Kannada Cinema News

ಕ್ಯಾ#ನ್ಸರ್ ಇಂದ ಆಸ್ಪತ್ರೆ ದಾಖಲಾದ ಸಂಜಯ್ ದತ್ ಬಗ್ಗೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು!

ಭಾರತ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದ ಚಿತ್ರ ಕೆಜಿಎಫ್ ಚಾಪ್ಟರ್ 1. ಸ್ಯಾಂಡಲ್ ವುಡ್ ಪ್ರತಿಭೆಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸಿನ ಕೂಸು ಈ ಸಿನಿಮಾ. ಇದೊಂದು ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರೂ, ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹಿಂದೆಂದೂ ಕಂಡಿರದ ಕೇಳಿರದ ಕುತೂಹಲಭರಿತ ಕಥಾ ಹಂದರ, ಅದ್ಭುತವಾದ ಮೇಕಿಂಗ್, ರೋಮಾಂಚನ ಗೊಳಿಸುವಂತಹ ಬಿಜಿಎಂ ಗಳು, ಯಶ್, ಹಾಗೂ ವಿಲನ್ ಗಳ ಅತ್ಯದ್ಭುತ ಅಭಿನಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು ಕೆಜಿಎಫ್ ಚಾಪ್ಟರ್ 1.

2018 ರ ಸಾಲಿನ ಬಹುತೇಕ ಎಲ್ಲಾ ಅವಾರ್ಡ್ ಗಳನ್ನು ಬಾಚಿಕೊಂಡಿತು. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಕೂಡ ತೆರೆಕಂಡ ಕೆಜಿಎಫ್, ಎಲ್ಲಾ ಭಾಷೆಗಳನ್ನು ಯಶಸ್ಸು ಕಂಡಿತು. ಈಗಾಗಲೇ ಕೆಜಿಎಫ್2 ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನು 25 ದಿನಗಳ ಚಿತ್ರೀಕರಣ ಮಾತ್ರ ಉಳಿದಿದೆ. ಲಾಕ್ ಡೌನ್ ಇಲ್ಲದೆ ಹೋಗಿ, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಕೆಜಿಎಫ್2 ಸಿನಿಮಾ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಬೇಕಿತ್ತು. ಲಾಕ್ ಡೌನ್ ಸಡಿಲಿಕೆ ಆದ ನಂತರ, ಆಗಸ್ಟ್ 15ರಿಂದ ಕೆಜಿಎಫ್2 ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ ಕೆಜಿಎಫ್2 ತಂಡಕ್ಕೆ ಮತ್ತೊಂದು ಆತಂಕ ಎದುರಾಗಿದೆ.

ಅಧೀರನ ಪಾತ್ರ ನಿರ್ವಹಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಲಂ#ಗ್ ಕ್ಯಾ#ನ್ಸರ್ ಇರುವ ವಿಷಯ ತಿಳಿದುಬಂದಿದ್ದು, ಚಿಕಿ#ತ್ಸೆ#ಗಾಗಿ ಅವರು ವಿದೇಶಕ್ಕೆ ತೆರಳಲಿದ್ದಾರೆ. ಹಾಗಾಗಿ ಅಧೀರ ಇಲ್ಲದೆ ಶೂಟಿಂಗ್ ಯಾವ ರೀತಿ ನಡೆಯಲಿದೆ ಎಂಬ ಕುತೂಹಲ ಮತ್ತು ಆತಂಕ ಎಲ್ಲರಿಗೂ ಕಾಡಿದೆ. ಇದೀಗ, ರಾಕಿ ಭಾಯ್ ನ ಒಂದು ಸಾಹಸ ದೃಶ್ಯ ಮತ್ತು ಅಧೀರ ರಾಕಿ ನಡುವಿನ ದೃಶ್ಯಗಳು ಬಾಕಿ ಉಳಿದಿದ್ದವು. ಆದರೆ ಸಂಜಯ್ ದತ್ ಅವರ ಆರೋಗ್ಯದ ಸ್ಥಿತಿ ಹೀಗಿರುವ ಕಾರಣ, ನಿರ್ದೇಶಕ ಪ್ರಶಾಂತ್ ನೀಲ್ ಅವರು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದಾರೆ.

ಅದೇನೆಂದರೆ, ಆಗಸ್ಟ್ 25ರಿಂದ ಶೂಟಿಂಗ್ ಆರಂಭವಾಗುವ ಸೂಚನೆ ಇದ್ದು, ಸಂಜಯ್ ದತ್ ಅವರ ಭಾಗದ ಚಿತ್ರೀಕರಣವನ್ನು ಹೊರತುಪಡಿಸಿ ಬೇರೆ ದೃಶ್ಯಗಳನ್ನು ಚಿತ್ರಿಸಲಾಗುತ್ತದೆ. ಆದಷ್ಟು ಬೇಗ ಸಂಜಯ್ ದತ್ ಅವರು ಗುಣಮುಖರಾಗಿ ಬಂದರೆ ಅವರೇ ಅಧೀರನ ಪಾತ್ರದಲ್ಲಿ ನಟಿಸಲಿದ್ದಾರೆ. ಏನಾದರೂ ಸಂಜಯ್ ದತ್ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಾಗದೆ ಇರುವಂತಹ ಸಂದರ್ಭ ಇದ್ದಲ್ಲಿ, ಅವರ ಚಹರೆಯ ಡ್ಯೂಪ್ ಅನ್ನು ಬಳಸುವುದಾಗಿ ನಿರ್ದೇಶಕರು ತೀರ್ಮಾನ ಮಾಡಿದ್ದಾರೆ. ಇದಕ್ಕೆ ಸಂಜಯ್ ದತ್ ಸಹ ಒಪ್ಪಿದ್ದಾರೆ ಎನ್ನಲಾಗಿದೆ.

Trending

To Top