ಸ್ಯಾಡ್ ನ್ಯೂಸ್, ಸಿನಿರಂಗದ ಖ್ಯಾತ ನಟಿಯ ಪತಿ ಹಠಾತ್ ಮರಣ, ಸಿನಿರಂಗದಲ್ಲಿ ವಿಷಾದ…!

ದಕ್ಷಿಣ ಭಾರತದ ಸಿನಿರಂಗದಲ್ಲಿ ವಿಷಾದ ಏರ್ಪಟಿದ್ದೆ. ಅದಕ್ಕೆ ಕಾರಣ ಖ್ಯಾತ ನಟಿಯೊಬ್ಬರ ಪತಿ ಹಠಾತ್ ಮರಣ ಹೊಂದಿದ್ದಾರೆ. ತೆಲುಗು ಸಿನಿಯರ್‍ ನಟಿ ಮೀನಾ ಪತಿ ವಿದ್ಯಾಸಾಗರ್‍ ದುರದೃಷ್ಟವಶಾತ್ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಪೋಸ್ಟ್ ಕೋವಿಡ್ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈತ ನಿನ್ನೆ (June 28) ರಾತ್ರಿ ಚೆನೈನಲ್ಲಿನ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಕೊನೆಯ ಉಸಿರನ್ನು ಎಳೆದಿದ್ದಾರೆ. ಈ ವಿಚಾರಕ್ಕಾಗಿ ಇಡೀ ದಕ್ಷಿಣ ಭಾರತದ ಸಿನಿರಂಗ ವಿಷಾದ ವ್ಯಕ್ತಪಡಿಸಿದೆ.

ದಕ್ಷಿಣ ಭಾರತದ ಸಿನಿರಂಗದಲ್ಲಿ ಖ್ಯಾತ ನಟಿಯಾಗಿ ಗುರ್ತಿಸಿಕೊಂಡಿದ್ದ ಮೀನಾ ಪತಿ ವಿದ್ಯಾಸಾಗರ್‍ ಕೆಲವು ದಿನಗಳಿಂದ  ಪೋಸ್ಟ್ ಕೋವಿಡ್ ಸಮಸ್ಯೆಗಳಿಂದ ಸಂಕಷ್ಟಪಡುತ್ತಿದ್ದರಂತೆ. ಈ ಕಾರಣಕ್ಕಾಗಿ ಆತನನ್ನು ಚೆನೈ ನಲ್ಲಿರುವ ಎಂ.ಜಿ.ಎಂ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರಂತೆ. ಆಸ್ಪತ್ರೆಯಲ್ಲಿ ವೈದ್ಯರೂ ಸಹ ಚಿಕಿತ್ಸೆಗೆ ಎಲ್ಲಾ ಸಿದ್ದತೆಗಳನ್ನು ಸಹ ಮಾಡಿಕೊಂಡಿದ್ದರಂತೆ. ಆದರೆ ವಿದ್ಯಾಸಾಗರ್‍ ಆರೋಗ್ಯ ಸ್ಥಿತಿ ತುಂಬಾನೆ ಕೆಟ್ಟಿದ್ದ ಹಿನ್ನೆಲೆಯಲ್ಲಿ ಆತ ಆಸ್ಪತ್ರೆಯಲ್ಲೇ ಕೊನೆಯ ಉಸಿರನ್ನು ಎಳೆದಿದ್ದರೆ. ಆತನನ್ನು ರಕ್ಷಣೆ ಮಾಡಲು ವೈದ್ಯರು ತುಂಬಾನೆ ಪ್ರಯತ್ನ ನಡೆಸಿದ್ದರಂತೆ. ಆದರೆ ವಿದ್ಯಾಸಾಗರ್‍ ಗೆ ಮತ್ತೊಮ್ಮೆ ಕೋವಿಡ್ ಬಂದಿದ್ದರಿಂದ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಕೆಲವೊಂದು ಮೂಲಗಳ ಪ್ರಕಾರ ನಟಿ ಮೀನಾ ಪತಿ ವಿದ್ಯಾಸಾಗರ್‍ ಕೆಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರಂತೆ. ಇದೇ ಸಮಯದಲ್ಲಿ ಆತ ಕೋವಿಡ್ ಗೆ ಗುರಿಯಾಗಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ಆತ ಗುಣಮುಖರಾಗಿದ್ದಾರೆ. ಬಳಿಕವೂ ಆತನ ಆರೋಗ್ಯ ಮಾತ್ರ ಕ್ಷೀಣಿಸಿದೆ. ಉಸಿರಾಟದ ಸಮಸ್ಯೆ ಮತಷ್ಟು ತೀವ್ರವಾಗಿದೆ. ಇದರಿಂದಾಗಿ ವೈದ್ಯರೂ ಸಹ ಶಸ್ತ್ರಚಿಕಿತ್ಸೆಗೆ ಸೂಚನೆ ನೀಡಿದ್ದರಂತೆ. ಆದರೆ ಆತನಿಗೆ ಲಂಗ್ಸ್ ಟ್ರಾನ್ಸಪ್ಲಾಂಟೇಷನ್ ಮಾಡಲು ಲಂಗ್ಸ್ ದೊರೆಯಲಿಲ್ಲವಂತೆ. ಇದರಿಂದಾಗಿ ದಿನೇ ದಿನೇ ಆತನ ಆರೋಗ್ಯ ಕ್ಷೀಣಿಸಿದ್ದು, ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಮೂಲಕ ಉದ್ಯಮಿ ವಿದ್ಯಾಸಾಗರ್‍. ಕಳೆದ 2009 ರಲ್ಲಿ ಮೀನಾ ರವರನ್ನು ಮದುವೆಯಾದರು. ಇವರಿಂದ ನೈನಿಕಾ ಎಂಬ ಮಗಳಿದ್ದಾರೆ. ತಮಿಳಿನ ಸ್ಟಾರ್‍ ನಟ ವಿಜಯ್ ಅಭಿನಯದ ತೆರಿ ಎಂಬ ಸಿನೆಮಾದಲ್ಲಿ ವಿಜಯ್ ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ವಿದ್ಯಾಸಾಗರ್‍ ಮರಣದ ವಿಚಾರ ತಿಳಿಯುತ್ತಿದ್ದಂತೆ ಸಿನಿರಂಗದ ಎಲ್ಲರೂ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾಸಾಗರ್‍ ಮರಣದಿಂದ ಅವರ ಇಡೀ ಕುಟುಂಬ ಶೋಕದ ಮಡುಗಿನಲ್ಲಿ ತುಂಬಿದೆ. ಅನೇಕರು ಮೀನಾ ರವರಿಗೆ ಸಾಂತ್ವನ ಸಹ ಹೇಳಿದ್ದಾರೆ ಎನ್ನಲಾಗುತ್ತಿದೆ.

Previous articleಮಗು ಆಗೋಕ್ಕಿಂತ ಮುಂಚೆಯೇ ವಿದೇಶದಲ್ಲಿ ಶಾಪಿಂಗ್ ಹೊರಟ ಬಾಲಿವುಡ್ ನಟ..!
Next articleಟಾಲಿವುಡ್ ಮೆಗಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮೂರನೇ ಮದುವೆಯಾಗಲಿದ್ದಾರಂತೆ?