Kannada Serials

ಇಂದಿನಿಂದ ಹೊಚ್ಚ ಹೊಸ ಕನ್ನಡ ಧಾರಾವಾಹಿ ‘ಸೀತೆಯ ರಾಮ’ ಶುರು ಆಗಲಿದೆ! ವಿಡಿಯೋ ನೋಡಿ

ಲಾಕ್ ಡೌನ್ ಶುರುವಾಗಿ ಕನ್ನಡ ಧಾರಾವಾಹಿಯ ಚಿತ್ರೀಕರಣಗಳು ಸ್ಥಗಿತವಾದ ನಂತರ ವೀಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ಹಿಂದಿ ಭಾಷೆಯ ಕೆಲವು ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಆರಂಭಿಸಲಾಗಿತ್ತು. ಡಬ್ಬಿಂಗ್ ಧಾರಾವಾಹಿಗಳು ಕನ್ನಡದಲ್ಲಿ ಜನಪ್ರಿಯತೆ ಪಡೆದವು. ಅದರಲ್ಲೂ ಪೌರಾಣಿಕ ಧಾರಾವಾಹಿಗಳು ಕನ್ನಡದ ಕಿರುತೆರೆ ಪ್ರಿಯರನ್ನು ಆಕರ್ಷಿಸಿದವು. ವಿಶೇಷವಾಗಿ ಮಹಾಭಾರತ ಮತ್ತು ರಾಧಾಕೃಷ್ಣ ಧಾರಾವಾಹಿಗಳು ಜನರನ್ನು ಆಕರ್ಷಿಸಿ ಒಳ್ಳೆಯ ಟಿ.ಆರ್.ಪಿ ಪಡೆದವು. ಹಾಗಾಗಿ ಈಗ ಮತ್ತೊಂದು ಡಬ್ಬಿಂಗ್ ಧಾರಾವಾಹಿಯನ್ನು ಪ್ರಸಾರ ಮಾಡಲು ನಿರ್ಧರಿಸಿದೆ ಸುವರ್ಣ. ಈ ಧಾರಾವಾಹಿಯ ಪ್ರೊಮೊ ವಿಡಿಯೋ, ಈ ಕೆಳಗಿನ ವಿಡಿಯೋ ನೋಡಿ

ಅದುವೇ ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯ ಕನ್ನಡ ಅವತರಣಿಕೆ “ಸೀತೆಯ ರಾಮ..”. ಈ ಧಾರಾವಾಹಿ ನಿನ್ನೆಯಿಂದ ರಾತ್ರಿ 8:30 ಕ್ಕೆ ಆರಂಭವಾಗಿದೆ. ಈ ಧಾರಾವಾಹಿಯಲ್ಲಿನ ಕಥೆಯು ಸೀತೆಯ ದೃಷ್ಟಿಕೋನದಿಂದ ಹೆಣೆಯಲಾಗಿದೆ. ಸೀತೆಯ ಪಾತ್ರದಲ್ಲಿ ನಟಿ ಮದಿರಾಕ್ಷಿ ನಟಿಸಿದ್ದಾರೆ. ರಾಮನ ಪಾತ್ರದಲ್ಲಿ ಆಶಿಶ್ ಶರ್ಮ ನಟಿಸಿದ್ದಾರೆ. ರಾಮಭಂಟ ಹನುಮನ ಪಾತ್ರದಲ್ಲಿ ದಾನಿಷ್ ಅಕ್ತರ್ ಸೈಫಿ ನಟಿಸಿದ್ದಾರೆ. ಇನ್ನು ರಾವಣನ ಪಾತ್ರದಲ್ಲಿ ಕನ್ನಡಿಗರ ಮೆಚ್ಚಿನ ನಟ ಜೆಕೆ ಅದ್ಭುತವಾಗಿ ಅಭಿನಯಿಸಿದ್ದಾರೆ.

ಈ ಧಾರಾವಾಹಿಯಲ್ಲಿ ಸೀತೆಯ ಬಾಲ್ಯ ಮತ್ತು ರಾಮನ ಬಾಲ್ಯದ ಜೊತೆ ಮಿಥಿಲಾ ನಗರದ ಪರಿಚಯ ಮಾಡಿಕೊಡಲಾಗುತ್ತದೆ. ನಂತರ ಅಯೋಧ್ಯೆಯ ನಂಟಿನ ಬಗ್ಗೆ ಸೀತೆಯ ರಾಮ ಧಾರಾವಾಹಿಯಲ್ಲಿ ಅನಾವರಣವಾಗಲಿದೆ. ಹಾಗೂ ಅಹಲ್ಯಾ ಶಾಪ ವಿಮೋಚನೆ, ಸೀತಾ ಸ್ವಯಂವರ, ಸೀತಾ ರಾಮರ ವನವಾಸ, ಲಂಕಾಪತಿ ರಾವಣನ ಅಟ್ಟಹಾಸ, ಸೀತಾಪಹರಣ, ರಾಮ ಬಂಟ ಹನುಮಂತನ ಕಥೆ, ವಾಲಿ ವಧೆ, ಲಂಕಾ ದಹನ ಕೊನೆಯದಾಗಿ ರಾವಣನ ಸಂಹಾರ… ಇವೆಲ್ಲವನ್ನು ಸೀತೆಯ ದೃಷ್ಟಿಯಲ್ಲಿ ತೋರಿಸಲಾಗಿದೆ. ಸೀತೆಯ ರಾಮ ಧಾರಾವಾಹಿಯಲ್ಲಿ ಪ್ರತಿ ಪಾತ್ರಕ್ಕು ಒತ್ತು ನೀಡಿ ತೋರಿಸಲಾಗಿದೆ. ಹಾಗೂ ಹಲವಾರು ಪುಸ್ತಕಗಳಲ್ಲಿ ಉಲ್ಲೇಖವಾಗದಿರುವ ರಾಮನ ಹಿರಿಯ ಅಕ್ಕ ‘ಶಾಂತ’ಳ ಕಥೆಯನ್ನು ಸಹ ಇಲ್ಲಿ ತೋರಿಸಲಾಗಿದೆಯಂತೆ.

Trending

To Top