Film News

ನಾನು ಸುಂದರವತಿ, ರಜನಿಕಾಂತ್, ಕಮಲ್ ಹಾಸನ್ ಜೊತೆ ಮಾತ್ರ ನಟಿಸುತ್ತೇನೆ ಎಂದ ಸೀನಿಯರ್ ನಟಿ ಪ್ರಗತಿ…!

ಕಳೆದ 90 ರ ದಶಕದಿಂದ ಸಿನಿರಂಗದಲ್ಲಿ ಕಲಾವಿದೆಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಪ್ರಗತಿ ಇತರೆ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಅತ್ತೆ, ತಾಯಿ ಮೊದಲಾದ ಪಾತ್ರಗಳಲ್ಲಿ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಜೊತೆಗೆ ಆಗಾಗ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಟಾಪಿಕ್ ಆಗುತ್ತಿರುತ್ತಾರೆ.

ನಟಿ ಪ್ರಗತಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆ ಅನೇಕ ಸಂಚಲನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.  ಆಕೆಯ ಈ ಬೋಲ್ಡ್ ಕಾಮೆಂಟ್ ಗಳು ಇಂಟರ್‍ ನೆಟ್ ನಲ್ಲಿ ಹಾಟ್ ಟಾಫಿಕ್ ಆಗಿದೆ. ಈ ಸಂದರ್ಶನದಲ್ಲಿ ಪ್ರಗತಿ ಕಾಮಿಡಿಯಾಗಿಯೂ ಸಹ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಕೆ ಜಿಮ್ ವರ್ಕೌಟ್, ಟ್ಯಾಟು, ಗ್ಲಾಮರ್‍ ಶೋ, ಸೇರಿದಂತೆ ಆಕೆ ಸಿನೆಮಾಗಳಲ್ಲಿ ಪೋಷಣೆ ಮಾಡುವಂತಹ ಕ್ಯಾರೆಕ್ಟರ್‍ ಗಳ ಬಗ್ಗೆ ಸಹ ಮಾತನಾಡಿದ್ದಾರೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆಕೆ ಫೈರ್‍ ಬ್ರಾಂಡ್ ಎಂತಲೂ ಸಹ ಕರೆಯುತ್ತಾರೆ. ಇದೀಗ ಆಕೆಯ ಈ ಹೊಸ ಸಂದರ್ಶನದ ಪ್ರೊಮೊ ಬಿಡುಗಡೆಯಾಗಿದ್ದು, ಆಕೆ ಈ ಪ್ರೋಮೊದಲ್ಲೇ ಅನೇಕ ವಿಚಾರಗಳನ್ನು ಮಾತನಾಡಿದ್ದು, ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

ಸಿನಿರಂಗದಲ್ಲಿ ಬೋಲ್ಡ್ ಆಗಿಯೇ ಮಾತನಾಡುವಂತಹ ಪ್ರಗತಿಗೆ ಸಂದರ್ಶನದಲ್ಲಿ ಆಂಕರ್‍ ಅನೇಕ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವುಗಳಿಗೆ ಆಕೆ ನೀಡಿದ ಉತ್ತರ ಎಲ್ಲಾ ಕಡೆ ವೈರಲ್ ಆಗುತ್ತಿದೆ. ತಾನು ಬಿಎ ಪೊಲಿಟಿಕಲ್ ಸೈನ್ಸ್ ಓದುವಂತಹ ಸಮಯದಲ್ಲೇ ಸಿನೆಮಾದ ಆಫರ್‍ ಬಂದಿತ್ತಂತೆ ಎಂದಿದ್ದಾರೆ. ಅದಕ್ಕೆ ಆಂಕರ್‍ ಸಿನೆಮಾಗಳಲ್ಲಿ ಅವಕಾಶ ಬರದಿದ್ದರೇ ಪೊಲಿಟಿಷಿಯನ್ ಆಗುತ್ತಿದ್ದೀರಿ ಅಲ್ವೇ ಎಂದು ಹೇಳಿದ್ದಾರೆ ಅದಕ್ಕೆ ನಗುತ್ತಾ ಇಲ್ಲ ಎಂದಿದ್ದಾರೆ. ಬಳಿಕ ನಟಿಯಾಗಿ ತುಂಬಾ ಕಡಿಮೆ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದೀರಿ ಏಕೆ ಎಂದಾಗ ಆಕೆ ನಾನು ರಜನಿಕಾಂತ್, ಕಮಲ್ ಹಾಸನ್ ರವರ ಜೊತೆಯಾದರೆ ನಟಿಸುತ್ತಿನೀ. ಆತನೊಂದಿಗೆ ಮಾಡುವುದಿಲ್ಲ ಎಂದಿದ್ದಾರೆ. ಇನ್ನೂ ಪ್ರಗತಿ ತನ್ನ ಕೆರಿಯರ್‍ ನಲ್ಲಿ ನಡೆದಂತಹ ಏನೋ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇಅಲ್ಲದೇ ಸಿನಿರಂಗದಲ್ಲಿ ಹೊಸಬರು ಬಂದಾಗ ಕೆಲ ಹಳಬರು ಸೈಡ್ ಆಗಬೇಕು ಎಂದಿದ್ದಾರೆ.

ಇನ್ನೂ ಸೌಂದರ್ಯದ ಮೂಲಕ ಅವಕಾಶಗಳು ಬಂದರೇ, ನನಗೆ ಅವಕಾಶ ಬರಲೇ ಬೇಕು. ಏಕೆಂದರೇ ನಾನು ಸೌಂದರ್ಯವತಿ. ನನಗೂ ಸಹ ಅವಕಾಶಗಳು ಬರುತ್ತಿವೆ ಎಂದಿದ್ದಾರೆ. ಜೊತೆಗೆ ಆಂಕರ್‍ ನಿಮ್ಮನ್ನು ಯಾರಾದರೂ ಆಂಟಿ ಎಂದು ಕರೆದರೇ ಕೋಪ ಬರುತ್ತದೆಯೇ ಎಂದರೇ ಹೌದು ನನಗೆ ಕೋಪ ಬರುತ್ತದೆ ಎಂದು ರಿಪ್ಲೆ ಕೊಟ್ಟಿದ್ದಾರೆ. ನಾನು ಸೌಂದರ್ಯಕ್ಕಾಗಿ ಜಿಮ್ ನಲ್ಲಿ ವರ್ಕೌಟ್ ಮಾಡೊಲ್ಲಾ, ನನ್ನ ಶಕ್ತಿಗಾಗಿ ಎಂದು ಪ್ರಗತಿ ಉತ್ತರಿಸಿದ್ದಾರೆ. ಸದ್ಯ ಈ ಸಂದರ್ಶನದ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪೂರ್ಣ ಸಂದರ್ಶನದ ಬಳಿಕ ಮತಷ್ಟು ವಿಚಾರಗಳು ನಟಿ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

Trending

To Top