ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಮಾಸ್ ಡ್ಯಾನ್ಸ್ ಮಾಡಿದ್ದೆ, 17 ವರ್ಷಗಳ ಬಳಿಕ ಶಾಕಿಂಗ್ ವಿಚಾರ ಬಿಚ್ಚಿಟ್ಟ ಶಿವಗಾಮಿ..!

ದಕ್ಷಿಣ ಭಾರತದ ಸಿನೆಮಾಗಳಲ್ಲಿ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ಮದುವೆಯಾದ ಬಳಿಕ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ್ದು, ನಟರ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು 17 ವರ್ಷಗಳ ಬಳಿಕ ಆಕೆ ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದ್ದು, ಇದೀಗ ಆ ಸುದ್ದಿ ವೈರಲ್ ಆಗುತ್ತಿದೆ.

ಸುಮಾರು ವರ್ಷಗಳ ಕಾಲ ಸಿನಿರಂಗದಲ್ಲಿ ಬಹುಬೇಡಿಕೆಯನ್ನು ಹೊಂದಿದ್ದ ನಟಿ ರಮ್ಯಕೃಷ್ಣ ನಟನೆ ಹಾಗೂ ಸೌಂದರ್ಯದ ಮೂಲಕ ಎಲ್ಲರನ್ನೂ ರಂಜಿಸಿದ್ದರು. ನಟಿಯಾಗಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಅನೇಕ ಸ್ಟಾರ್‍ ಗಳ ಜೊತೆಗೆ ಹೆಜ್ಜೆ ಹಾಕಿದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ನಟರ ತಾಯಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಆಕೆಗೆ ಬಿಗ್ ಬ್ರೇಕ್ ನೀಡಿದ್ದು ಬಾಹುಬಲಿ ಸಿನೆಮಾ ಎನ್ನಬಹುದಾಗಿದೆ. ಬಾಹುಬಲಿ ಸಿನೆಮಾದಲ್ಲಿ ಶಿವಗಾಮಿ ಪಾತ್ರ ಸಿನೆಮಾದಲ್ಲಿ ಹೈಲೆಟ್ ಎಂದು ಹೇಳಲಾಗಿದೆ. ಇನ್ನೂ ಆಕೆ ಲೈಗರ್‍ ಸಿನೆಮಾದಲ್ಲೂ ಸಹ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನೆಮಾ ಡಿಸಾಸ್ಟರ್‍ ಆಗಿ ಉಳಿಯಿತು. ಇದೀಗ ಆಕೆ 17 ವರ್ಷದ ಹಿಂದಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ರಮ್ಯಕೃಷ್ಣ ಸದ್ಯ ಐಕಾನ್ ಡ್ಯಾನ್ಸ್ ಶೋ ಗೆ ಜಡ್ಜ್ ಆಗಿದ್ದಾರೆ. ಈ ಶೋನಲ್ಲೇ ಸಿಕ್ರೇಟ್ ಒಂದನ್ನು ಹೊರಹಾಕಿದ್ದಾರೆ. ಈ ಶೋ ನಲ್ಲಿ ರಮ್ಯಕೃಷ್ಣ ನೃತ್ಯ ಮಾಡಿದಂತಹ ಸಯ್ಯಾ ಸಯ್ಯಾರೆ ಎಂಬ ಹಾಡಿಗೆ ನೃತ್ಯ ಮಾಡಿದ್ದರು. ಜೂನಿಯರ್‍ ಎನ್.ಟಿ.ಆರ್‍ ಅಭಿನಯದ ನಾ ಅಲ್ಲುಡು ಎಂಬ ಸಿನೆಮಾದಲ್ಲಿನ ಹಾಡಿಗೆ ಶೋ ನಲ್ಲಿ ನೃತ್ಯ ಮಾಡಿದ್ದರು. ಈ ಹಾಡಿಗೆ ಸಂಬಂಧಿಸಿದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನೃತ್ಯ ಮಾಡಿದ ಸ್ಪರ್ಧಾಳುಗಳನ್ನು ಅಭಿನಂದಿಸುತ್ತಾ, ನಾನು ಈ ಹಾಡಿಗೆ ನೃತ್ಯ ಮಾಡಿದಾಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ. ಈ ಕಾರಣದಿಂದ ಈ ಹಾಡನ್ನು ನಾನು ಎಂದಿಗೂ ಮರೆಯುವುದೇ ಇಲ್ಲ. ಈ ಹಾಡಿನಲ್ಲಿ ಎನ್.ಟಿ.ಆರ್‍ ರವರ ಎನರ್ಜಿಯ ಜೊತೆ ಮಾಸ್ ಹಾಡಿಗೆ ನಾನು ನೃತ್ಯ ಮಾಡಿದ್ದು, ಬೇರೆ ಲೆವೆಲ್ ನಲ್ಲಿತ್ತು ಎಂದಿದ್ದಾರೆ.

ನಾ ಅಲ್ಲುಡು ಸಿನೆಮಾದಲ್ಲಿ ಹೈಲೈಟ್ ಆದ ಮಾಸ್ ಸಾಂಗ್ ಸೈಯ್ಯಾ ಸೈಯ್ಯಾರಾ ಹಾಡು ತುಂಬಾನೆ ಪಾಪ್ಯುಲರ್‍ ಆಗಿತ್ತು. ಈ ಸಿನೆಮಾ ಕಳೆದ 2005 ರಲ್ಲಿ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ಎನ್.ಟಿ.ಆರ್‍ ಜೊತೆಗೆ ಜೆನಿಲಿಯಾ ಹಾಗೂ ಶ್ರೆಯಾ ಶರಣ್ ಜೊತೆಗೆ ರಮ್ಯಕೃಷ್ಣ ಸಹ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ಹಾಡಿನಲ್ಲಿ ರಮ್ಯಕೃಷ್ಣ ಹಾಕಿದ್ದ ಸ್ಟೆಪ್ಸ್ ಗಳನ್ನು ನೋಡಿದರೇ ಯಾರೂ ಸಹ ಆಕೆ ಗರ್ಭಿಣಿಯೆಂದು ಊಹಿಸಿರಲಿಲ್ಲ. 17 ವರ್ಷಗಳ ಬಳಿಕ ಆಕೆ ಗರ್ಭಿಣಿಯಾಗಿ ನೃತ್ಯ ಮಾಡಿದ ವಿಚಾರ ಹೊರಹಾಕಿದ್ದಾರೆ.

Previous articleಟ್ರಾನ್ಸಪರೆಂಟ್ ಬ್ಲಾಕ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ಹಾಟ್ ಬ್ಯೂಟಿ ಶ್ರೇಯಾ…!
Next articleಶಾಕಿಂಗ್ ಸುದ್ದಿ ಹೊರಹಾಕಿದ ನೆನಪಿರಲಿ ಪ್ರೇಮ್, ಆ ಸಮಯದಲ್ಲಿ ಹೆಂಡತಿಯನ್ನು ತಾಳಿಯನ್ನು ಮಾರಿದ್ರಂತೆ…!