ ಬಹಳ ಕಷ್ಟದ ವಿಷಯ. ಆದರೆ ಶಕುಂತಲಾ ದೇವಿ ಅವರಿಗೆ ಇದು ಅತಿಸುಲಭ. ಎಂಥದ್ದೇ ಲೆಕ್ಕವಾದರು ಲೀಲಾಜಾಲವಾಗಿ ಬಿಡಿಸುವ ಎಕ್ಸ್​ಪರ್ಟ್​ ಇವರು. ಗಣಿತ ವಿಷಯದಲ್ಲಿ ಅವರ ಅದ್ಭುತ ಸಾಮರ್ಥ್ಯದಿಂದ ಜಗತ್ತಿನ ಗಮನ ಸೆಳೆದ ಶಕುಂತಲಾ ದೇವಿಯವರು ಎಲ್ಲರ ಕಣ್ಣಿಗೂ ಬಹಳ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸುತ್ತಾರೆ. ಇಂದು ಅವರ ಬಗ್ಗೆ ಮಾತನಾಡೋದಕ್ಕೆ ಮುಖ್ಯವಾದ ಕಾರಣ ಏನು ಅಂದ್ರೆ ಆನ್ ಲೈನ್ ನಲ್ಲಿ ತೆರೆಕಂಡಿರುವ ಅವರ ಬಯೋಪಿಕ್ ಸಿನಿಮಾ.. ಶಕುಂತಲಾ ದೇವಿ. ಸ್ಕ್ರಾಲ್ ಡೌನ್ ಮಾಡಿ ಇವರ ಜೀವನ ಕಥೆಯ ವಿಡಿಯೋ ನೋಡಿ
ಈ ಸಿನಿಮಾದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಶಕುಂತಲಾ ದೇವಿ ಅವರಂತಹ ಅದ್ಭುತ ವ್ಯಕ್ತಿತ್ವವನ್ನ ಸಿನಿಮಾದಲ್ಲಿ ನೋಡೋದು ಕನ್ನಡಿಗರಿಗೆ ಹೆಮ್ಮೆ ಎಂದರೆ ತಪ್ಪಾಗುವುದಿಲ್ಲ..1929ರ ನವೆಂಬರ್ 4ರಂದು ಶಕುಂತಲಾ ದೇವಿ ಜನಿಸಿದರು. ಶಕುಂತಲಾ ದೇವಿಯವರ ತಂದೆ ಸಿ.ವಿ.ಎಸ್.ರಾಜಾರಾಮ್. ತಾಯಿ ಸುಂದರಮ್ಮ. ಅವರ ತಂದೆ ಸರ್ಕಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.. ಅದರಿಂದ ಶಕುಂತಲಾ ಅವರಿಗೆ ಕೆಲವು ಮ್ಯಾಜಿಕ್ ಕಲೆಗಳು ಸಹ ಚೆನ್ನಾಗಿ ಗೊತ್ತಿತ್ತು. ಜೊತೆಗೆ ಮಗಳಿಗೆ ಚಿಕ್ಕ ವಯಸ್ಸಿನಿಂದಲೇ ಕಾರ್ಡ್ಸ್​​ಗಳಿಂದ ಆಕೃತಿಗಳನ್ನು ಮಾಡುವ ಕಳೆಗಳ ನ್ಬಗ್ಗೆ ತರಬೇತಿ ನೀಡಿದ್ದರು ಅವರ ತಂದೆ. ಅದರ ಜೊತೆಗೆ ಗಣಿತದಲ್ಲೂ ಕೂಡ ಬಹಳ ಆಸಕ್ತಿ ಬೆಳೆಸಿಕೊಂಡಿದ್ದ ಶಕುಂತಲಾ ದೇವಿ ಅವರು ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಯಾದರು.. ಶಕುಂತಲಾ ಅವರು ಚಿಕ್ಕ ವಯಸ್ಸಿನಲ್ಲಿಯೇ ಗಣಿತದ ಕ್ಲಿ#ಷ್ಟ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವಷ್ಟು ಜಾಣ್ಮೆ ಹೊಂದಿದ್ದರು. ಹಾಗಾಗಿಯೇ ಶಕುಂತಲಾ ದೇವಿ ಅವರನ್ನು ಹ್ಯೂಮನ್ ಕಂಪ್ಯೂಟರ್ ಅಂತ ಕರೆಯಲು ಶುರು ಮಾಡಿದ್ದರು..ಈ ಕೆಳಗಿನ ವಿಡಿಯೋ ನೋಡಿ
ಇಷ್ಟರ ಮಟ್ಟಿಗೆ ಪ್ರತಿಭೆ ಹೊಂದಿದ್ದ ಶಕುಂತಲಾ ದೇವಿ ಜಾಗತಿಕ ಮಟ್ಟದಲ್ಲಿ ಫೇಮಸ್ ಆಗಿದ್ದು ಹೇಗ್ ? ವಿಶ್ವದ ಯಾವೆಲ್ಲ ದೇಶದಲ್ಲಿ ಇವರು ತಮ್ಮ ಕಲೆಯನ್ನ ಪ್ರದರ್ಶನ ಮಾಡಿದ್ದಾರೆ? ಇದರ ಬಗ್ಗೆ ನೋಡೋದಾದ್ರೆ ಮೊದಲ ಬಾರಿಗೆ 1978ರಲ್ಲಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಶಕುಂತಲಾ ದೇವಿಯವರ ಜಾಣ್ಮೆ ಮತ್ತು ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ. ಮನಃಶಾಸ್ತ್ರಜ್ಞ ಜೆನ್ಸನ್ ಎಂಬುವವರು 9,54,43,993ರ ಘನ ಮೂಲ ಯಾವುದು ಎಂಬ ಪ್ರಶ್ನೆಯನ್ನ ಶಕುಂತಲಾ ಅವರಿಗೆ ಕೇಳುತ್ತಾರೆ ? ಈ ಪ್ರಶ್ನೆಗೆ ಕೇವಲ ಎರಡೇ ಎರಡು ಸೆಕೆಂಡ್​ಗಳಲ್ಲಿ 457 ಎಂದು ಸರಿಯಾದ ಉಯ್ತರ ನೀಡುತ್ತಾರೆ ಶಕುಂತಲಾ ದೇವಿ. ಇದೆ ರೀತಿ ದೊಡ್ಡ ಸಂಖ್ಯೆಯ ಘನ ಮೂಲ ಕೇಳಿದಾಗಿಯೂ ಸಹ ಒಂದೆರಡು ಕ್ಷಣಗಳಲ್ಲಿ ಉತ್ತರ ನೀಡಿ ಇಡೀ ಸಭಾಂಗಣವೇ ಕಣ್ಣು ಬಾಯಿ ಬಿಟ್ಕೊಂಡು ನೋಡುವಂತೆ ಮಾಡಿದ್ದರು ಶಕುಂತಲಾ ರೆವಿ.
1982ರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದರು ಶಕುಂತಲಾ ದೇವಿ. ಲಂಡನ್ ನ ಇಂಪಿರಿಯಲ್ ಕಾಲೇಜಿನಲ್ಲಿ ಕೇಳಿದ್ದ ಒಂದು ಪ್ರಶ್ನೆ 13 ಡಿಜಿಟ್​ ಅಂಕೆಯ ಗುಣಾಕಾರದ ಪ್ರಶ್ನೆಗೆ, ಯಾವುದೇ ಕ್ಯಾಲ್ಕುಲೇಟರ್ ಬಳಸದೇ ಕೇವಲ 28 ಸೆಕೆಂಡ್​​ನಲ್ಲಿ ಉತ್ತರ ಕೊಟ್ಟಿರುತ್ತಾರೆ. ಆ ಉತ್ತರ ಬರೋಬ್ಬರಿ 26 ಡಿಜಿಟ್ ನಂಬರ್ ಆಗಿತ್ತು.ಶಕುಂತಲಾ ದೇವಿಯವರು ಗಣಿತದಲ್ಲಿ ಎಷ್ಟು ಪರಿಣಿತಿ ಹೊಂದಿದ್ದರೋ, ಕ್ಯಾಲೆಂಡರ್ ವಿಚಾರದಲ್ಲೂ ಕೂಡ ಅವರ ಉತ್ತರ ಅಷ್ಟೇ ಪರ್ಫೆಕ್ಟ್ ಆಗಿರುತ್ತಿತ್ತು. ಹಿಂದಿನ ಶತಮಾನವೊಂದರ ಡೇಟ್ ಅನ್ನು ಹೇಳಿ ಇದು ಯಾವ ದಿನ ಆಗಿತ್ತು ಎಂದು ಕೇಳಿದರೆ, ಕ್ಷಣಾರ್ಧದಲ್ಲಿ ಉತ್ತರ ಹೇಳುತ್ತಿದ್ದರು. ಉದಾಹರಣೆಗೆ ಜುಲೈ 31, 1920ರಂದು ಯಾವ ದಿನ ಕೇಳಿದ್ರೆ ಪಟ್ ಅಂತ ಶನಿವಾರ ಎಂದು ಹೇಳುತ್ತಿದ್ದರು.ಗಣಿತ ಶಾಸ್ತ್ರದಲ್ಲಷ್ಟೇ ಅಲ್ಲದೇ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಶಕುಂತಲಾ ದೇವಿ ಹೆಸರು ಮಾಡಿದ್ದರು. ಇವರ ಜ್ಯೋತಿಷ್ಯಶಾಸ್ತ್ರದ ಜನಪ್ರಿಯತೆ ಹೇಗಿತ್ತು ಅಂದ್ರೆ, ಒಂದು ದಿನಕ್ಲೆ 60ಕ್ಕಿಂತ ಹೆಚ್ಚು ಜನ ಇವರನ್ನ ಭೇಟಿ ಮಾಡಿ ತಮ್ಮ ಜಾತಕ, ಕುಂಡಲಿ ಬಗ್ಗೆ ವಿಚಾರಿಸುತ್ತಿದ್ದರಂತೆ. ಇದರಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶಕುಂತಲಾ ದೇವಿ ‘ಅಸ್ಟ್ರಾಲಜಿ ಫಾರ್ ಯು’ ಅಂತ ಪುಸ್ತಕ ಒಂದನ್ನು ರಚಿಸಿದ್ದಾರೆ.
ಗಣಿತದಲ್ಲಿ ಪಾರಂಗತೆ ಪಡೆದಿದ್ದ ಶಕುಂತಲಾ ಅವರು ಯಾರ ಬಳಿಯೂ ಗಣಿತ ಶಾಸ್ತ್ರವನ್ನು ಕಲಿತಿಲ್ಲ. ಬದಲಿಗೆ ತಾವೇ ಸ್ವಂತವಾಗಿ ಕಲಿತು, ಅದರ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. Puzzles to Puzzle You, super memory it can be yours, Mathability Awaken the Math Genius in Your Child.. ಇವುಗಳ ಜೊತೆಗೆ ಪರ್ಫೆಕ್ಟ್ ಮರ್ಡರ್ ಎನ್ನುವ ಥ್ರಿಲ್ಲರ್ ಕಾದಂಬರಿಯೊಂದನ್ನು ಬರೆದಿದ್ದಾರೆ.ಇವರ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯ ಏನು ಅಂದ್ರೆ.. ರಾಜಕಾರಣದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಶಕುಂತಲಾ ದೇವಿ ಅವರು 1980ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಮೆದಕ್​​ನಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಶಕುಂತಲಾ ಅವರು ಇಂದಿರಾ ಗಾಂಧಿಯ ಅವರನ್ನು ನೇರವಾಗಿ ಟೀಕಿಸುತ್ತಾರೆ. ಆದ್ರೆ ಗಣಿತದಲ್ಲಿ ಇವರಿಗಿದ್ದ ಪ್ರಸಿದ್ಧತೆ ಚುನಾವಣೆಯಲ್ಲಿ ಸಿಗುವುದಿಲ್ಲ. ಶಕುಂತಲಾ ದೇವಿಯವರಿಗೆ ಕುರುಕಲು ತಿಂಡಿಯಂದ್ರೆ ಸಖತ್ ಇಷ್ಟ ಅಂತೆ. ಡಯಾಬಿಟಿಸ್ ಇದ್ದರೂ ಸಹ ಮಗಳಿಗೆ ಗೊತ್ತಾಗದ ಹಾಗೆ ಕದ್ದು ಮುಚ್ಚಿ ತಿಂಡಿ ತಿನ್ನುತ್ತಿದ್ದರಂತೆ. ಮಗಳು ಅನುಪಮಾ ಬ್ಯಾನರ್ಜಿ ಎಷ್ಟೇ ತಡೆದರು ಹೇಗೋ ಮಾಡಿ ಕೋಡುಬಳೆ, ಚಕ್ಕುಲಿ ತಿನ್ನುತ್ತಿದ್ದರಂತೆ. ಹೀಗೆ ಅವರ ಬಗ್ಗೆ ಹೇಳಿದಷ್ಟು ಸಂತೋಷವಾಗುತ್ತದೆ. ಇವರ ಬಯೋಪಿಕ್ ನಲ್ಲಿ ನಟಿ ವಿದ್ಯಾಬಾಲನ್ ಅವರ ಅಭಿನಯ, ಅನು ಮೆನನ್ ಅವರ ನಿರ್ದೇಶನದ ಚಿತ್ರದಲ್ಲಿ ನಮ್ಮ ಕರ್ನಾಟಕದ ಹೆಮ್ಮೆ, ಕನ್ನಡತಿ, ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿಯವರ ಸಾಧನೆಗಳನ್ನ ನೋಡುವುದು ನಮ್ಮೆಲ್ಲರಿಗೂ ಹೆಮ್ಮೆ.

Trending

To Top