Karnataka

ಸರಿಗಮಪ ಖ್ಯಾತಿಯ ಸುಬ್ರಮಣಿ ಅವರ ಪತ್ನಿ ಜ್ಯೋತಿ ಸಾವಿಗೆ ನಿಜವಾದ ಕಾರಣ ಏನು ?

ಕೊರೋನ ನಿರ್ಧಯಿಯಾಗಿಬಿಟ್ಟಿದ್ದೆ ಹಲವರ ಪ್ರಾಣವನ್ನ ಬಲಿ ತೆಗೆದುಕೊಳ್ಳುತ್ತಿದೆ.ಅದರಲ್ಲೂ ಇತ್ತಿಚೆಗಂತೂ ಹೆಚ್ಚಾಗಿ ಯುವ ಜನತೆಯೇ ಕೊರೋನ ಗೆ ಪ್ರಾಣವನ್ನ ಬಿಡುತ್ತಿದ್ದಾರೆ.ಕೇವಲ 30 ವರ್ಷ 35 ವರ್ಷ 40 ವರ್ಷ ಆಸುಪಾಸಿನವರು ಕೊರೋನಾಗೆ ಬಲಿಯಾಗುತ್ತಿದ್ದಾರೆ.ಇದೀಗ ಸಿಂಗರ್ ಆಗಿರುವಂತಹ, ಹಾಗೆ ಸ ರಿ ಗ ಮ ಪ ಷೋ ನ ಮೂಲಕ ಖ್ಯಾತಿಯನ್ನು ಗಳಿಸಿದಂತಹ ಸುಬ್ರಮಣಿ ಅವರ ಪತ್ನಿಯು ಸಹ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಸುಬ್ರಮಣಿ ಅವರ ಪತ್ನಿಗೆ ಒಂದು ವಾರದ ಹಿಂದೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿತ್ತು.ಆರಂಭದಲ್ಲಿ ಹೋಮ್ ಐಸೋಲೇಶನ್ ಗೆ ಒಳಗಾಗುತ್ತಾರೆ.ಆದರೆ ಆರೋಗ್ಯ ಸ್ಥಿತಿ ಇನ್ನಷ್ಟು ಉಲ್ಬಣಗೊಂಡಂತ ಕಾರಣಕ್ಕಾಗಿ ಅಸ್ಪತ್ರೆಗಾಗಿ ಅಲೆದಾಡುತ್ತಾರೆ.ಅಂತಿಮವಾಗಿ ಅವರಿಗೆ ಹೊಸಕೋಟೆಯಲ್ಲಿರುವ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತದೆ, ಅಲ್ಲಿ ಅವರ ಪತ್ನಿಯನ್ನ ಚಿಕಿತ್ಸೆಗೊಸ್ಕರ ದಾಕಲಿಸುತ್ತಾರೆ.ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು, ಆರೋಗ್ಯ ಸ್ಥಿತಿ ಇನಷ್ಟು ಹದಗೆಟ್ಟಿತ್ತು.ಅಂತಿಮವಾಗಿ ಸುಬ್ರಮಣಿ ಅವರ ಪತ್ನಿ ಕೊರೋನಾಗೆ ಬಲಿಯಾಗಿದ್ದಾರೆ ಎನ್ನಲಾಗಿತ್ತು.

ಆದರೆ ಈಗ ಜ್ಯೋತಿ ಅವರ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜ್ಯೋತಿ ಅವರು ಸತ್ತಿದ್ದು, ಕೊರೊನಾ ಇಂದ ಅಲ್ಲ, ಬದಲಾಗಿ ಕೌಟುಂಬಿಕ ಕಲಹ ಮತ್ತು ಮಾನಸಿಕ ಖಿನ್ನತೆಯಿಂದ ಎಂದು ಹೇಳಲಾಗುತ್ತಿದೆ.

Trending

To Top