ಈಗೇನಿದ್ದರೂ ಸೋಷಿಯಲ್ ಮಿಡಿಯಾ ಜಮಾನ ಸಿನೆಮಾಗಳಲ್ಲಿ ಸಾಧಿಸದೇ ಇರುವಂತಹ ನೇಮ್ ಫೇಮ್ ಅನ್ನು ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಪಡೆದುಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕ ಇತ್ತೀಚಿಗೆ ಫೇಮ್ ಹೆಚ್ಚಿಸಿಕೊಳ್ಳುತ್ತಿರುವವರಲ್ಲಿ ಟಾಲಿವುಡ್ ಸಿನಿರಂಗದ ಸೀನಿಯರ್ ನಟಿ ಪ್ರಗತಿ ಸಹ ಒಬ್ಬರು ಎನ್ನಬಹುದಾಗಿದೆ. ಈಕೆ ಅನೇಕ ಸ್ಟಾರ್ ನಟರ ಸಿನೆಮಾಗಳಲ್ಲಿ ತಾಯಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ ಅನೇಕ ಪಾತ್ರಗಳಲ್ಲಿ ಅನೇಕರನ್ನು ರಂಜಿಸಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಇತ್ತಿಚಿಗೆ ಪುಲ್ ಆಕ್ಟೀವ್ ಆಗಿದ್ದಾರೆ.
ಟಾಲಿವುಡ್ ನಲ್ಲಿ ಅನೇಕ ಯಂಗ್ ನಟ/ನಟಿಯರಿಗೆ ತಾಯಿಯಾಗಿ ಕಾಣಿಸಿಕೊಂಡ ಪ್ರಗತಿ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಸಿನೆಮಾಗಳಲ್ಲಿ ತುಂಬಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಈಕೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಗ್ಲಾಮರ್ ಪ್ರದರ್ಶನ ಮಾಡುತ್ತಿರುತ್ತಾರೆ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಪೊಟೋಗಳು, ವಿಡಿಯೋಗಳನ್ನು ಶೇರ್ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈಟ್ ಕಲರ್ ಮಿನಿ ಡ್ರೆಸ್ ನಲ್ಲಿ ಆಕೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಆಕೆಯ ಎನರ್ಜಿಯನ್ನು ಕಂಡ ಅನೇಕರು ಯಂಗ್ ನಟಿಯರನ್ನು ಮೀರಿದ ನೃತ್ಯ ಎಂದು ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.
ನಟಿ ಪ್ರಗತಿ ಸೋಷಿಯಲ್ ಮಿಡಿಯಾದಲ್ಲಿ ಎಲ್ಲರನ್ನೂ ನಿಬ್ಬೆರುಗು ಗೊಳಿಸುವಂತಹ ಹಾಟ್ ಡ್ಯಾನ್ಸ್ ಮಾಡಿದ್ದಾರೆ. ಕಳೆದ 2020 ರಲ್ಲಿ ಕೋವಿಡ್ ನಿಮಿತ್ತ ಹೇರಲಾಗಿದ್ದ ಲಾಕ್ ಡೌನ್ ಸಮಯದಲ್ಲಿ ಪ್ರಗತಿ ಡ್ಯಾನ್ಸ್ ವಿಡಿಯೋಗಳು ಶುರುವಾದವು. ಅಲ್ಲಿಂದ ಶುರು ವಾದ ಈಕೆಯ ಡ್ಯಾನ್ಸಿಂಗ್ ವಿಡಿಯೋಗಳು ಇಂದಿಗೂ ಸಹ ಶೇರ್ ಮಾಡುತ್ತಲೇ ಇದ್ದಾರೆ. ಇನ್ನೂ ಆಕೆ ಕಾಲಿವುಡ್ ಸ್ಟಾರ್ ನಟ ವಿಜಯ್ ಸಿನೆಮಾದ ಹಾಡೊಂದಕ್ಕೆ ಲುಂಗಿ ಧರಿಸಿ ಡ್ಯಾನ್ಸ್ ಮಾಡಿದ್ದರು. ನಲವತ್ತು ವಯಸ್ಸು ದಾಟಿದರೂ ಸಹ ಆಕೆಯ ಎನರ್ಜಿಗೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಆಕೆ ಮತ್ತೊಂದು ವಿಡಿಯೋ ಮೂಲಕ ಸದ್ದು ಮಾಡಿದ್ದಾರೆ. ಚೆಯ್ಯ ಚೆಯ್ಯ ಎಂಬ ಹಿಂದಿ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ಆಕೆಯ ನೃತ್ಯ ನೋಡಿದರೇ ಯಂಗ್ ನಟಿಯರಿಗಿಂತಲೂ ಏನು ಕಡಿಮೆಯಿಲ್ಲ ಎನ್ನಲಾಗುತ್ತಿದೆ.
ಆಕೆ ಸ್ನೇಹಾ ಮುರಳಿ ಎಂಬ ಯುವತಿಯೊಂದಿಗೆ ಶಾರ್ಟ್ ವೈಟ್ ಕಲರ್ ಡ್ರೆಸ್ ನಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಆಕೆಯ ಈ ನೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನೂ ಪ್ರಗತಿ ಈ ವಿಡಿಯೋವನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷವಾಗಿದ್ದೇ ತಡ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಜೊತೆಗೆ ಹಾಟ್ ಕಾಮೆಂಟ್ ಗಳೂ ಸಹ ಹರಿದಾಡುತ್ತಿವೆ.
