ಸೋಷಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸಿದ ಸೀನಿಯರ್ ನಟಿ ರಮ್ಯಕೃಷ್ಣ….!

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ನಿರ್ದೇಶಕ ಕೃಷ್ಣವಂಶಿಯವರನ್ನು ಮದುವೆಯಾದ ಬಳಿಕ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಈಕೆ ಇತ್ತೀಚಿಗೆ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದು, ಇಂಟರ್‍ ನೆಟ್ ನಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ.

ನಟಿ ರಮ್ಯಕೃಷ್ಣ ರವರಿಗೆ ಸಿನೆಮಾಗಳ ಮೇಲೆ ತುಂಬಾನೆ ಆಸಕ್ತಿಯಿದೆ. ಈ ಕಾರಣಕ್ಕಾಗಿ ಆಕೆ ಚಿಕ್ಕವಯಸ್ಸಿನಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನೇರಂ ಪುಲಾರುಂಬಲ್ ಎಂಬ ಮಲಯಾಳಂ ಸಿನೆಮಾದಲ್ಲಿ ಆಕೆ 13ನೇ ವಯಸ್ಸಿನಲ್ಲಿರುವಾಗಲೇ ಎಂಟ್ರಿ ಕೊಟ್ಟರು.  ಬಳಿಕ ವೆಲೈ ಮನಸ್ಸು ಎಂಬ ತಮಿಳು ಸಿನೆಮಾದಲ್ಲಿ ನಟಿಯಾಗಿ ಕಾಣಿಸಿಕೊಂಡರು. ಮೊದಲನೇ ಸಿನೆಮಾದ ಮೂಲಕವೇ ಎಲ್ಲರ ಮನಗೆದ್ದ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಬಳಿಕ ತಮಿಳು, ತೆಲುಗು, ಹಿಂದಿ, ಕನ್ನಡ ಹೀಗೆ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಸೋಲು ಗೆಲುವು ಎಂದು ನೋಡದೇ ಸಿನಿರಂಗದಲ್ಲಿ ಮುನ್ನುಗ್ಗಿದ್ದರು. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಇನ್ನೂ ಸೆಕೆಂಡ್ ಇನ್ನೀಂಗ್ಸ್ ನಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ.

ಇನ್ನೂ ನಟಿ ರಮ್ಯಾಕೃಷ್ಣ ಬಾಹುಬಲಿ ಸಿನೆಮಾದಲ್ಲಿ ನಟ ಪ್ರಭಾಸ್ ತಾಯಿಯಾಗಿ ಶಿವಗಾಮಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾ ಆಕೆಗೆ ದೊಡ್ಡ ಸಕ್ಸಸ್ ನೀಡಿದೆ ಎನ್ನಬಹುದಾಗಿದೆ. ಶಿವಗಾಮಿ ಪಾತ್ರದಲ್ಲಿ ಆಕೆ ಪರಕಾಯ ಪ್ರವೇಶ ಮಾಡಿದಂತೆ ಪಾತ್ರವನ್ನು ಪೋಷಣೆ ಮಾಡಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ನಟಿ ರಮ್ಯಕೃಷ್ಣ ನಟಿಸಿ ಎಲ್ಲರ ಮನಸ್ಸು ಗೆದ್ದರು. ಈ ಸಿನೆಮಾದ ಮೂಲಕವೇ ಆಕೆಗೆ ಮತ್ತೆ ಮತಷ್ಟು ಅವಕಾಶಗಳನ್ನು ತಂದುಕೊಟ್ಟಿದೆ ಎನ್ನಬಹುದಾಗಿದೆ. ಇನ್ನೂ ಆಕಾಶ್ ಪೂರಿ ನಟಿಸಿರುವ ರೊಮ್ಯಾಂಟಿಕ್ ಎಂಬ ಸಿನೆಮಾದಲ್ಲಿ ಖಡಕ್ ಪೊಲೀಸ್ ಆಫಿಸರ್‍ ಆಗಿ ಕಾಣಿಸಿಕೊಂಡರು. ಇನ್ನೂ ಟಾಲಿವುಡ್ ನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ವಿಜಯ್ ದೇವರೊಂಡ ಕಾಂಬಿನೇಷನ್ ನಲ್ಲಿ ಮೂಡಿಬಂದ ಲೈಗರ್‍ ಸಿನೆಮಾದಲ್ಲಿ ರಮ್ಯಕೃಷ್ಣ ವಿಜಯ್ ದೇವರಕೊಂಡ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತನ್ನ ಪತಿ ಕೃಷ್ಣವಂಶಿ ನಿರ್ದೇಶನದ ರಂಗಮಾರ್ತಾಂಡ ಸಿನೆಮಾದಲ್ಲೂ ಸಹ ರಮ್ಯಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ರಮ್ಯಕೃಷ್ಣ ಸಹ ಸೋಷಿಯಲ್ ಮಿಡಿಯಾವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಈಕೆ ಅನೇಕ ಪೋಸ್ಟ್ ಗಳನ್ನು, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾ, ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಇನ್ನೂ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್ ಹಾಗೂ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಎಲ್ಲರನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲಿ ಇತ್ತೀಚಿಗೆ ಈಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆರೆಂಜ್ ಕಲರ್‍ ಸೀರೆಯಲ್ಲಿ ಆಕೆ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಮ್ಯಕೃಷ್ಣರವರ ಈ ಗ್ಲಾಮರಸ್ ಪೊಟೋಗಳಿಗೆ ಎಲ್ಲ ಕಡೆಯಿಂದ ಮೆಚ್ಚುಗೆಯ ಕಾಮೆಂಟ್ ಗಳು ಹರಿದುಬರುತ್ತಿದೆ.

Previous articleಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತು ಸಿದ್ದಾರ್ತ್ ಅದಿತಿ ಪೊಟೋಸ್ …!
Next articleಮೊದಲ ಬಾರಿಗೆ ಮಗನ ಜೊತೆ ರೀಲ್ಸ್ ಮಾಡಿದ ನಟಿ ಸಂಜನಾ ಗಲ್ರಾನಿ..!