Film News

ಲಂಕೇಶ್ ನಿರ್ದೇಶನದ ಶಕೀಲಾ ಚಿತ್ರದ ಟ್ರೇಲರ್ ಬಿಡುಗಡೆ!

ಬೆಂಗಳೂರು: ಮಾದಕ ನಟಿಯಂದೇ ಕರೆಯುವ ಶಕೀಲಾ ಜೀವನಾಧರಿತ ಕಥೆಯನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಚಿತ್ರೀಕರಿಸಿದ್ದು, ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಮೂಲಕವೇ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ರವರ ಜೀವನದಲ್ಲಿನ ಘಟನೆಗಳನ್ನು ಚಿತ್ರದ ಮೂಲಕ ಹೊರತರಲು ಲಂಕೇಶ್ ಪ್ರಯತ್ನಿಸಿದ್ದು, ಸಿನೆಮಾ ಹಿಟ್ ಹೊಡೆಯುವ ಸುದ್ದಿಯನ್ನು ಟ್ರೇಲರ್ ಮೂಲಕ ಸಾಬಿತುಪಡಿಸಿದೆ ಎನ್ನಲಾಗುತ್ತಿದೆ. ಈ ಚಿತ್ರ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಬಿಡುಗಡೆಯ ದಿನಾಂಕವನ್ನು ಡಿ.25ರಂದು ನಿಗಧಿಪಡಿಸಲಾಗಿದೆ.

90ರ ದಶಕದಲ್ಲಿ ಹಾಟ್ ನಟಿ ಎಂದು ಖ್ಯಾತಿ ಪಡೆದಿರುವ ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸಲಿದ್ದು, ರಾಜೀವ ಪಿಲ್ಲೈ, ಪಂಕಜ್ ತ್ರಿಪಾಠಿ ಸಹ ಈ ಚಿತ್ರದಲ್ಲಿ ಪಾತ್ರಗಳನ್ನು ಪೋಷಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಶಕೀಲಾ ರವರು ತಮ್ಮ ಜೀವನದಲ್ಲಿ ಸಾಕಷ್ಟು ಏರುಪೇರಾಗಿತ್ತು. ಸಿನೆಮಾ ಹೊರತಾಗಿ ಅವರ ಜೀವನ ಹಾಗೂ ಕುಟುಂಬದ ಬಗ್ಗೆ ಸಿನೆಮಾ ಚಿತ್ರೀಕರಣ ನಡೆದಿದೆ. 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಕೀಲಾ ರವರ ಜೀವನಾಧಾರಿತ ಚಿತ್ರವನ್ನು ತೆರೆ ಮೇಲೆ ಕಾಣಲು ಸಿನಿಪ್ರಿಯರು ಕಾತುರದಿಂದ ಕಾದಿದ್ದಾರೆ ಎನ್ನಲಾಗುತ್ತಿದೆ.

Trending

To Top