Kannada Reality Shows

ಸರಿಗಮಪ ಖ್ಯಾತಿಯ ರತ್ನಮ್ಮ ಮಂಜಮ್ಮ ಅವರ ಈಗಿನ ಕಷ್ಟದ ಪರಿಸ್ಥಿತಿ ಹೇಗಿದೆ ನೋಡಿ

ಕಳೆದ ಬಾರಿಯ ಸ ರಿ ಗ ಮ ಪ ಸೀಸನ್ 17ರಲ್ಲಿ ಎರಡು ಮುತ್ತುಗಳನ್ನ ಕರ್ನಾಟಕಕ್ಕೆ ಪರಿಚಯಿಸಿತ್ತು ಜ್ಹೀ ಕನ್ನಡ ಅವರು ಮಧುಗಿರಿಯ ರತ್ನಮ್ಮ ಮತ್ತು ಮಂಜಮ್ಮ .ಈ ಚೀನಾದ ಮಹಾಮಾರಿ ವಕ್ಕರಿಸುವ ಮುಂಚೆ ತಮ್ಮ ಕಂಠ ಸಿರಿಯಿಂದ ಇಡೀ ಕರ್ನಾಟಕವನ್ನ ರಂಜಿಸಿದ್ದರು.ಆದರೆ ಕೊರೋನ ಬಂದು ಲಾಕ್ ಡೌನ್ ಆದ ಕಾರಣ ಈ ಅಂಧ ಪ್ರತಿಭೆಗಳ ಗೊಳನ್ನ ಕೇಳೋಕೆ ಯಾರು ಇಲ್ಲ.

ರತ್ನಮ್ಮ ಮತ್ತು ಮಂಜಮ್ಮ ಜೀವನದಲ್ಲಿ ಅನುಭವಿಸಿದ ನೋವು ಯಾರಿಗೂ ಬೇಡ ಮನೆಯಿಲ್ಲದೆ ಬೀದಿಯಲ್ಲಿದ್ದ ಇವರಿಗೆ ಇತಿಚಿಗಷ್ಟೇ ನಟ ಜಗ್ಗೇಶ್ ಮನೆಯನ್ನ ಕಟ್ಟಿಸಿಕೊಟ್ಟರು.ಇನ್ನು ಅವರಿಗೆ ಯಾವುದೇ ತೊಂದರೆ ಇಲ್ಲ ಎಂದುಕೊಂಡಿದ್ದರೆ, ಈಗ ಮತ್ತೊಂದು ಗಂಡಾಂತರ ರತ್ನಮ್ಮ ಮತ್ತು ಮಂಜಮ್ಮನಿಗೆ ಎದುರಾಗಿದೆ.

ಹಾಡು ಹಾಡಿ ಜೀವನ ಸಾಗಿಸುತ್ತಿದ್ದ ಈ ಅಂಧ ಗಾಯಕರಿಗೆ ದಿನನಿತ್ಯ ಒಬ್ಬ ವ್ಯಕ್ತಿ ಕರೆಮಾಡಿ ಕಿರುಕುಳ ನೀಡುತ್ತಿದ್ದಾನೆ.ನಿಮ್ಮನ್ನ ನಾನು ಮದುವೆಯಾಗುತ್ತೇನೆ ನಿಮಗೆ ಬಾಳು ಕೊಡುತ್ತೀನಿ ಎಂದು ಟಾರ್ಚರ್ ಕೊಡುತ್ತಿದ್ದಾನೆ.ಇದಕ್ಕೆ ಒಪ್ಪದ ರತ್ನಮ್ಮ ಮತ್ತು ಮಂಜಮ್ಮ ಗೆ ದಿನನಿತ್ಯ 20-30 ಬಾರಿ ಕರೆಮಾಡಿ ಚಿತ್ರಹಿಂಸೆ ನೀಡುತ್ತಿದ್ದಾನೆ.ಕೆಟ್ಟ ಕೆಟ್ಟ ಬಾಷೆಯಲ್ಲಿ ಮಾತನಾಡಿ ಹಲವಾರರಿಗೆ ಕಾನ್ಫರೆನ್ಸ್ ಹಾಕಿ ಅವರು ನರಳಾಡುವುದನ್ನ ನೋಡಿ ಆನಂದ ಪಡುತ್ತಿದ್ದಾನೆ.

Trending

To Top