Saturday, May 21, 2022
HomeFilm Newsಮೆಗಾಸ್ಟಾರ್‍ ಚಿರು ಕುರಿತು ನಟ ಕೋಟಾ ಶ್ರೀನಿವಾಸರಾವ್ ಸಂಚಲನಾತ್ಮಕ ಹೇಳಿಕೆಗಳು…

ಮೆಗಾಸ್ಟಾರ್‍ ಚಿರು ಕುರಿತು ನಟ ಕೋಟಾ ಶ್ರೀನಿವಾಸರಾವ್ ಸಂಚಲನಾತ್ಮಕ ಹೇಳಿಕೆಗಳು…

ಟಾಲಿವುಡ್ ನ ಮೆಗಾಸ್ಟಾರ್‍ ಚಿರಂಜೀವಿ ಕುರಿತು ನಟ ಕೋಟಾ ಶ್ರೀನಿವಾಸರಾವ್ ರವರು ವಿಮರ್ಶಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮದೇ ಆದ ಶೈಲಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಮೇ ದಿನಾಚರಣೆ ಅಂಗವಾಗಿ ಚಿರಂಜೀವಿ ಕಾರ್ಮಿಕರಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದ್ದರು. ಈ ಕುರಿತು ಕೋಟಾ ಶ್ರೀನಿವಾಸ ರಾವ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಮೇ ದಿನಾಚರಣೆ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ನಟ ಮೆಗಾಸ್ಟಾರ್‍ ಚಿರಂಜೀವಿ ಕಾರ್ಮಿಕರಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಈ ಹೇಳಿಕೆಗೆ ಹಿರಿಯ ನಟ ಕೋಟಾ ಶ್ರೀನಿವಾಸರಾವ್ ರವರು ತಮ್ಮದೇ ಆದ ಶೈಲಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಕಾರ್ಮಿಕರಿಗೆ ಬೇಕಾಗಿರುವುದು ಹೊಟ್ಟೆ ತುಂಬಾ ಊಟ. ಮೊದಲು ಆ ಕೆಲಸ ಮಾಡಿ. ಚಿರಂಜೀವಿ ಕಟ್ಟುವಂತಹ ಆಸ್ಪತ್ರೆಗೆ ಯಾರು ಬರುತ್ತಾರೆ. ಕೃಷ್ಣಾನಗರದಲ್ಲಿ ಅದೆಷ್ಟೋ ಮಂದಿ ಊಟವಿಲ್ಲದೇ ಪರದಾಡುತ್ತಿದ್ದಾರೆ. ಅವರ ಬಳಿ ಹಣವಿದ್ದರೇ ಅಪೊಲೋ ಆಸ್ಪತ್ರೆಗೆ ಹೋಗುತ್ತಾರೆ ಎಂದು ವ್ಯಂಗವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಕೋಟಿ ಕೋಟಿ ಪಾರಿತೋಷಕ ಪಡೆಯುವ ಚಿರಂಜೀವಿ ಅದು ಹೇಗೆ ಚಿತ್ರರಂಗದ ಕಾರ್ಮಿಕನಾಗಲು ಸಾಧ್ಯ ಎಂಬ ಪ್ರಶ್ನೆ ಸಹ ಮಾಡಿದ್ದಾರೆ.

ಇನ್ನೂ ಕಾರ್ಮಿಕ ಎನ್ನುವ ವ್ಯಕ್ತಿ ಎಂದಾದರೂ ಯಾರಿಗಾದರೂ ಸಹಾಯ ಮಾಡಿದ್ದಾರಾ? ಆತ ನಟಿಸುವ ಸಿನೆಮಾಗಳಲ್ಲಿ ಯಾರಿಗಾದರೂ ಅವಕಾಶ ಕೊಡಿಸಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ನಾನು ಅನೇಕ ಮಂದಿಗೆ ಸಹಾಯ ಮಾಡಿದ್ದೇನೆ. ಯಾರಾದರೂ ನನ್ನ ಮನೆಗೆ ಸಹಾಯ ಕೋರಿ ಬಂದರೇ ಸಹಾಯ ಮಾಡಿ ಕಳುಹಿಸಿದ್ದೇನೆ. ಕಷ್ಟದಲ್ಲಿರುವ ಕಾರ್ಮಿಕರಿಗಾಗಿ ನಾನು ಐದು ಲಕ್ಷದ ವರೆಗೂ ಸಹಾಯ ಮಾಡಿದ್ದೇನೆ. ಆದರೆ ನಾನು ಅದು ಮಾಡುತ್ತೇನೆ ಇದು ಮಾಡುತ್ತೇನೆ ಎಂಬ ಅಂತೆ ಕಂತೆಗಳನ್ನು ನಾನು ಹೇಳುವುದಿಲ್ಲ. ಈ ಹಿಂದೆ ಅನೇಕ ಬಾರಿ ಮಾ ಸಂಸ್ಥೆಗೆ ಸಾಕಷ್ಟು ಬಾರಿ ಆರ್ಥಿಕ ಸಹಾಯ ಮಾಡಿದ್ದೇನೆ. ಈ ಎಲ್ಲಾ ಕಾಮೆಂಟ್ಸ್ ಮಾಡಿದರೂ ಸಹ ಚಿರಂಜೀವಿ ಯವರ ಮೇಲಿನ ಗೌರವ ಹಾಗೆ ಇರುತ್ತದೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದಿದ್ದಾರೆ.

- Advertisement -

You May Like

More