ಶ್ ಚಿತ್ರ ಯಾರ್ ನೋಡಿಲ್ಲ ಸಾರ್ ಎಲ್ರೂ ನೋಡಿದಿವಿ ಬಿಡಿ ಆದ್ರೆ ಸಿನೆಮಾ ಅಂದ ಮೇಲೆ ಎಲ್ಲ ರೀತಿಯ ದೃಶ್ಯಗಳು ಇರುವುದು ಸಹಜ ಅಲ್ಲವೇ ಆದರೆ ಶ್ ಸಿನೆಮಾ ಮಾತ್ರ ನಮ್ಮೆಲ್ಲರ ಮನ ಗೆಡ್ಡಿದಂತಹ ಸಿನೆಮಾ ಅದು ಏನ್ ಹಾಡ್ ಬರೆದಿದ್ದಾರೆ ಸಾರ್ ಏನ್ ಮ್ಯೂಸಿಕ್ ಸಂಯೋಜನೆ ಮಾಡಿದ್ದಾರೆ ಯಪ್ಪಾ ಬೇಸ್ ಅನ್ನಬೇಕು. ಆ ಸಿನೆಮಾ ನೋಡುತಿದ್ದರೆ ಎಲ್ಲರ ಮನ ನವಿರೇಳಿಸುತ್ತದೆ ಅಂತ ಕಾಲದಲ್ಲೇ ದೆವ್ವ ಭೂತದ ಕಾನ್ಸೆಪ್ಟ್ ಇಟ್ಕೊಂಡು ಹಾರರ್ ಸಿನಿಮಾ ಮಾಡಿದ ನಟ ಉಪೇಂದ್ರ ಅವರಿಗೆ ಸಲಾಮ್ ಹೇಳಬೇಕು ಸಾರ್ ಅಂತ ಭಯ ಹುಟ್ಟಿಸುವಂತಹ ಬೆವರು ಬರುವಂತಹ ಸಿನೆಮಾ ಕೊಟ್ಟ ಹೆಗ್ಗಳಿಕೆ ನಟ ಉಪೇಂದ್ರ ಅವರಿಗೆ ಸೇರುತ್ತದೆ.
ಡೈರೆಕ್ಟರ್ ಗೆ ಎಲ್ಲ ನಮನ ಸಲ್ಲಿಸಿದರೆ ಹೇಗೆ ಸ್ವಲ್ಪ ತಾಳಿ ಅದರಲ್ಲಿರುವ ಆಕ್ಟರ್ಸ್ ಗಳ ಬಗ್ಗೆ ನು ಸಹ ಮಾತನಾಡಬೇಕು ಅಲ್ಲವೇ ಹೌದು ಅದರಲ್ಲಿ ನಟಿಸಿದ್ದ ಕುಮಾರ್ ಗೋವಿಂದ್ ನಮಗೆಲ್ಲರಿಗೂ ಈಗಲೂ ಪರಿಚಯ ಇದ್ದಾರೆ ಆದರೆ “ಅವನಲ್ಲೇ ಅವಳಲ್ಲೆ ಮಾತಿಲ್ಲ ಕಥೆ ಇಲ್ಲ” ಎನ್ನುವ ಹಾಡಿಗೆ ತಾಳ ಹಾಕಿದ ಹುಡುಗಿ ಯಾರೂ ಗೊತ್ತಾ ಅವರೇ ನಮ್ಮೆಲ್ಲರ ಮೇಘನಾ ಅಲಿಯಾಸ್ ಬೆಟ್ಟಿಂಗ್ ಭಾರತಿ ಅವರು. ಅವರು ಶ್ ಮತ್ತು ಮಂಡ್ಯದ ಗಂಡು ಈ ಸಿನೆಮಾ ಗಳಲ್ಲಿ ಮಾತ್ರ ಕಾಣಿಸಿಕೊಂಡರು ಆದರೆ ಅದಾದ ನಂತರ ಅವರು ಸಿನೆಮಾ ರಂಗಕ್ಕೆ ಬರಲೇ ಇಲ್ಲ ಮತ್ತು ಎಲ್ಲೂ ಕೂಡ ಕಾಣಿಸಿಕೊಳ್ಳಲು ಇಲ್ಲ.
ಆದರೆ ಅವರು ಏನ್ ಆದ್ರೂ ಅಂತ ಯೋಚ್ನೆ ಮಾಡ್ತಾ ಇದೀರಾ ಎಲ್ಲೂ ಹೋಗಿಲ್ಲ ಸಾರ್ ಅವ್ರು ಇಲ್ಲೇ ಇದ್ದಾರೆ ನಮ್ಮ ನಿಮ್ಮೆಲ್ಲರ ಮಧ್ಯದಲ್ಲೇ ಇದ್ದಾರೆ ಫ್ಯಾಮಿಲಿ ಜೊತೆ ಸೆಟಲ್ ಆಗಿರುವ ಅವರು ಕಾಸಗಿ ಶಾಲೆ ಒಂದರಲ್ಲಿ ಪ್ರಿನ್ಸಿಪಲ್ ಆಗಿ ಕೆಲಸ ಮಾಡುತ್ತಿದ್ದಾರೆ.
